ಕನ್ನಡಪ್ರಭ ವಾರ್ತೆ ಕುಮಟಾ
ತಾಲೂಕಾಸ್ಪತ್ರೆಗೆ ಭೇಟಿ ನೀಡಿ, ಡಯಾಲಿಸಿಸ್ ಘಟಕ, ಐಸಿಯು, ಹೊಸದಾಗಿ ನಿರ್ಮಾಣಗೊಂಡ ಟ್ರಾಮಾ ಸೆಂಟರ್‌ಗಳನ್ನು ಪರಿಶೀಲಿಸಿ, ವೈದ್ಯರು ಹಾಗೂ ಸಿಬ್ಬಂದಿಯೊಂದಿಗೆ ಸಭೆ ನಡೆಸಿದ ಸಂದರ್ಭದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಕುರಿತು ಶಾಸಕ ದಿನಕರ ಶೆಟ್ಟಿ ಹಲವು ಬಾರಿ ವಿಧಾನಸಭೆಯಲ್ಲೇ ಹೇಳಿದ್ದಾರೆ. ಆದರೆ ಕಾರವಾರದಲ್ಲಿ ಮೆಡಿಕಲ್ ಕಾಲೇಜು ಆಗಿರುವುದರಿಂದ ಅಲ್ಲಿಯೇ ಎಲ್ಲ ಸೂಪರ್ ಸ್ಪೆಷಾಲಿಟಿ ಸೌಲಭ್ಯ ಮಾಡಲಾಗುತ್ತಿದೆ. ಇಲ್ಲಿಂದ ಆ್ಯಂಬುಲೆನ್ಸ್ ಮೂಲಕ ಒಂದು ಘಂಟೆಯಲ್ಲಿ ಕಾರವಾರ ತಲುಪಬಹುದು. ಇಲ್ಲಿ ಥರ್ಡ್ ಸ್ಟೇಜ್ ಟ್ರಾಮಾ ಸೆಂಟರ್ ಆಗುತ್ತಿದೆ. ನಂತರ ಸೆಕೆಂಡ್ ಸ್ಟೇಜ್ ಫಸ್ಟ್ ಸ್ಟೇಜ್ ಮಾಡೋಣ, ಮುಂದೆ ಜಿಲ್ಲೆಯಲ್ಲಿಯೇ ಅತ್ಯುತ್ತಮ ಟ್ರಾಮಾ ಸೆಂಟರ್ ಇದಾಗುವಂತೆ ಪ್ರಯತ್ನಿಸೋಣ. ಬಳಿಕ ಕುಮಟಾದಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಮಾಡುವ ಬಗ್ಗೆ ಪರಿಶೀಲಿಸೋಣ. ಕೇವಲ ಕಟ್ಟಡ ಕಟ್ಟಿದರೆ ಆಗದು. ಸಂಬಂಧಿಸಿದ ವೈದ್ಯರು ಇತರ ಸಿಬ್ಬಂದಿ ಮುಂತಾದವು ಬೇಕಾಗುತ್ತದೆ ಎಂದರು.ಗುತ್ತಿಗೆ ಆಧಾರಿತ ವೈದ್ಯಕೀಯ ಸಿಬ್ಬಂದಿ ಕಾಯಂಗೊಳಿಸುವ ಕುರಿತು ಪ್ರತಿಕ್ರಿಯಿಸಿದ ಸಚಿವ ಖಾದರ್, ಗುತ್ತಿಗೆ ಆಧಾರದಲ್ಲಿ ಇದ್ದವರನ್ನು ಯಾರೇ ಮಂತ್ರಿಯಾದರೂ ಕಾಯಂ ಮಾಡಲು ಸಾಧ್ಯವಿಲ್ಲ. ಯಾರಾದರೂ ಕಾಯಂ ಮಾಡಲು ಹಣ ಕೇಳಿದರೆ ಕೊಡಬೇಡಿ. ಆದರೆ ನೇಮಕಾತಿ ವೇಳೆಗೆ ಈಗ ಗುತ್ತಿಗೆ ಆಧಾರದಲ್ಲಿದ್ದವರಿಗೆ ಗ್ರೇಸ್ ಮಾರ್ಕ್ಸ್ ಕೊಡುವ ಬಗ್ಗೆ ಯೋಚಿಸುತ್ತಿದ್ದು, ಎಂ.ಬಿ.ಬಿ.ಎಸ್ ವೈದ್ಯರನ್ನು ಸಹ ಕಾಯಂಗೊಳಿಸಲು ಪ್ರಯತ್ನಿಸಲಾಗುವುದು ಎಂದರು.
ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಜತೆ ಸಭೆಯಲ್ಲಿ ಕುಂದುಕೊರತೆ ಪರಿಶೀಲಿಸಿದರು. ಶಾಸಕ ದಿನಕರ ಶೆಟ್ಟಿ ಕ್ಷೇತ್ರದ ಆರೋಗ್ಯ ಕ್ಷೇತ್ರದ ಅಗತ್ಯತೆಗಳನ್ನು ಸಚಿವರಿಗೆ ಮನವರಿಕೆ ಮಾಡಿದರು.