ಕೆಮ್ರಾಲ್‌ ಗ್ರಾಮ ಪಂಚಾಯಿತಿ: ರಕ್ತದಾನ ಶಿಬಿರ ಉದ್ಘಾಟನೆ

KannadaprabhaNewsNetwork |  
Published : May 27, 2025, 01:28 AM IST
ಪಕ್ಷಿಕೆರೆ ರಕ್ತದಾನ ಶಿಬಿರ  | Kannada Prabha

ಸಾರಾಂಶ

ಕೆಮ್ರಾಲ್ ಗ್ರಾಮ ಪಂಚಾಯಿತಿ ಸಮುದಾಯ ಭವನದಲ್ಲಿ ನಡೆದ ರಕ್ತದಾನ ಶಿಬಿರವನ್ನು ದ. ಕ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಉದ್ಘಾಟಿಸಿದರು. 53 ಮಂದಿ ರಕ್ತದಾನ ಮಾಡಿದರು.

ಕನ್ನಡಪ್ರಭವಾರ್ತೆ ಮೂಲ್ಕಿ

ಕೆಮ್ರಾಲ್ ಗ್ರಾಮ ಪಂಚಾಯಿತಿ ಸಮುದಾಯ ಭವನದಲ್ಲಿ ನಡೆದ ರಕ್ತದಾನ ಶಿಬಿರವನ್ನು ದ. ಕ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಉದ್ಘಾಟಿಸಿದರು.

ಪಕ್ಷಿಕೆರೆಯ ಶ್ರೀ ವಿನಾಯಕ ಮಿತ್ರ ಮಂಡಳಿನ ನೇತೃತ್ವದಲ್ಲಿ ಯುವಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು. ಯುವ ಕೇಂದ್ರ ಮಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು ದ.ಕ, ಕೆಮ್ರಾಲ್ ಗ್ರಾಮ ಪಂಚಾಯಿತಿ ಪಕ್ಷಿಕೆರೆ, ವೆನ್ಲಾಕ್ ಆಸ್ಪತ್ರೆ ಮಂಗಳೂರು, ಇನ್ನರ್‌ವೀಲ್ ಕ್ಲಬ್ ಕಿನ್ನಿಗೋಳಿ , ರೋಟರಿ ಕ್ಲಬ್ ಕಿನ್ನಿಗೋಳಿ, ಚಾಮರ ಫೌಂಡೇಶನ್, ನಾಗಬ್ರಹ್ಮ ಭಜನಾ ಮಂಡಳಿ ಹೊಸಕಾಡು, ಸೈಂಟ್ ಜೂಡ್ ಅಸೋಸಿಯೇಷನ್ ಪಕ್ಷಿಕೆರೆ, ಕಂಬಳಬೆಟ್ಟು ಫ್ರೆಂಡ್ಸ್ ತೋಕೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಕೆಮ್ರಾಲ್, ಯುವ ಕೇಸರಿ ಕ್ಯೊಕುಡೆ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪಕ್ಷಿಕೆರೆ, ರಿಕ್ಷಾ ಚಾಲಕರ ಮಾಲಕರ ಸಂಘ ಪಕ್ಷಿಕೆರೆ ಮತ್ತು ಚರ್ಚ್ ನಿಲ್ದಾಣ ಹಾಗೂ ಶ್ರೀ ವಿನಾಯಕ ಮಹಿಳಾ ಮಂಡಳಿ ಸಹಯೋಗದಲ್ಲಿ ಶಿಬಿರ ನಡೆಯಿತು.

ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಯ್ಯದಿ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವೆನ್‌ಲಾಕ್ ಆಸ್ಪತ್ರೆಯ ವೈದ್ಯ ಡಾ. ಲತಾ ಮತ್ತು ಡಾ. ದೀಕ್ಷಾ ಚೌಹಾನ್ ರಕ್ತದಾನದ ಕುರಿತು ಮಾಹಿತಿ ನೀಡಿದರು.

ಕೆಮ್ರಾಲ್ ಗ್ರಾಮ ಪಂಚಾಯಿತಿನ ಮಾಜಿ ಅಧ್ಯಕ್ಷ ನಾಗೇಶ್ ಅಂಚನ್, ರೋಟರಿಯ ಕಾರ್ಯದರ್ಶಿ ಗಣೇಶ್ ಶೆಟ್ಟಿಗಾರ್ ಕಾರ್ಯದರ್ಶಿ, ಹರೀಶ್ ಹೊಸಕಾಡು ನಾಗಬ್ರಹ್ಮ ಭಜನಾ ಮಂಡಳಿ ಹೊಸಕಾಡು, ಗಣಪತಿ ಆಚಾರ್ಯ ಅಧ್ಯಕ್ಷರು ಸಾರ್ವಜನಿಕ ಗಣೇಶೋತ್ಸವ ಸಮಿತಿ ಪಕ್ಷಿಕೆರೆ, ಸರಸ್ವತಿ ದಾಸ್ ಧನಂಜಯ್ ಪಿ ಶೆಟ್ಟಿಗಾರ್, ಮಂಡಳಿ ಅಧ್ಯಕ್ಷ ಪ್ರವೀಣ್ ಶೆಟ್ಟಿಗಾರ್, ಕಾರ್ಯದರ್ಶಿ ನಮಿತ್ ಮತ್ತಿತರರು ಉಪಸ್ಥಿತರಿದ್ದರು. 53 ಮಂದಿ ರಕ್ತದಾನ ಮಾಡಿದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ