ಕೊಡವ ಕೌಟುಂಬಿಕ ಹಾಕಿ: ಅಳ್ತಂಡ, ಮಂಜಂಡ ಸುಲಭ ಗೆಲವು

KannadaprabhaNewsNetwork |  
Published : Apr 05, 2024, 01:07 AM IST
ತಂಡಗಳನಡುವಿನ ಪಂದ್ಯದ ರೋಚಕ ಕ್ಷಣ. | Kannada Prabha

ಸಾರಾಂಶ

ನಾಪೋಕ್ಲು ಸಮೀಪದ ಚೆರಿಯ ಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿಯ ಗುರುವಾರದ ಪಂದ್ಯಗಳಲ್ಲಿ ಅಳ್ತಂಡ, ಬಡ್ಡೀರ, ಕಳ್ಳೀರ, ಕುಂಡಚ್ಚಿರ ಮತ್ತಿತರ ತಂಡಗಳು ಮುನ್ನಡೆ ಸಾಧಿಸಿದವು.

ದುಗ್ಗಳ ಸದಾನಂದ

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿಯ ಗುರುವಾರದ ಪಂದ್ಯಗಳಲ್ಲಿ ಅಳ್ತಂಡ ಬೋಳಿಯಾಡಿರ ವಿರುದ್ಧ, ಮಂಜಂಡ ಪೊನ್ನ ಕಚ್ಚಿರ ತಂಡಗಳ ವಿರುದ್ಧ 1- 0 ಅಂತರದ ಗೆಲುವು ಸಾಧಿಸಿದವು.

ಬಡ್ಡೀರ ಚಾರಿಮಂಡದ ವಿರುದ್ದ, ಕಾಲಚಂಡ ಬೊಳ್ಳಚೆಟ್ಟೀರ ತಂಡಗಳ ವಿರುದ್ಧ 1- 0 ಅಂತರದ ಗೆಲುವು ಸಾಧಿಸಿದವು.

ಕಳ್ಳೀರ ತಂಡವು ಮುಕ್ಕಾಟಿರ( ಕುಂಜಲಗೇರಿ) ತಂಡದ ವಿರುದ್ಧ 3 -1 ಅಂತರದ ಗೆಲುವು ಸಾಧಿಸಿದರೆ, ಬಡ್ಡಿರ ಚಾರಿಮಂಡ ವಿರುದ್ಧ 1-0 ಅಂತರದ ಗೆಲವು ಸಾಧಿಸಿತು. ಕುಂಡಚ್ಚಿರ ತಂಡವು ಮಾಪಂಗಡ ತಂಡದ ವಿರುದ್ಧ 2-1 ಅಂತರದ ಸೋಲನ್ನನುಭವಿಸಿತು. ಕಾಲಚಂಡ ಬೊಳ್ಳ ಚೆಟ್ಟಿರ ವಿರುದ್ಧ 1-0 ಅಂತರದ ಗೆಲವು ಸಾಧಿಸಿದರೆ ಮಲ್ಲಜ್ಜಿರ ಪೆಬ್ಬೆಟ್ಟಿರ ವಿರುದ್ಧ ಭರ್ಜರಿ ಜಯ ಸಾಧಿಸಿತು.

ಮಲ್ಲಜ್ಜಿರ ತಂಡದ ಆಟಗಾರರು 5 ಗೋಲು ಗಳಿಸಿದರೆ ಪೆಬ್ಬಟ್ಟಿರ ತಂಡದ ಆಟಗಾರರು ಯಾವುದೇ ಗೋಲು ಗಳಿಸಲಿಲ್ಲ.

ಉಳಿದಂತೆ ಸಿದ್ದಂಡ ವಿರುದ್ಧ ನಿಡುಮಂಡ, ಆಪಾಡಂಡ ವಿರುದ್ಧ ದಾಸಂಡ ಗೆಲವು ಸಾಧಿಸಿದವು. ದಾಸಂಡ 3- 0 ಅಂತರದಿಂದ ಗೆಲವು ಸಾಧಿಸಿತು.

ಸಮಬಲದ ಹೋರಾಟ:

ಅಜ್ಜೆಟ್ಟಿರ ಮತ್ತು ಬಟ್ಟಿರ ತಂಡಗಳ ನಡುವೆ ಸಮಬಲದ ಹೋರಾಟ ನಡೆಯಿತು ಬಳಿಕ ಟೈ ಬ್ರೇಕರ್ ನಲ್ಲಿ ಅಜ್ಜೆಟ್ಟಿ ಮೋಹನ್ 3 ಗೋಲು ಗಳಿಸಿದರೆ

ಬಟ್ಟೀರ ಬೋಜಣ್ಣ ಮತ್ತು ಬೋಪಣ್ಣ ತಲಾ ಒಂದು ಗೋಲು ಗಳಿಸಿದರು.

ಪಟ್ಟಚೆರುವಾಳಂಡ ಮತ್ತು ಮಳವಂಡ ತಂಡಗಳ ನಡುವೆ ಸಮಬಲದ ಹೋರಾಟ ನಡೆಯಿತು. ಟೈ ಬ್ರೇಕರ್ ನಲ್ಲಿ ಪಟ್ಟಚೆರುವಾಳಂಡ 5-4 ಅಂತರದಿಂದ ಮಳವಂಡ ತಂಡದ ವಿರುದ್ಧ ಗೆಲವು ಸಾಧಿಸಿತು. ಮುಕ್ಕಾಟಿರ (ಕುಂಬಳದಾಳು) ತಂಡವು ತಿರುತೆರ ತಂಡದ ವಿರುದ್ಧ 3-0 ಅಂತರದ ಗೆಲವು ಸಾಧಿಸಿತು.

ಮಲ್ಲಂಡ ಬಾಚಿರ ವಿರುದ್ಧ 3-0 ಅಂತರದಿಂದ ಜಯ ಗಳಿಸಿತು. ಮಂಗೇರ ವಿರುದ್ಧ ಕೊಟ್ಟಂಗಡ ಮುಂದಿನ ಸುತ್ತು ಪ್ರವೇಶಿಸಿತು. ಮಚ್ಚಾರಂಡ ಐಮುಡಿಯಂಡ ವಿರುದ್ಧ ಜಯ ಸಾಧಿಸಿತು. ದೇಯಂಡ ಓಡಿಯಂಡ ವಿರುದ್ಧ ಟೈಬ್ರೇಕರ್‌ನಲ್ಲಿ 3-2 ಅಂತರದಿಂದ ಗೆದ್ದು ಮುಂದಿನ ಸುತ್ತು ಪ್ರವೇಶಿಸಿತು.

ಉಳಿದಂತೆ ಪಳಂಗಿಯಂಡ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು.

.............

ಇಂದಿನ ಪಂದ್ಯಗಳುಮೈದಾನ ಒಂದು

9 ಗಂಟೆಗೆ: ಚೆರುಮಂದಂಡ- ಕೇಚೆಟ್ಟಿರ

10 ಗಂಟೆಗೆ: ಪೊರ್ಕೊಂಡ-ಕಂಗಂಡ

11 ಗಂಟೆಗೆ: ಮಂದೆಯಡ-ನಂಬಿಯಪಂಡ

1 ಗಂಟೆಗೆ: ಅರಮನಮಾಡ –ಚೀಯಕಪೂವಂಡ

2 ಗಂಟೆಗೆ: ಬಾಚಿನಡಂಡ -ಚೇಮಿರ

3 ಗಂಟೆಗೆ: ಕರವಂಡ -ಕೋಳೆರ

...............

ಮೈದಾನ ಎರಡು

9 ಗಂಟೆಗೆ: ಬುಟ್ಟಿಯಂಡ- ಬೇಪಡಿಯಂಡ

10 ಗಂಟೆಗೆ: ಕಳಂಗಡ-ಆಪ್ಪಚ್ಚಿರ

11 ಗಂಟೆಗೆ: ಚಂಗುಳಂಡ- ಪಾಲೆಯಂಡ

1 ಗಂಟೆಗೆ: ಚೊಟ್ಟೆಯಂಡ- ಮೀದೇರಿರ

2 ಗಂಟೆಗೆ: ಚಿಂಡಮಾಡ-ಕೇಟೋಳಿರ

3 ಗಂಟೆಗೆ: ಕುಂಚೆಟ್ಟಿರ -ಮಾಪಣಮಾಡ.................

ಮೈದಾನ 39 ಗಂಟೆಗೆ: ನಾಯಕಂಡ-ತೆಕ್ಕಂಡ

11 ಗಂಟೆಗೆ: ಮೇಚಂಡ-ಬಳ್ಳಂಡ

1 ಗಂಟೆಗೆ: ಚೆಟ್ಟೀರ -ಇಂಡಂಡ

2 ಗಂಟೆಗೆ: ಕೊಟ್ಟುಕಟ್ಟೀರ -ಮಾನಿಪಂಡ

3 ಗಂಟೆಗೆ: ಪುಲ್ಲೆರ-ಅಜ್ಜಿನಂಡ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೌಚಾಲಯಕ್ಕೆ ಬೀಗ ಹಾಕಿ ಮೂತ್ರ ವಿಸರ್ಜನೆ ತಡೆಗೆ ಕನ್ನಡಿ!
ಚಿರತೆಗೆ ಬಾಲಕ ಬಲಿ : ನಾಗಮಲೆಗೆ ಪ್ರಯಾಣ ನಿಷೇಧ