ಖಾಜಾ ಬಂದಾನವಾಜ ಲಿಮಿಟೆಡ್: ಸಾಮಾನ್ಯ ಸಭೆ

KannadaprabhaNewsNetwork |  
Published : Aug 27, 2026, 01:30 AM IST
ಫೋಟೋ- ಸಭೆ | Kannada Prabha

ಸಾರಾಂಶ

ಖಾಜಾ ಬಂದಾನವಾಜ ಅಲ್ಪಸಂಖ್ಯಾತ ಸೌಹಾರ್ದ ಸಹಕಾರ ಲಿಮಿಟೆಡ್‌ನ ವಾರ್ಷಿಕ ಸಾಮಾನ್ಯ ಸಭೆ ಇತ್ತೀಚೆಗೆ ಕೆಬಿಎನ್ ಸಭಾಂಗಣದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಕಲಬುರಗಿ

ಖಾಜಾ ಬಂದಾನವಾಜ ಅಲ್ಪಸಂಖ್ಯಾತ ಸೌಹಾರ್ದ ಸಹಕಾರ ಲಿಮಿಟೆಡ್‌ನ ವಾರ್ಷಿಕ ಸಾಮಾನ್ಯ ಸಭೆ ಇತ್ತೀಚೆಗೆ ಕೆಬಿಎನ್ ಸಭಾಂಗಣದಲ್ಲಿ ನಡೆಯಿತು. ಗೌರವ ಅತಿಥಿ ಸೌಹಾರ್ದ ಕಚೇರಿಯ ವಿಭಾಗಿಯ ಅಭಿವೃದ್ಧಿ ಅಧಿಕಾರಿ ಸೂರ್ಯಕಾಂತ ಮಾತನಾಡಿ, ಸೌಹಾರ್ದ ಸಹಕಾರಿಗಳು ಕಾರ್ಯನಿರ್ವಹಣೆ ಮಾಡುವ ಪರಿ ವಿಶೇಷ. 9 ವರ್ಷದ ಹಿಂದೆ ದಿವಂಗತ ಡಾ ಸಯ್ಯದ ಶಾಹ ಖುಸ್ರೋ ಹುಸ್ಸೇನಿ ಅವರಿಗೆ ಭೇಟಿಯಾಗಿ ಚರ್ಚಿಸಿದ್ದನ್ನು ಸ್ಮರಿಸಿದರು. ನೀವು ಠೇವಣಿ ಇಟ್ಟ ಹಾಗೆ ಬ್ಯಾಂಕಗಳು ಬೆಳೆಯುತ್ತಿವೆ. ಸಾಲ ಪಡೆದುಕೊಂಡವರು ನಿಯಮಿತವಾಗಿ ಮರುಪಾವತಿಸಿ. ಸೌಹಾರ್ದಗಳು ಸದಸ್ಯರಿಗೆ ಅನುಕೂಲಕರ ಕಾರ್ಯನಿರ್ವಹಣೆ ಮಾಡಬೇಕು.ಬೆಂಗಳೂರಿನಲ್ಲಿ ಎಲ್ಲ ಸೌಹಾರ್ದಗಳ ಸಭೆ ನಡೆಯುತ್ತದೆ. ಅಲ್ಲಿ ಒಬ್ಬರು ಕೆಬಿಎನ ಸೌಹಾರ್ದವನ್ನು ಪ್ರತಿನಿಧಿಸಬಹುದು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆಬಿಎನ್ ಸೌಹಾರ್ದ ಅಧ್ಯಕ್ಷ ಡಾ ಜನಾಬ ಸಯ್ಯದ ಮುಹಮ್ಮದ ಅಲಿ ಅಲ ಹುಸ್ಸೆನಿ ಮಾತನಾಡಿ, ಸೌಹಾರ್ದ ನಡೆಯುತ್ತಿರುವುದು ಗ್ರಾಹಕರಿಂದ. ಸೌಹಾರ್ದಗಳು ಸಮುದಾಯ ಸೇವೆ ಮಾಡುತ್ತವೆ. ಸೌಹಾರ್ದ ತುಂಬಾ ಚೆನ್ನಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ. ಕೆಬಿಎನ್ ಸೌಹಾರ್ದದಿಂದ ಬಹಳ ಜನರಿಗೆ ಅನುಕೂಲವಾಗಲಿ ಎನ್ನುವುದು ನಮ್ಮ ಉದ್ದೇಶ. ಅಲ್ಲದೇ ಬಡ್ಡಿ ರಹಿತ ಫಿಕ್ಸ್ಡ್ ಠೇವಣಿ ಪಡೆದು ಬಡವರಿಗಾಗಿ ಬಡ್ಡಿ ರಹಿತ ಸಾಲನೀಡಲು ಯೋಚಿಸುವುದಾಗಿ ಹೇಳಿದರು. 26-27 ನೆ ಸಾಲಿನ ವಾರ್ಷಿಕ ಬಜೆಟನ್ನು ಮಂಡಿಸಲಾಯಿತು. ಕೆಬಿಎನ್ ಸೌಹಾರ್ದದ ಅಧ್ಯಕ್ಷ ಜನಾಬ ಡಾ ಸಯ್ಯದ ಮೊಹಮ್ಮದ ಅಲಿ ಅಲ ಹುಸ್ಸೇನಿ ಯವರಿಗೆ ಅನೇಕ ಗ್ರಾಹಕರು ಸನ್ಮಾನ ಮಾಡಿದರು. ಮೊಹಮ್ಮದ ಮೊಯಿನುದ್ದಿನ್ ವಾರ್ಷಿಕ ವರದಿ ವಾಚಿಸಿದರು. ವಾರ್ಷಿಕ ಡಿವಿಡೆಂಟನ್ನು ಸಾಮಾಜಿಕ ಉಪಯೋಗಿ ಕಾರ್ಯಗಳಿಗೆ ವಿನಿಯೋಗಿಸಲಾಗುವುದು. ಅತಿ ಹೆಚ್ಚು ಶೇರ್ ಹೊಂದಿದ್ದ ಸಯ್ಯದ್ ಮುರ್ತುಜಾ ಅಲ್ ಹುಸ್ಸೇನಿಯವರಿಗೆ ಸನ್ಮಾನ ಮಾಡಲಾಯಿತು. ಸದಸ್ಯರು ಮತ್ತು ತ್ವರಿತ ಸಾಲ ಪಾವತಿದಾರರಿಗೆ ಸನ್ಮಾನ ಮಾಡಲಾಯಿತು.ಸೌಹಾರ್ದ ಉಪಾಧ್ಯಕ್ಷ ಡಾ ಮುಸ್ತಫಾ ಅಲ ಹುಸ್ಸೇನಿ, ಡಾ ರುಕ್ಸರ ಫಾತಿಮಾ, ನಾಜಿಯಾ ಸುಲ್ತಾನಾ ಹಾಜರಿದ್ದರು. ಮೌಲ್ವಿ ಹಫೀಜ್ ಸಬರ್ ಅಲಿ ಕಿರಾತ ವ್ಯಕ್ತಪಡಿಸಿದರು. ಕಾರ್ಯದರ್ಶಿ ಮೊಹಮ್ಮದ ಮೈನುದ್ದಿನ ಸ್ವಾಗತಿಸಿದರು. ಎಮ್ ಎ ಹಬೀಬ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಂತ್ರಿ ಪಟ್ಟಕ್ಕಾಗಿ ರೈತರಿಗೆ ಮಧು, ಎಸ್ಸೆಸ್ಸೆಂ ಅನ್ಯಾಯ
ಗುಟ್ಕಾ, ಪಾನ್ ಮಸಾಲ ನಿಷೇಧ ವಿರೋಧಿಸಿ ಹೋರಾಟ ಶುರು