ಲೋಕಾಪುರ ಪಟ್ಟಣದ ವೆಂಕಟೇಶ್ವರ ದೇವಸ್ಥಾನದಲ್ಲಿ ಭಕ್ತರ ಸಮ್ಮುಖದಲ್ಲಿ ಅರ್ಚಕರು ಪಠಿಸಿದ ಮಂತ್ರಘೋಷಗಳ ಮಧ್ಯೆ ವೆಂಕಟೇಶ್ವರ ರಥೋತ್ಸವ ಸಡಗರ, ಸಂಭ್ರಮದಿಂದ ಜರುಗಿತು. ನವರಾತ್ರಿ ಉತ್ಸವ ನಿಮಿತ್ತ ನಡೆದ ರಥೋತ್ಸವದಲ್ಲಿ ವೆಂಕಟೇಶ್ವರ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಲೋಕಾಪುರ

ಪಟ್ಟಣದ ವೆಂಕಟೇಶ್ವರ ದೇವಸ್ಥಾನದಲ್ಲಿ ಭಕ್ತರ ಸಮ್ಮುಖದಲ್ಲಿ ಅರ್ಚಕರು ಪಠಿಸಿದ ಮಂತ್ರಘೋಷಗಳ ಮಧ್ಯೆ ವೆಂಕಟೇಶ್ವರ ರಥೋತ್ಸವ ಸಡಗರ, ಸಂಭ್ರಮದಿಂದ ಜರುಗಿತು. ನವರಾತ್ರಿ ಉತ್ಸವ ನಿಮಿತ್ತ ನಡೆದ ರಥೋತ್ಸವದಲ್ಲಿ ವೆಂಕಟೇಶ್ವರ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಮಾವಿನ ತೋರಣ, ತುಳಸಿಮಾಲೆ, ಹೂಮಾಲೆ, ಕಬ್ಬು, ಬಾಳೆ ಗಿಡ, ಕೆಸರಿ ಬಣ್ಣದ ಧ್ವಜಗಳಿಂದ ರಥ ಅಲಂಕಾರ ಮಾಡಲಾಗಿತ್ತು. ಘಂಟನಾದ ವೇದಘೋಷಗಳೊಂದಿಗೆ ಜರುಗಿದ ರಥೋತ್ಸವಕ್ಕೆ ನೆರೆದವರು ಸಾಕ್ಷಿಯಾದರು. ರಥದ ಮೇಲೆ ಕಳಸ ಇಡಲಾಗಿತ್ತು. ವೆಂಕಟರಮಣ ಗೋವಿಂದ ಗೋವಿಂದ ಎಂಬ ಜಯಘೋಷ ಹಾಕುತ್ತಾ ರಥ ಮುಂದೆ ಸಾಗಿತು.

ರಥ ಸಾಗುತ್ತಿದ್ದಂತೆ ಭಕ್ತರು ಉತ್ತತ್ತಿ, ಬಾಳೆಹಣ್ಣು, ಹೂವು ಅರ್ಪಣೆ ಮಾಡಿ, ತೆಂಗಿನಕಾಯಿ ಒಡೆದು, ಕರ್ಪೂರ ಹಚ್ಚಿ, ಊದುಬತ್ತಿ ಬೆಳಗಿ ರಥಕ್ಕೆ ನಮಸ್ಕರಿಸಿದರು, ನಂತರ ವೆಂಕಟೇಶ್ವರನ ದರ್ಶನ ಪಡೆದರು. ಹೂವನ್ನು ಸಿಂಪಿಡಿಸಿದರು, ದೇವಸ್ಥಾನದಲ್ಲಿ ವಿಜಯದಶಮಿ ನಿಮಿತ್ತ ಸಂಜೆ ಬನ್ನಿ ಮುಡಿಯುವ ಕಾರ್ಯಕ್ರಯಮ ಮತ್ತು ಪುರಾಣ ಮಂಗಲ ಹಾಗೂ ಮದ್ದು ಸುಡುವ ಕಾರ್ಯಕ್ರಮ ಜರುಗಿತು.

ಜ್ಞಾನೇಶ್ವರ ಮಠದ ಪೀಠಾದಿಕಾರಿ ಬ್ರಹ್ಮಾನಂದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ದೇವಸ್ಥಾನದ ಅರ್ಚಕ ಬಿ.ಎಲ್. ಬಬಲಾದಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ರಥೋತ್ಸವ ವೇಳೆ ಬಿ.ಡಿ.ಚಿನಗುಂಡಿ, ಗುರುರಾಜ ಜೋಶಿ, ಕಿರಣಕುಮಾರ ದೇಸಾಯಿ, ಶಿವಾನಂದ ಉದಪುಡಿ, ವೆಂಕಣ್ಣ ಕೊಪ್ಪದ, ಗುರುರಾಜ ಉದಪುಡಿ, ಆನಂದಚಾರ್ಯ ಜಂಬಗಿ, ರಾಘವೇಂದ್ರಚಾರ್ಯ ಬಬಲಾದಿ, ಭೀಮಣ್ಣಾ ಜೋಶಿ, ವಿರೇಂದ್ರ ಪಾಟೀಲ, ಸಿ.ಎ. ಪಾಟೀಲ, ಕೆ.ವ್ಹಿ. ಕುಲಕರ್ಣಿ, ವೆಂಕಟರಾವ ದೇಸಾಯಿ, ರಾಘವೇಂದ್ರ ಮುರಗೋಡ, ರವಿ ಬೋಳಿಶೆಟ್ಟಿ, ಮಲ್ಲಪ್ಪ ಅಂಗಡಿ, ಗಿರೀಶ ಚಿನಗುಂಡಿ, ದೀಪಕ ದೇಸಾಯಿ, ತುಷಾರ ಜೋಶಿ, ಪ್ರವೀಣ ಸೋಮಾಪುರ, ಸಂತೋಷ ದೇಶಪಾಂಡೆ, ಅಪ್ಪಾರಾವ್ ದೇಶಪಾಂಡೆ, ಗಿರೀಶ ಹುಕುಮನವರ, ವಿಠ್ಠಲ ಹೂಗಾರ, ಹರೀಶ ಹುಕುಮನವರ, ಹೊಳಬಸು ಕಾಜಗಾರ, ನಿಂಗಪ್ಪ ಮುದ್ದಾಪುರ, ಲಕ್ಷಾನಟ್ಟಿ, ಅರಳಿಕಟ್ಟಿ, ವೆಂಕಟಾಪೂರ, ಜಾಲಿಕಟ್ಟಿ, ನಾಗಣಾಪುರ ವಿವಿಧ ಗ್ರಾಮದ ಭಕ್ತರು ಇದ್ದರು. ಪಿ.ಎಸ್.ಐ ನಿಖಿಲ ಕಾಂಬಳೆ ನೇತೃತ್ವದಲ್ಲಿ ಬೀಗಿ ಪೋಲಿಸ್ ಬಂದ್ ಬಸ್ತ್‌ ಮಾಡಲಾಗಿತ್ತು.