ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಕೊಪ್ಪ ಸರ್ಕಾರಿ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ಕೆಂಪೇಗೌಡರ ಜಯಂತಿಯಲ್ಲಿ ಮಾತನಾಡಿ, ವಿಜಯನಗರ ಅರಸರ ರಾಜ್ಯಪಾಲರಾಗಿ ನಂತರ ಬೆಂಗಳೂರನ್ನೇ ಆಳಿದ ಕೆಂಪೇಗೌಡರು ಒಕ್ಕಲಿಗ ಸಮುದಾಯದವರಾದರೂ ಕೂಡ ಎಲ್ಲ ಜನಾಂಗಗಳ ಅಭಿವೃದ್ಧಿಗೆ ಶ್ರಮಿಸಿದ್ದು ಅವರ ವ್ಯಕ್ತಿತ್ವವನ್ನು ಬಿಂಬಿಸುತ್ತದೆ ಎಂದು ಬಣ್ಣಿಸಿದರು.
ಒಂದು ದಿನ ಬೆಂಗಳೂರು ಬೃಹದಾಕಾರವಾಗಿ ಬೆಳೆಯಬಹುದು ಎಂಬ ಆಶಯದಿಂದ ಬೆಂಗಳೂರಿನ ನಾಲ್ಕು ಕಡೆ ನಾಲ್ಕು ದ್ವಾರಗಳ ನಿರ್ಮಿಸಿದ್ದರು. ಇಂದು ಬೆಂಗಳೂರು ಎಲ್ಲ ಜನಾಂಗಗಳ ಹೆಚ್ಚಿನ ವಾಸಸ್ಥಾನವಾಗಿದೆ ಎಂದರು.ಅನೇಕ ಸಾಮಾಜಿಕ ಸುಧಾರಣೆಗಳಲ್ಲಿ ತೊಡಗಿಕೊಂಡ ಇವರು ಅಂದಿನ ಕಾಲದಲ್ಲಿ ಅವಿವಾಹಿತ ಹೆಣ್ಣು ಮಕ್ಕಳಿಗೆ ಕೈ ಬೆರಳುಗಳನ್ನು ಕತ್ತರಿಸುವ ಅನಿಷ್ಟ ಪದ್ಧತಿಯನ್ನು ನಿಲ್ಲಿಸಿದ್ದು ದೊಡ್ಡ ಸಾಧನೆ. ಕೆರೆಕಟ್ಟೆಗಳ ನಿರ್ಮಾಣ ದೇವಾಲಯ ನಿರ್ಮಾಣ ಸೇರಿದಂತೆ ಅನೇಕ ಜನ ಉಪಯೋಗಿ ಕೆಲಸ ಕಾರ್ಯಗಳನ್ನು ಕೈಗೊಂಡು ಇತಿಹಾಸದಲ್ಲಿ ನಮ್ಮ ಸ್ಥಾನವನ್ನು ಶಾಶ್ವತವಾಗಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಸಾಂಸ್ಕೃತಿಕ ಸಂಚಾಲಕಿ ಡಾ.ಭಾರತಿ , ಎನ್.ಎಸ್ ಎಸ್ ಅಧಿಕಾರಿ ಸಂತೋಷ, ಐಕ್ಯೂಎಸ್‌ಸಿ ಸಂಚಾಲಕ ಡಾ.ಉಮೇಶ್, ಗ್ರಂಥ ಪಾಲಕಿ ಶ್ರೀಮತಿ ವಿಜಯಲಕ್ಷ್ಮಿ, ಅಧೀಕ್ಷಕ ತಿಮ್ಮಪ್ಪ, ಉಪನ್ಯಾಸಕರು ಉಪಸ್ಥಿತರಿದ್ದರು.ಕೆಂಪೇಗೌಡರ ಜಯಂತಿ ಅಂಗವಾಗಿ ರಕ್ತದಾನ ಶಿಬಿರ
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಡೆದ ಶಿಬಿರದಲ್ಲಿ ನೂರಾರು ಯುವಕರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವುದರ ಮೂಲಕ ನಾಡಪ್ರಭು ಕೆಂಪೇಗೌಡರಿಗೆ ಗೌರವ ಸಲ್ಲಿಸಿದರು.ಅಪರ ಜಿಲ್ಲಾಧಿಕಾರಿ ಡಾ.ನಾಗರಾಜು ರಕ್ತದಾನ ಶಿಬಿರಕ್ಕೆ ಭೇಟಿ ಕೊಟ್ಟು ಯಶಸ್ವಿಗೆ ಶುಭ ಕೋರಿದರು. ಯುವಕರು ರಕ್ತದಾನ ಮಾಡುವುದರ ಮೂಲಕ ಮತ್ತೊಬ್ಬರ ಜೀವ ಉಳಿಸುವ ಪುಣ್ಯವನ್ನು ಕಟ್ಟಿಕೊಳ್ಳಬೇಕೆಂದು ಕರೆ ನೀಡಿದರು.