ಕಿಸಾನ ಸಮ್ಮಾನ ಯೋಜನೆ ಸಂಕಷ್ಟದಲ್ಲಿ ರೈತರ ಕೈ ಹಿಡಿದಿದೆ

KannadaprabhaNewsNetwork |  
Published : Dec 20, 2023, 01:15 AM IST
19ಎನ್.ಆರ್.ಡಿ1 ಶಾಸಕ ಸಿ.ಸಿ.ಪಾಟೀಲರು ಫಲಾನುಭವಿಗಳಗೆ ಆಯುಷ್ಮಾನ ಕಾರ್ಡ ವಿತರಣೆ ಮಾಡುತ್ತಿದ್ದಾರೆ. | Kannada Prabha

ಸಾರಾಂಶ

ನರಗುಂದ ತಾಲೂಕಿನ ಬೆನಕನಕೊಪ್ಪಗ್ರಾಮದಲ್ಲಿ ಎಸ್.ಬಿ.ಐ, ಇಂಡಿಯನ್ ಓವರಸಿಸ್ ಬ್ಯಾಂಕ್, ಹಾಗೂ ಇತರರ ಸಹಯೋಗದಲ್ಲಿ ವಿಕಸಿತ್ ಭಾರತ ಸಂಕಲ್ಪ ಯಾತ್ರೆಯ ಕಾರ್ಯಕ್ರಮ ನಡೆಯಿತು. ಸಮಾರಂಭದಲ್ಲಿ ಮಾತನಾಡಿದ ಶಾಸಕ ಸಿ.ಸಿ. ಪಾಟೀಲರು, ಬೆಳೆಗೆ ಹಾನಿಯಾದಾಗ ಕಿಸಾನ ಸಮ್ಮಾನ ಯೋಜನೆ ರೈತರ ಸಂಕಷ್ಟದಲ್ಲಿ ಕೈ ಹಿಡಿದಿದೆ. ಹೀಗೆ ಪ್ರಧಾನಿ ಮೋದಿ ಅವರ ಸಾಕಷ್ಟು ಯೋಜನೆಗಳು ಜನರ ನೆರವಿಗೆ ಬಂದಿವೆ. ದೇಶವನ್ನು ದಿವಾಳಿ ಅಂಚಿನಲ್ಲಿ ತಂದಿಡುವ ಬಿಟ್ಟಿಭಾಗ್ಯಗಳನ್ನು ನಂಬದೇ, ದೇಶವನ್ನು ಸುಭದ್ರವಾಗಿಡುವ ಪ್ರಧಾನಿ ಮೋದಿಯವರನ್ನು ಬೆಂಬಲಿಸೋಣ ಎಂದರು.

ವಿಕಸಿತ್ ಭಾರತ ಸಂಕಲ್ಪ ಯಾತ್ರೆಯ ಕಾರ್ಯಕ್ರಮದಲ್ಲಿ ಶಾಸಕ ಸಿಸಿಪಾ

ನರಗುಂದ: ಬೆಳೆಗೆ ಹಾನಿಯಾದಾಗ ಕಿಸಾನ ಸಮ್ಮಾನ ಯೋಜನೆ ರೈತರ ಸಂಕಷ್ಟದಲ್ಲಿ ಕೈ ಹಿಡಿದಿದೆ. ಹೀಗೆ ಪ್ರಧಾನಿ ಮೋದಿ ಅವರ ಸಾಕಷ್ಟು ಯೋಜನೆಗಳು ಜನರ ನೆರವಿಗೆ ಬಂದಿವೆ. ದೇಶವನ್ನು ದಿವಾಳಿ ಅಂಚಿನಲ್ಲಿ ತಂದಿಡುವ ಬಿಟ್ಟಿಭಾಗ್ಯಗಳನ್ನು ನಂಬದೇ, ದೇಶವನ್ನು ಸುಭದ್ರವಾಗಿಡುವ ಪ್ರಧಾನಿ ಮೋದಿಯವರನ್ನು ಬೆಂಬಲಿಸೋಣವೆಂದು ಶಾಸಕ ಸಿ .ಸಿ. ಪಾಟೀಲ ಹೇಳಿದರು. ಅವರು ತಾಲೂಕಿನ ಬೆನಕನಕೊಪ್ಪ ಗ್ರಾಮದಲ್ಲಿ ಎಸ್.ಬಿ.ಐ, ಇಂಡಿಯನ್ ಓವರಸಿಸ್ ಬ್ಯಾಂಕ್, ಹಾಗೂ ಇತರರ ಸಹಯೋಗದಲ್ಲಿ ವಿಕಸಿತ್ ಭಾರತ ಸಂಕಲ್ಪ ಯಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿ, ಜಲಜೀವನ ಮಿಷನ್, ಉಜ್ವಲ ಯೋಜನೆ, ಜನೌಷಧಿ ಕೇಂದ್ರ, ಆಯುಷ್ಮಾನ ಭಾರತ, ಜನಧನ್ ಯೋಜನೆ, ಮುದ್ರಾ ಯೋಜನೆ ಹೀಗೆ ಹಲವಾರು ಯೋಜನೆಗಳು ಜನರ ಸಂಕಷ್ಟದಲ್ಲಿ ಅನುಕೂಲ ಆಗಿವೆ. ಪ್ರಧಾನಿ ಮೋದಿ ಅವರು ಜನರಿಗೆ ಅತ್ಯಂತ ಅವಶ್ಯಕ ಯೋಜನೆಗಳನ್ನು ಮಾತ್ರ ಜಾರಿಗೆ ತಂದಿದ್ದಾರೆ. ಗ್ಯಾರಂಟಿ ಯೋಜನೆಗಳಂತೆ ದೇಶವನ್ನು ದಿವಾಳಿ ಅಂಚಿಗೆ ನೂಕುವಂತ ಪರಿಸ್ಥಿತಿಯನ್ನು ತಂದಿಟ್ಟಿವೆ. ಪಿಎಂ ಮೋದಿಯವರು ದೇಶದ ಆರ್ಥಿಕ ಸ್ಥಿತಿ ಸದೃಢವಾಗಿಟ್ಟಿದ್ದಾರೆಂದು ತಿಳಿಸಿದರು.

ಜಗತ್ತಿನ ಕೆಲವು ದೇಶಗಳ ನಡುವೆ ಯುದ್ಧಗಳು ನಡೆದು ಮತ್ತು ಕೋವಿಡ್ ಸಂಕಷ್ಟಕ್ಕೆ ಸಿಲುಕಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಆದರೆ ಭಾರತ ಮಾತ್ರ ಆರ್ಥಿಕವಾಗಿ ಸದೃಢವಾಗಿ ಬೆಳೆಯುತ್ತಿದೆ ಎಂದರು.

ಗ್ರಾಪಂ ವ್ಯಾಪ್ತಿಯಲ್ಲಿ ಎಲ್ಇಡಿ ಮೂಲಕ ಕೇಂದ್ರ ಬಿಜೆಪಿ ಸರ್ಕಾರದ ಜನಪರ ಯೋಜನೆಗಳನ್ನು ಬಿತ್ತರಿಸಲಾಯಿತು. ಸಾಂಕೇತಿಕವಾಗಿ ಆಯುಷ್ಮಾನ್ ಭಾರತ ಕಾರ್ಡ್‌ಗಳನ್ನು, ಉಜ್ವಲ ಯೋಜನೆ ಕಾರ್ಡ್‌ಗಳನ್ನು ಸಭೆಯಲ್ಲಿ ವಿತರಣೆ ಮಾಡಲಾಯಿತು. ಗ್ರಾಪಂ ಅಧ್ಯಕ್ಷೆ ದುಂಡವ್ವ ಮರಚಕ್ಕನವರ, ಉಪಾಧ್ಯಕ್ಷೆ ಪಾರ್ವತೆವ್ವ ಮಾದರ, ಅಜ್ಜನಗೌಡ ಪಾಟೀಲ, ಡಾ.ಸಿ ಕೆ. ರಾಚನಗೌಡ್ರ, ಸಂಗನಗೌಡ ಹಾಲಗೌಡ್ರ, ತಾಪಂ ಇಓ ಎಸ್. ಕೆ. ಇನಾಮದಾರ, ರುದ್ರಗೌಡ ಲಿಂಗನಗೌಡ್ರ, ಮಂಜುನಾಥ ಮೆಣಸಗಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ