ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ವಿಶೇಷ ಸಭೆ

KannadaprabhaNewsNetwork |  
Published : Oct 29, 2026, 02:45 AM IST
ಕಿನ್ನಿಗೋಳಿ ಪಟ್ಟಣ ಪಂಚಾಯತ್‌ ವಿಶೇಷ ಸಭೆ | Kannada Prabha

ಸಾರಾಂಶ

ಕಿನ್ನಿಗೋಳಿ ಪಟ್ಟಣ ಪಂಚಾಯತ್‌ ನಲ್ಲಿ ಅಭಿವೃದ್ಧಿಯ ನಿಟ್ಟಿನಲ್ಲಿ ಅನುದಾನ ಕೊರತೆ ಜೊತೆಗೆ ಖಾಯಂ ಇಂಜಿನಿಯರ್‌ , ಕಂದಾಯ ಅಧಿಕಾರಿ, ಆರೋಗ್ಯ ಅಧಿಕಾರಿ ಇತರ ಸಿಬ್ಬಂದಿಗಳ ಕೊರೆತೆಯಿರುವುದರಿಂದ ಪಟ್ಟಣ ಪಂಚಾಯತ್‌ ಅಭಿವೃದ್ದಿ ಕಾರ್ಯಗಳಿಗೆ ತೊಡಕು ಉಂಟಾಗಿದೆಯೆಂದು ಕಿನ್ನಿಗೋಳಿ ಪಟ್ಟಣ ಪಂಚಾಯತ್‌ ಅಧ್ಯಕ್ಷ ಗುರುರಾಜ ಮಲ್ಲಿಗೆಯಂಗಡಿ ಹೇಳಿದರು.

ಮೂಲ್ಕಿ : ಕಿನ್ನಿಗೋಳಿ ಪಟ್ಟಣ ಪಂಚಾಯತ್‌ ನಲ್ಲಿ ಅಭಿವೃದ್ಧಿಯ ನಿಟ್ಟಿನಲ್ಲಿ ಅನುದಾನ ಕೊರತೆ ಜೊತೆಗೆ ಖಾಯಂ ಇಂಜಿನಿಯರ್‌ , ಕಂದಾಯ ಅಧಿಕಾರಿ, ಆರೋಗ್ಯ ಅಧಿಕಾರಿ ಇತರ ಸಿಬ್ಬಂದಿಗಳ ಕೊರೆತೆಯಿರುವುದರಿಂದ ಪಟ್ಟಣ ಪಂಚಾಯತ್‌ ಅಭಿವೃದ್ದಿ ಕಾರ್ಯಗಳಿಗೆ ತೊಡಕು ಉಂಟಾಗಿದೆಯೆಂದು ಕಿನ್ನಿಗೋಳಿ ಪಟ್ಟಣ ಪಂಚಾಯತ್‌ ಅಧ್ಯಕ್ಷ ಗುರುರಾಜ ಮಲ್ಲಿಗೆಯಂಗಡಿ ಹೇಳಿದರು. ಕಿನ್ನಿಗೋಳಿ ಪಟ್ಟಣ ಪಂಚಾಯತ್‌ ಸಭಾಭವನದಲ್ಲಿ ಜರಗಿದ ಪಟ್ಟಣ ಪಂಚಾಯತ್‌. ವ್ಯಾಪ್ತಿಯಲ್ಲಿನ ಕಾರ್ಯಕ್ರಮಗಳನ್ನು ಅಯೋಜಿಸುವ ಸಭಾಭವನಗಳ ಮಾಲಿಕರು, ಮೇಲ್ವಿಚಾರಕರು, ಕ್ಯಾಟರಿಂಗ್‌ ಮಾಲಿಕರ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು ಸಂಬಂಧ ಪಟ್ಟವರು ಪಟ್ಟಣ ಪಂಚಾಯತ್‌ ಜೊತೆಗೆ ಸಹಕರಿಸಬೇಕು, ಅದಷ್ಟುಮಟ್ಟಿಗೆ ಪ್ಲಾಸ್ಟಿಕ್‌ ಉಪಯೋಗಿಸುವುನ್ನು ಕಡಿಮೆ ಮಾಡಿ, ಹಸಿ ಕಸ , ಒಣ ಕಸವನ್ನು ವಿಂಗಡಿಸಿ ನೀಡಿ , ಪಂ ತ್ಯಾಜ್ಯ ವಿಲೇವಾರಿಯ ವ್ಯವಸ್ಥೆಗೆ ಸಹಕಾರ ನೀಡಬೇಕೆಂದು ತಿಳಿಸಿದರು.

ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ ಜಯಶಂಕರ್‌ ಪ್ರಸಾದ್‌ ಮಾತನಾಡಿ ಪಟ್ಟಣ ಪಂಚಾಯತ್‌ ತ್ಯಾಜ್ಯ ವಿಲೇವಾರಿ ಘಟಕ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸರ್ಕಾರದ ಮಾರ್ಗಸೂಚಿಯ ಪ್ರಕಾರ ಮಾಹಿತಿ ನೀಡಲಾಗುವುದುದೆಂದು ತಿಳಿಸಿದರು.

ಈ ಸಂದರ್ಭ ಪಂಚಾಯತ್‌ ಉಪಾಧ್ಯಕ್ಷೆ ಪದ್ಮಲತಾ ರಾವ್‌, ಸ್ಥಾಯಿ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಪುನರೂರು, ಸದಸ್ಯರಾದ ಪ್ರಕಾಶ್‌ ಆಚಾರ್‌, ಧನುಷ್‌ ಶೆಟ್ಟಿಗಾರ್‌, ಪ್ರಣೀಕ್‌ ಕಿನ್ನಿಗೋಳಿ, ಚಂದ್ರ ರಾಣ್ಯ ಹಾಗೂ ಪಂ. ಪಂ, ವ್ಯಾಪ್ತಿಯ ಸಭಾಭವನದ ಮಾಲಿಕರು , ಮೇಲ್ವಿಚಾರಕರು, ಕ್ಯಾಟರಿಂಗ್‌ ಮಾಲಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲ ನೀಡದ್ದಕ್ಕೆ ಬೇಕರಿ ಮಾಲೀಕರಿಗೆ ಧಮ್ಕಿ ಹಾಕಿ ದಾಂಧಲೆ : ಇಬ್ಬರ ಬಂಧನ
ಮೆಟ್ರೋದಲ್ಲಿ ಮಹಿಳೆಯ ವಿಡಿಯೋ ಮಾಡಿದ ಕಿಡಿಗೇಡಿ ವಿರುದ್ಧ ಕೇಸ್