24ರಿಂದ ಕೊಡಗು ಮೊಗೇರ ಕ್ರಿಕೆಟ್ ಪ್ರೀಮಿಯರ್ ಲೀಗ್

KannadaprabhaNewsNetwork |  
Published : Feb 19, 2024, 01:35 AM IST
24ರಿಂದ ಕೊಡಗು ಮೊಗೇರ ಕ್ರಿಕೆಟ್ ಪ್ರೀಮಿಯರ್ ಲೀಗ್ | Kannada Prabha

ಸಾರಾಂಶ

ಅಮೃತ ಯುವ ಮೊಗೇರ ಸಿದ್ದಾಪುರ ಅಮ್ಮತಿ ಹೋಬಳಿ ವತಿಯಿಂದ ದ್ವಿತೀಯ ಬಾರಿಗೆ ಮೊಗೇರ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಅಮೃತ ಯುವ ಮೊಗೇರ ಸಿದ್ದಾಪುರ ಅಮ್ಮತಿ ಹೋಬಳಿ ವತಿಯಿಂದ ದ್ವಿತೀಯ ಬಾರಿಗೆ ಮೊಗೇರ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯವು ಫೆ.24, 25, 26ರಂದು ಅಮ್ಮತಿಯ ಪ್ರೌಢಶಾಲೆ ಮೈದಾನದಲ್ಲಿ ನಡೆಯಲಿದೆ.

ಒಟ್ಟು ಹತ್ತು ಮಾಲಕತ್ವದ ಹತ್ತು ತಂಡಗಳು ಪಾಲ್ಗೊಳ್ಳಲಿದ್ದು, ಟೀಮ್ ಹಂಟರ್ಸ್ ಮರಗೋಡು, ಫ್ರೆಂಡ್ಸ್ ಕ್ರಿಕೆಟರ್ಸ್ ಅಮ್ಮತ್ತಿ, ಎಸ್‌ಪಿಎಂ ರಾಯಲ್ ವಿರಾಜಪೇಟೆ, ಪ್ರೆಸಿಡೆಂಟ್ಸ್ XI ಸೋಮವಾರಪೇಟೆ, ಟೀಮ್ ಕಾರ್ಣಿಕ ಕೊಡಗು, ರಾಪ್ಟಾರ್ ಕಾನನಕಾಡು, ಟೀಮ್ ಬ್ರದರ್ಸ್ ಬಕ್ಕ, ಫ್ರೆಂಡ್ಸ್ Xl ಅಮ್ಮತಿ, ಮರ್ಸಿಲೆಸ್ಸ್ ಕ್ರಿಕೆಟರ್ಸ್, ಕ್ಯಾಪ್ಟನ್ ಕ್ರಿಕೆಟರ್ಸ್ ಸುಂಟಿಕೊಪ್ಪ, ತಂಡಗಳ ನಡುವೆ ಲೀಗ್ ಪಂದ್ಯಗಳು ನಡೆಯಲಿವೆ. ಪಂದ್ಯ ಕೂಟದ ವಿನ್ನರ್ಸ್ ತಂಡಕ್ಕೆ 50,000 ರು. ನಗದು ಹಾಗೂ ಆಕರ್ಷಕ ಟ್ರೊಫಿ, ರನ್ನರ್ಸ್ ತಂಡಕ್ಕೆ 25,000 ರು. ನಗದು ಹಾಗೂ ಆಕರ್ಷಕ ಟ್ರೊಫಿ, ವೈಯಕ್ತಿಕ, ಟ್ರೊಫಿಗಳು ಕೂಡ ಕ್ರೀಡಾಪಟುಗಳಿಗೆ ಸಿಗಲಿದೆ.

ಕ್ರೀಡಾಕೂಟದ ಉದ್ಘಾಟನೆಯನ್ನು ಅಮೃತ ಯುವ ಮೊಗೇರ ಸೇವಾ ಸಮಾಜದ ಕ್ರೀಡಾ ಅಧ್ಯಕ್ಷ ಪಿ.ಸಿ. ರಮೇಶ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಮೃತ ಯುವ ಮೊಗೇರ ಸೇವಾ ಸಮಾಜದ ಅಧ್ಯಕ್ಷ ಮಂಜು ಪಿ.ಕೆ. ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಜಿಲ್ಲಾಅಧ್ಯಕ್ಷ ಜನಾರ್ದನ್‌, ತುಳು ಸಾಹಿತ್ಯ ಅಕಾಡಮಿಯ ಸದಸ್ಯ ಹಾಗೂ ಬಿಜೆಪಿ ಎಸ್. ಸಿ. ಮೋರ್ಚಾ ಘಟಕದ ಅಧ್ಯಕ್ಷ ರವಿ. ಪಿ. ಎಂ. ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಜಿಲ್ಲಾ ಕ್ರೀಡಾ ಅಧ್ಯಕ್ಷ ಎಂ.ಜಿ. ಚಂದ್ರ ಹಾಗೂ ಸಮಾಜದ ಗೌರವ ಅಧ್ಯಕ್ಷರು ಅಕ್ಕಮ್ಮ ಮೂರ್ತಿ ಇವರು ಪಾಲ್ಗೊಳ್ಳಲಿದ್ದಾರೆ

ಕ್ರೀಡಾಕೂಟದ ಪ್ರಮುಖವಾಗಿ ಆಯೋಜಕರು ಹಾಗೂ ಕೊಡಗು ಪತ್ರಕರ್ತರ ನಡುವೆ ಪ್ರದರ್ಶನ ಪಂದ್ಯವು ನಡೆಯಲಿದೆ ಎಂದು ಆಯೋಜಕರಾದ ರಾಮು ಪಿ.ಎನ್., ವಿಶ್ವ, ಮಣಿ, ರಘು, ಕೃಷ್ಣ, ನಾರಾಯಣ, ಗಣೇಶ, ಜನಾರ್ದನ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

6 ಲಕ್ಷ ಲಂಚ ಪಡೆವಾಗ ವಾಣಿಜ್ಯ ತೆರಿಗೆ ಡೀಸಿ ‘ಲೋಕಾ’ ಬಲೆಗೆ
ದುಬಾರಿ ಬಡ್ಡಿ ವಿಧಿಸಿದವನ ವಿರುದ್ಧ ಕ್ರಮಕ್ಕೆ ಪೊಲೀಸರಿಗೆ ಕೋರ್ಟ್‌ ಸೂಚನೆ