ಸರ್ಕಾರಗಳಿಗೆ ಕೆಂಪೇಗೌಡರ ಆಡಳಿತ ಮಾದರಿ: ಸಚ್ಚಿದಾನಂದ

KannadaprabhaNewsNetwork |  
Published : Jun 29, 2025, 01:32 AM IST
28ಕೆಎಂಎನ್‌ಡಿ-7ಮಂಡ್ಯದ ಕಾರಸವಾಡಿ ರಸ್ತೆಯ ಅರಳಿಕಟ್ಟೆ ಸರ್ಕಲ್‌ನಲ್ಲಿ ಜಿಲ್ಲಾ ಒಕ್ಕಲಿಗರ ಸಂಘ, ಅರಳಿ ಕಟ್ಟೆ ಸಂಘ, ಕನ್ನಡ ಪರ ಸಂಘಟನೆಗಳ ವತಿಯಿಂದ  ಕೆಂಪೇಗೌಡ ಜಯಂತಿ ಆಚರಿಸಲಾಯಿತು.  | Kannada Prabha

ಸಾರಾಂಶ

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಗಡಿಭಾಗವಾದ ಈ ಅರಳಿ ಕಟ್ಟೆ ಸರ್ಕಲ್‌ನಲ್ಲಿ ನಾಡಪ್ರಭು ಕೆಂಪೇಗೌಡ ಅವರ ಭವ್ಯವಾದ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸೋಣ. ಆ ಮೂಲಕ ಕೆಂಪೇಗೌಡರನ್ನು ನೆನಪಿಸಿಕೊಳ್ಳುವ ಕೆಲಸ ಮಾಡೋಣ.

ಕನ್ನಡಪ್ರಭ ವಾರ್ತೆ ಮಂಡ್ಯ

ನಾಡಪ್ರಭು ಕೆಂಪೇಗೌಡರ ಇಂದಿನ ಸರ್ಕಾರಗಳಿಗೆ ಮಾದರಿಯಾಗಿದೆ. ಅವರ ಆದರ್ಶಗಳು, ದೂರದೃಷ್ಟಿ ರಾಜಕಾರಣಿಗಳಿಗೆ ಮಾರ್ಗದರ್ಶಕವಾಗಿವೆ ಎಂದು ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ ಅಭಿಪ್ರಾಯಪಟ್ಟರು.

ನಗರದ ಕಾರಸವಾಡಿ ರಸ್ತೆಯ ಅರಳಿಕಟ್ಟೆ ಸರ್ಕಲ್‌ನಲ್ಲಿ ಜಿಲ್ಲಾ ಒಕ್ಕಲಿಗರ ಸಂಘ, ಅರಳಿ ಕಟ್ಟೆ ಸಂಘ, ಕನ್ನಡ ಪರ ಸಂಘಟನೆಗಳ ವತಿಯಿಂದ ಶುಕ್ರವಾರ ನಡೆದ ನಾಡಪ್ರಭು ಕೆಂಪೇಗೌಡ ಅವರ ೫೧೬ನೇ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಗಡಿಭಾಗವಾದ ಈ ಅರಳಿ ಕಟ್ಟೆ ಸರ್ಕಲ್‌ನಲ್ಲಿ ನಾಡಪ್ರಭು ಕೆಂಪೇಗೌಡ ಅವರ ಭವ್ಯವಾದ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸೋಣ. ಆ ಮೂಲಕ ಕೆಂಪೇಗೌಡರನ್ನು ನೆನಪಿಸಿಕೊಳ್ಳುವ ಕೆಲಸ ಮಾಡೋಣ ಎಂದು ಮನವಿ ಮಾಡಿದರು.

ಒಕ್ಕಲಿಗರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗೌಡಯ್ಯನದೊಡ್ಡಿ ತಿಮ್ಮೇಗೌಡ ಮಾತನಾಡಿ, ಕೆರೆ ಕಟ್ಟೆಗಳನ್ನು ನಿರ್ಮಿಸಿ ಮಾದರಿಯಾದ ಕೆಂಪೇಗೌಡರು ಉತ್ತಮ ಆಡಳಿತ ನಡೆಸಿದ ಮಹಾನ್ ನಾಯಕರಾಗಿ ಹೊರಹೊಮ್ಮಿದ್ದರು, ಅವರ ಸಾಮಾಜಿಕ ಕಳಕಳಿಯ ಕೆಲಸಗಳು ಇಂದಿಗೂ ಬೆಂಗಳೂರಿನಲ್ಲಿ ಸ್ಮರಿಸುವಂತೆ ಮಾಡಿವೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಸದಸ್ಯ ಶಿವಪ್ರಕಾಶ್‌ಬಾಬು, ಮುಖಂಡರಾದ ಬೀರೇಶ್, ವೀರಭದ್ರ, ಕೇಶವ್, ಬಸವರಾಜು, ಕಲ್ಲಹಳ್ಳಿ ಶ್ರೀಧರ್, ಮಧುಸೂದನ್, ಪುಟ್ಟಸ್ವಾಮಿ, ಲಿಂಗಣ್ಣ, ಸೌಭಾಗ್ಯ ಭಾಗವಹಿಸಿದ್ದರು.

ಇಂದು ನಿಖಿಲ್ ಸದಸ್ಯತ್ವ ನೋಂದಣಿಗೆ ಚಾಲನೆ

ಮದ್ದೂರು: ವಿಧಾನಸಭಾ ಕ್ಷೇತ್ರದ ಭಾರತೀನಗರದ ಡಿ.ಸಿ.ತಮ್ಮಣ್ಣ ಕಾಲೇಜಿನ ಆವರಣದಲ್ಲಿ ಜೂ.29 ರಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಜನರೊಂದಿಗೆ ಜನತಾದಳ ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಸಾವಿರಾರು ಜೆಡಿಎಸ್ ಕಾರ್ಯಕರ್ತರೊಂದಿಗೆ ಬೃಹತ್ ಬೈಕ್ ರ್ಯಾಲಿ ಮುಖಾಂತರ ಮದ್ದೂರು ಕ್ಷೇತ್ರದ ಗಡಿ ಭಾಗವಾದ ನಿಡಘಟ್ಟ-ಶಿವಪುರ-ಕೊಲ್ಲಿ ಸರ್ಕಲ್-ಟಿ.ಬಿ ಸರ್ಕಲ್-ಡಿ.ಎ ಕೆರೆ ಗೇಟ್ ಮೂಲಕ ಭಾರತೀನಗರದ ಡಿ.ಸಿ. ತಮ್ಮಣ್ಣ ಕಾಲೇಜು ಆವರಣಕ್ಕೆ ನಿಖಿಲ್ ಅವರನ್ನು ಕರೆತರಲಾಗುವುದು. ನಂತರ ಬೃಹತ್ ಸದಸ್ಯತ್ವ ನೋಂದಣಿ ಅಭಿಯಾನ ಜರುಗಲಿದೆ. ಕ್ಷೇತ್ರ ವ್ಯಾಪ್ತಿಯ ಸಮಸ್ತ ಜೆಡಿಎಸ್ ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು ಆಗಮಿಸಲಿದ್ದಾರೆ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ