ಶಿವಶರಣರ ವಚನಗಳ ಸಾರ ತಿಳಿಯಿರಿ

KannadaprabhaNewsNetwork |  
Published : Nov 05, 2025, 12:30 AM IST
೦೪ ವೈಎಲ್‌ಬಿ ೦೧ಯಲಬುರ್ಗಾ ತಾಲೂಕಿನ ಮರಕಟ್‌ನಲ್ಲಿ ೩೫೪ನೇ ವಚನ ಚಿಂತನಾ ಗೋಷ್ಠಿ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಉತ್ತರ ಕರ್ನಾಟಕ ಭಾಗದಲ್ಲಿ ಬಸವಾದಿ ಶರಣರ ವಚನ ಪರಿಚಯಿಸುತ್ತಾ ಸಾಧಕರಿಗೆ ಮಾರ್ಗದರ್ಶಕರಾಗಿ ಲಿಂಗಾಯತ ಧರ್ಮದ ನಿಜಾಚರಣೆಯ ಮೂಲಕ ಜನರನ್ನು ಜಾಗೃತಿಗೊಳಿಸಿದ ಕೀರ್ತಿ ಚಿಂತಕ ವೀರಭದ್ರಪ್ಪ ಕುರಕುಂದಿಗೆ ಸಲ್ಲುತ್ತದೆ

ಯಲಬುರ್ಗಾ: ಸಮಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಹನ್ನೆರಡನೆಯ ಶತಮಾನದ ಶಿವಶರಣರ ವಚನಗಳ ಸಾರ ಎಲ್ಲರೂ ತಿಳಿಯಬೇಕು ಎಂದು ಚಿಂತಕ ಬಸವರಾಜಪ್ಪ ವೆಂಕಟಾಪುರ ಹೇಳಿದರು.

ತಾಲೂಕಿನ ಮರಕಟ್ ಗ್ರಾಮದ ಶಿವಾನಂದ ಮಠದಲ್ಲಿ ಹಮ್ಮಿಕೊಂಡಿದ್ದ ೩೫೪ನೇ ವಚನ ಚಿಂತನಾ ಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಉತ್ತರ ಕರ್ನಾಟಕ ಭಾಗದಲ್ಲಿ ಬಸವಾದಿ ಶರಣರ ವಚನ ಪರಿಚಯಿಸುತ್ತಾ ಸಾಧಕರಿಗೆ ಮಾರ್ಗದರ್ಶಕರಾಗಿ ಲಿಂಗಾಯತ ಧರ್ಮದ ನಿಜಾಚರಣೆಯ ಮೂಲಕ ಜನರನ್ನು ಜಾಗೃತಿಗೊಳಿಸಿದ ಕೀರ್ತಿ ಚಿಂತಕ ವೀರಭದ್ರಪ್ಪ ಕುರಕುಂದಿಗೆ ಸಲ್ಲುತ್ತದೆ. ಜನರು ಮೂಢನಂಬಿಕೆಯಿಂದ ಹೊರ ಬಂದು ಸ್ವತಂತ್ರ ಜೀವನ ನಡೆಸಲು ವಚನಗಳ ಮೂಲಕ ತಿಳಿಯಪಡಿಸಿದ ನಿಜ ಜಂಗಮರಾಗಿದ್ದಾರೆ. ಶರಣರ ವಚನ ಪಾಲನೆ ಮಾಡುವ ಜತೆಗೆ ಸಮಾಜದಲ್ಲಿ ನಡೆಯುವ ಜಾತಿ, ಮತ, ಪಂಥ ಹೋಗಲಾಡಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.

ಮರಕಟ್ ಬಸವ ಕೇಂದ್ರದ ಅಧ್ಯಕ್ಷ ಅಮರೇಶಪ್ಪ ಬಳ್ಳಾರಿ ಮಾತನಾಡಿದರು.

ಈ ಸಂದರ್ಭ ಹನಮಂತಪ್ಪ ಮಡಿವಾಳ, ಬಸವರಾಜಪ್ಪ ಬ್ಯಾಲಿಹಾಳ, ದೇವಪ್ಪ ಕೋಳೂರು, ಅಮರೇಶ ದೇವಲ್, ಮಲ್ಲೇಶಪ್ಪ ಮಾಟಲದಿನ್ನಿ, ನರಸಪ್ಪ ತೇಲಗರ, ಷಣ್ಮುಖಪ್ಪ ಬಳ್ಳಾರಿ, ಮಹಾಲಿಂಗಪ್ಪ ಮೇಟಿ, ಶರಣಪ್ಪ ಮೇಟಿ, ಹನುಮಂತಪ್ಪ ಹುಣಸಿಹಾಳ, ಹನುಮೇಶ ಗೌಡ್ರ, ಮೌನೇಶ ಪತ್ತಾರ ಸೇರಿದಂತೆ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತ್ಯಾಗ, ಬಲಿದಾನ, ಆದರ್ಶಗಳ ಮೇಲೆ ಹುಟ್ಟಿದ ಕಾಂಗ್ರೆಸ್: ಎಸ್.ಆರ್. ಪಾಟೀಲ
ರೈತ ಸೃಷ್ಟಿಯ ಮೊದಲ ವಿಜ್ಞಾನಿ, ಜಮೀನು ಪ್ರಯೋಗಾಲಯ: ಮಾಜಿ ಸಚಿವ ನಿರಾಣಿ