ಉಡುಪಿ : ಮಾದಕ ವಸ್ತುಗಳ ದಂಧೆಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಸನ್ನದ್ಧವಾಗಿದೆ. ಯಾರಾದರೂ ಮಾದಕ ವಸ್ತು ಮಾರುವ ಬಳಸುತ್ತಿರುವ ಬಗ್ಗೆ ಮಾಹಿತಿ ಲಭಿಸಿದರೆ ಕೂಡಲೇ ಪೊಲೀಸರಿಗೆ ತಿಳಿಸಿ ಸಹಕರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಕರೆ ನೀಡಿದರು.ರಾಷ್ಟ್ರೀಯ ಏಕತಾ ದಿನದ ನಿಮಿತ್ತ ‘ಮಾದಕ ದ್ರವ್ಯಗಳ ವಿರುದ್ಧ ಹೋರಾಟ’ ಎಂಬ ಜಾಗೃತಿ ಸಂದೇಶದೊಂದಿಗೆ ಕೇರಳಂ ಲಕ್ಷದ್ವೀಪದಿಂದ ಗುಜರಾತಿನ ಏಕತಾ ನಗರಕ್ಕೆ ತೆರಳಲಿರುವ ''''''''''''''''''''''''''''''''ಕೇರಳಂ ಪೊಲೀಸರ ರಾಷ್ಟ್ರೀಯ ಬೈಕ್ ರ್‍ಯಾಲಿ''''''''''''''''''''''''''''''''ಗೆ ಸ್ವಾಗತಿಸಲು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ನಗರದ ಕ್ಲಾಕ್ ಟವರ್ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.ಕೇರಳ ಪೊಲೀಸ್ ಅಧಿಕಾರಿ ಅಶ್ವಿನ್ ರಾಯ್ ಮಾತನಾಡಿ, ಡ್ರಗ್ಸ್ ನಿಂದ ಆಗುವ ದುಷ್ಪರಿಣಾಮ ತಿಳಿಸಿ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದ ಬಳಿಕ ಗೋಕರ್ಣ, ಪಣಜಿ ಮಾರ್ಗವಾಗಿ ಗುಜರಾತ್ ನತ್ತ ಮುಂದುವರಿದ ಬೈಕ್ ರ್‍ಯಾಲಿಗೆ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಚಾಲನೆ ನೀಡಿದರು.