ಕನ್ನಡಪ್ರಭ ವಾರ್ತೆ ಭದ್ರಾವತಿ/ ಸಾಗರ/ ಶಿಕಾರಿಪುರ/ ಸೊರಬ
ಅವರು ಭಾನುವಾರ ನಗರದ ಜನ್ನಾಪುರ ಎನ್‌ಟಿಬಿ ನಗರಸಭೆ ಶಾಖಾ ಕಚೇರಿ ಆವರಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಪೌರಕಾರ್ಮಿಕರ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ಜನನವಾಗದಿದ್ದರೆ ದೇಶದ ಪರಿಸ್ಥಿತಿ ಹೇಗಿರುತಿತ್ತು ಎಂಬುದನ್ನು ಊಹಿಸಲು ಸಹ ಅಸಾಧ್ಯ. ದೇಶದಲ್ಲಿನ ಈ ಹೊತ್ತಿನ ಬಹಳಷ್ಟು ಬದಲಾವಣೆಗೆ ಡಾ.ಅಂಬೇಡ್ಕರ್ ಹಾಗೂ ಅವರ ಆಶಯಗಳೇ ಕಾರಣವಾಗಿವೆ ಎಂದವರು ಪ್ರತಿಪಾದಿಸಿದರು.ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ ಮಾತನಾಡಿ, ಇಂದು ದೇಶದ ಪರಿಸ್ಥಿತಿ ಬಹಳಷ್ಟು ಸುಧಾರಿಸಿದೆ. ಆದರೆ ಅಂಬೇಡ್ಕರ್ ಜನನಕ್ಕೂ ಮೊದಲ ಹಿಂದಿನ ಪರಿಸ್ಥಿತಿಯನ್ನು ಯೋಚಿಸಲು ಸಹ ಅಸಾಧ್ಯ ಎಂದರು.
ನಗರಸಭೆ ಪರಿಸರ ಅಭಿಯಂತರ ಎಚ್.ಪ್ರಭಾಕರ್, ಕಿರಿಯ ಆರೋಗ್ಯ ನಿರೀಕ್ಷಕ ಎಂ. ನಿತೀಶ್, ಹಿರಿಯ ಪತ್ರಕರ್ತ ಎನ್. ಬಾಬು, ಮುಖಂಡರುಗಳಾದ ಸಿ.ಜಯಪ್ಪ, ಕಾಣಿಕ್ ರಾಜ್, ಜಿಂಕ್ ಲೈನ್ ಮಣಿ, ಅಂತೋಣಿ, ಈಶ್ವರಪ್ಪ ಸೇರಿದಂತೆ ಅನೇಕರು ಹಾಜರಿದ್ದರು.ಬುದ್ಧ, ಬಸವನ ಬಳಿಕ ಭೀಮ
ಸಾಗರ: ಸ್ವತಂತ್ರ ಪಡೆದ ಅನೇಕ ದೇಶಗಳು ಇಂದಿಗೂ ನೆಮ್ಮದಿಯ ಜೀವನ ನಡೆಸುತ್ತಿಲ್ಲ. ಆದರೆ ಭಾರತ ದೇಶ ಶಾಂತಿ ನೆಮ್ಮದಿಯಿಂದ ಇದೆ ಎಂದಾದರೆ ಅದಕ್ಕೆ ಕಾರಣವಾಗಿರುವುದು ನಮ್ಮ ಸಂವಿಧಾನ. ಹಾಗಾಗಿಯೆ ನಮಗೆ ಡಾ.ಅಂಬೇಡ್ಕರ್‌ವರು ಆದರ್ಶ ಎಂದು ಉಪವಿಭಾಗಾಧಿಕಾರಿ ಆರ್.ಯತೀಶ್ ಹೇಳಿದರು.
ಶಿಕ್ಷಕ ಜಿ.ಎನ್.ಶಶಿಕುಮಾರ್ ಉಪನ್ಯಾಸ ನೀಡಿದರು. ತಹಸೀಲ್ದಾರ್ ಸೈಯದ್ ಕರೀಂವುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಇಒ ಸುನಿತಾ, ನಗರಸಭೆಯ ಆಯುಕ್ತ ಲಿಂಗರಾಜು, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಜಿ. ಪರಮೇಶ್ವರಪ್ಪ, ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ್ ಸಹನೆ, ವಿ.ಟಿ.ಸ್ವಾಮಿ ಮತ್ತಿತರರು ಇದ್ದರು.ಸಂವಿಧಾನದಿಂದ ಸರ್ವರಿಗೂ ಸಮಪಾಲು, ಸಮಬಾಳು: ಮಲ್ಲೇಶ್
ಭಾನುವಾರ ಪಟ್ಟಣದ ಆಡಳಿತ ಸೌಧದಲ್ಲಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ, ತಾ.ಪಂ. ಪುರಸಭೆ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ತಾಲೂಕಿನ ವಿವಿಧ ಸಮಾಜ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಂ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿಕ್ಷಣದಿಂದ ಕ್ರಾಂತಿ ಕ್ರಾಂತಿಯಿಂದ ಸಮಾನತೆ ಎಂಬುದು ಅಂಬೇಡ್ಕರ್ ರವರ ವಾದವಾಗಿತ್ತು, ಆಗಿನ ಕಾಲದಲ್ಲಿ, ಅಸಮಾನತೆ ವಿರುದ್ಧ ಹೋರಾಡುತ್ತ ವಿದೇಶದಲ್ಲಿ ವ್ಯಾಸಂಗ ಮಾಡಿದ ಅಂಬೇಡ್ಕರ್‌ರವರು ನಮಗೆ ಮಾದರಿಯಾಗಿರಬೇಕು ಎಂದು ತಿಳಿಸಿದರು.
ಸಾಲೂರು ಸರ್ಕಾರಿ ಪ.ಪೂ. ಕಾಲೇಜಿನ ಉಪನ್ಯಾಸಕ ಡಾ.ವಸಂತ್ ನಾಯಕ್ ಅಂಬೇಡ್ಕರ್ ರವರ ಜೀವನ ಬಗ್ಗೆ ಮಾತನಾಡಿ, ಭಾರತದ ಸಂವಿಧಾನ ಶಿಲ್ಪಿ, ಸಮಾಜ ಸುಧಾರಕ, ಭಾರತ ಭಾಗ್ಯವಿಧಾತ, ಸಮಾಜದಲ್ಲಿನ ಅಸಮಾನತೆ, ಜಾತಿ ಪದ್ಧತಿ, ಅಸ್ಪೃಶ್ಯತಾ ನಿವಾರಣೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ಭಾರತಕ್ಕೆ ಬೃಹತ್ ಲಿಖಿತ ಸಂವಿಧಾನವನ್ನು ನೀಡಿದರು. ಜಗತ್ತಿನ ಶ್ರೇಷ್ಠ ವಿದ್ವಾಂಸರಾಗಿದ್ದರು ಎಂದು ತಿಳಿಸಿದರು.
ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಸಹಾಯಕ ಚುನಾವಣಾಧಿಕಾರಿ ಬಂಗಾರಪ್ಪ, ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಹಾಕಿಕೊಟ್ಟ ಹಾದಿಯಲ್ಲಿ ನಾವು ನಡೆಯಬೇಕು ವಿಶ್ವಕ್ಕೆ ಮಾದರಿಯಾದ ಸಂವಿಧಾನವನ್ನು ಅಂಬೇಡ್ಕರ್ ನೀಡಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಧುಸೂದನ್,ತಾ.ಪಂ ಇಒ ರಾಜಣ್ಣ, ಸಿಪಿಐ ರುದ್ರೇಶ್,ಪುರಸಭಾ ಮುಖ್ಯಾಧಿಕಾರಿ ಭರತ್ ಬಿಎಸ್ ಎನ್ ಎಲ್ ನಿವೃತ್ತ ಇಂಜಿನಿಯರ್ ಶಿವಪ್ಪ,ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಉಮೇಶ್ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಸಮಾಜ ಸುಧಾರಣೆಗೆ ಸಂವಿಧಾನವೇ ಅಡಿಗಲ್ಲು: ಉಪನ್ಯಾಸಕ ಬಿ.ಸತೀಶ್
ಸೊರಬ: ಸಮಾಜ ಸುಧಾರಣೆಯಲ್ಲಿ ಅಂಬೇಡ್ಕರ್ ಬರೆದ ಸಂವಿಧಾನ ಹಾಗೂ ಅವರ ಚಿಂತನೆಗಳು ಅಡಿಗಲ್ಲಾಗಿವೆ ಎಂದು ಆನವಟ್ಟಿ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಬಿ.ಸತೀಶ್ ಹೇಳಿದರು.ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ದಲಿತ ಸಂಘರ್ಷ ಸಮಿತಿ ಹಾಗೂ ಇತರೆ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್ ರಾಮ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಅಂಬೇಡ್ಕರ್ ಬಗ್ಗೆ ಉಪನ್ಯಾಸ ನೀಡಿದರು.
ಅಂಬೇಡ್ಕರ್ ಅವರ ಜೀವನ, ಸಾಧನೆಗಳು ಸಮಾಜಕ್ಕೆ ಪ್ರೇರಣೆಯಾಗಿವೆ. ಜನರ ಕಲ್ಯಾಣಕ್ಕಾಗಿ ಅವಿರತವಾಗಿ ಶ್ರಮಿಸುವ ಜತೆಗೆ ಜಾತಿ ವ್ಯವಸ್ಥೆ ವಿರುದ್ಧ ಹೋರಾಡುವ ಮೂಲಕ ನೊಂದವರಿಗೆ ಧ್ವನಿಯಾಗಿದ್ದರು ಎಂದರು.ಸೊರಬ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಉಮೇಶ್ ಬಾಬು ಜಗಜೀವನ್ ರಾಮ್ ಬಗ್ಗೆ ಉಪನ್ಯಾಸ ನೀಡಿ, ಬಾನು ಜಗಜೀವನ್ ರಾಮ್ ಅವರು ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದರು. ರಾಜಕೀಯ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ದೇಶವನ್ನು ಪ್ರಗತಿಯತ್ತ ಸಾಗಿಸಲು ಶ್ರಮಿಸಿದ್ದರು ಎಂದರು.
ಹರೀಶ್ ಹಾಗೂ ನಾಗರಾಜ್ ಕ್ರಾಂತಿಗೀತೆ ಹಾಡಿದರು. ಸಮಾಜ ಕಲ್ಯಾಣ ಅಧಿಕಾರಿ ಇಕ್ಬಾಲ್ ಜಾತಿಗೇರ ಸ್ವಾಗತಿಸಿದರು.ತಹಸೀಲ್ದಾರ್ ಹುಸೇನ್ ಸರಕಾವಸ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾ.ಪಂ. ಇಒ ಎನ್.ರವೀಂದ್ರ, ಬಿಇಒ ಓಂಕಾರಪ್ಪ, ಪುರಸಭೆ ಮುಖ್ಯಾಧಿಕಾರಿ ಟಿ.ಬಾಲಚಂದ್ರ, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಮಂಜುನಾಥ್, ಡಾ.ಪ್ರದೀಪ್ ಕುಮಾರ್, ಆನವಟ್ಟಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಂತೋಷ್ ಕುಮಾರ್, ತಾಲೂಕು ವೈದ್ಯಾಧಿಕಾರಿ ವಿನಯ್ ಪಾಟೀಲ್, ಸಿಪಿಐ ರಮೇಶ್ ರಾವ್, ವಿನೋದ್, ದಸಂಸ ತಾಲೂಕು ಸಂಚಾಲಕರಾದ ಮಹೇಶ್ ಶಕುನವಳ್ಳಿ, ಬಸವರಾಜಪ್ಪ ಹಸ್ವಿ, ರಾಜ್ಯ ವಿಭಾಗೀಯ ಸಂಚಾಲಕ ಗುರುರಾಜ್, ಹರೀಶ್, ಬಂಗಾರಪ್ಪ, ನಾಗರಾಜ್ ಹುರಳಿ, ವಿನಾಯಕ ಕಾನಡೆ ಇತರರಿದ್ದರು.