ಕನ್ನಡಪ್ರಭ ವಾರ್ತೆ ಮೈಸೂರು
ಹೊಯ್ಸಳ ಕನ್ನಡ ಸಂಘ ಮತ್ತು ಸವಿಗನ್ನಡ ಬಳಗವು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ 26ನೇ ವಾರ್ಷಿಕೋತ್ಸವ, 2025ನೇ ಸಾಲಿನ ಹೊಯ್ಸಳ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಒಂದು ಕಾಲಕ್ಕೆ ತೋಳ್ಬಲ ಇದ್ದರೆ ಸಾಕು ಬದಕುಬಹುದು ಎಂಬ ಪರಿಸ್ಥಿತಿ ಇತ್ತು. ನಂತರ ಹಣ ಇದ್ದರೆ ಬದುಕುಬಹುದು ಎಂದು ಹೇಳಲಾಗುತ್ತಿತ್ತು. ಈಗ ಅದೆಲ್ಲಾ ಮುಗಿದಿದೆ. ಈಗ ಜ್ಞಾನ ಇದ್ದರೆ ಎಲ್ಲಿ ಬೇಕಾದರೂ ಬದುಕಬಹುದು. ಆದ್ದರಿಂದ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ಚೆನ್ನಾಗಿ ಓದಿಸಿ, ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಕರೆ ನೀಡಿದರು.
ಇವತ್ತು ನಾನು ಪದ್ಮಶ್ರೀ ಪ್ರಶಸ್ತಿ ಹಂತಕ್ಕೆ ಏರಲು ನಾನೊಬ್ಬನೇ ಕಾರಣನಲ್ಲ. ಹಲವಾರು ಸ್ನೇಹಿತರ ಸಹಕಾರ ಇದೆ. 78 ವರ್ಷದ ನಾನು ಕಳೆದ 52 ವರ್ಷಗಳಿಂದಲೂ ಪುಸ್ತಕಗಳ ಸಂಗ್ರಹದಲ್ಲಿ ತೊಡಗಿದ್ದು, ಈಗ ನನ್ನ ಗ್ರಂಥಾಲಯದಲ್ಲಿ 20 ಲಕ್ಷ ಪುಸ್ತಕಗಳಿವೆ. ಮುಂದಿನ ಪೀಳಿಗೆಯ ಮಕ್ಕಳಿಗೆ ಜ್ಞಾನವನ್ನು ದಾಟಿಸಬೇಕು ಎಂಬ ಹಂಬಲದಿಂದ ಯಾರಿಂದಲೂ ಒಂದು ರೂಪಾಯಿಯನ್ನು ಕೂಡ ಪಡೆಯದೇ ಪುಸ್ತಕಗಳನ್ನು ಓದಲು ನೀಡುತ್ತಿದ್ದೇನೆ ಎಂದರು.ಮಕ್ಕಳಿಗೆ ಐಎಎಸ್, ಕೆಎಎಸ್ ಪರೀಕ್ಷೆ ಬರೆಯಲು ಬೇಕಾದ ಎಲ್ಲಾ ಪುಸ್ತಕಗಳು ನನ್ನ ಬಳಿ ಇವೆ. ವಿದ್ಯಾರ್ಥಿಗಳು ಬೆಳಗಿನ ಜಾವ 4 ರಿಂದ 7.30 ರವರೆಗೆ ಶ್ರದ್ಧೆ ಓದಿದರೆ ಯಾವುದೇ ಪರೀಕ್ಷೆಯನ್ನಾದರೂ ಪಾಸು ಮಾಡಬಹುದು. ಇನ್ನೊಬ್ಬರ ಬಗ್ಗೆ ಕೆಟ್ಟ ಮಾತುಗಳನ್ನು ಆಡುವುದನ್ನು ಬಿಟ್ಟು, ಒಳ್ಳೆಯತನ ಬೆಳೆಸಿಕೊಂಡರೆ ಸಾಕು ಎಂದರು.
ಮಾಜಿ ರಾಷ್ಟ್ರಪತಿ, ದಿವಂಗತ ಡಾ.ಎಪಿಜೆ ಅಬ್ದುಲ್ ಕಲಾಂ ಅವರಿಗೆ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿದ್ದ ಜಯಪ್ರಕಾಶ್ ಪುತ್ತೂರು ಅವರು ರಚಿಸಿರುವ ಹಾಗೂ ಸಪ್ನ ಬುಕ್ ಹೌಸ್ ಪ್ರಕಟಿಸಿರುವ ‘ವ್ಯಕ್ತಿತ್ವ ವಿಕಸನ ವಿಚಾರಧಾರೆ’ ಕೃತಿಯನ್ನು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಸವಿಗನ್ನಡ ವಿಶೇಷಾಂಕವನ್ನು ಕವಿಯತ್ರಿ ಡಾ.ಲತಾ ರಾಜಶೇಖರ್ ಬಿಡುಗಡೆ ಮಾಡಿದರು.
ರಂಗನಾಥ್ ಮೈಸೂರು ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು. ವಿಜಯಲಕ್ಷ್ಮಿ ರಂಗನಾಥ್ ಪ್ರಾರ್ಥಿಸಿದರು. ಮಾನುಷ ಕಾರ್ಯಕ್ರಮ ನಿರೂಪಿಸಿದರು.ಪ್ರಶಸ್ತಿ ಪುರಸ್ಕೃತರು