ಪುತ್ತರಿರ ಐನ್ ಮನೆಯಲ್ಲಿ ಕೈಲ್ ಪೊಳ್ದ್ ಸಂಭ್ರಮ

KannadaprabhaNewsNetwork |  
Published : Sep 04, 2026, 03:00 AM IST
 | Kannada Prabha

ಸಾರಾಂಶ

ಕೊಡವ ಸಂಪ್ರದಾಯ, ಕುಟುಂಬದ ಒಗ್ಗಟ್ಟು ಹಾಗೂ ಶೌರ್ಯದ ಪ್ರತೀಕವಾಗಿರುವ ಕೈಲ್ ಪೊಳ್ದ್ ನಮ್ಮೆಯನ್ನು ಚೆಟ್ಟಳ್ಳಿಯ ಪುತ್ತರಿರ ಐನ್ ಮನೆಯಲ್ಲಿ ಸಂಪ್ರದಾಯಬದ್ಧವಾಗಿ ಆಚರಿಸಲಾಯಿತು.

ಚೆಟ್ಟಳ್ಳಿ: ಕೊಡವ ಸಂಪ್ರದಾಯ, ಕುಟುಂಬದ ಒಗ್ಗಟ್ಟು ಹಾಗೂ ಶೌರ್ಯದ ಪ್ರತೀಕವಾಗಿರುವ ಕೈಲ್ ಪೊಳ್ದ್ ನಮ್ಮೆಯನ್ನು ಚೆಟ್ಟಳ್ಳಿಯ ಪುತ್ತರಿರ ಐನ್ ಮನೆಯಲ್ಲಿ ಸಂಪ್ರದಾಯಬದ್ಧವಾಗಿ ಆಚರಿಸಲಾಯಿತು.ಬೆಳಿಗ್ಗೆ ಕುಟುಂಬಸ್ಥರು ಐನ್ ಮನೆಯಲ್ಲಿ ಸೇರಿ ಹಿರಿಯರ ಆಶೀರ್ವಾದ ಪಡೆದರು. ಬಳಿಕ ಹಿರಿಯರಾದ ಪುತ್ತರಿರ ಗಣೇಶ್ ಭೀಮಯ್ಯ ಅವರು ನೆಲ್ಲಕ್ಕಿ ನಡುಬಾಡೆಯಲ್ಲಿ ಕೋವಿ ಹಾಗೂ ಕತ್ತಿಯನ್ನು ಇಟ್ಟು, ಗುರುಕಾರೋಣನಿಗೆ ಮೀದಿ ನೀರಿಟ್ಟು ಪೂಜೆ ಸಲ್ಲಿಸಿದರು. ಕುಲದೇವರಾದ ಇಗ್ಗುತಪ್ಪ, ಕಾವೇರಮ್ಮ ಹಾಗೂ ಕುಟುಂಬದ ಗುರುಕಾರೋಣರು ಕುಟುಂಬದ ಎಲ್ಲರಿಗೂ ಒಳಿತನ್ನು ಕರುಣಿಸಲಿ ಎಂದು ಪ್ರಾರ್ಥಿಸಲಾಯಿತು.

ನಂತರ ಅಡುಗೆಕೋಣೆಯಲ್ಲಿ ಮಹಿಳೆಯರು ಗುರುಕಾರೋಣನಿಗೆ ಮೀದಿ ನೀರಿಟ್ಟು ಪೂಜೆ ಸಲ್ಲಿಸಿದರು. ಹಿರಿಯರಾದ ಪುತ್ತರಿರ ಕಾಶಿ ಸುಬ್ಬಯ್ಯ ಅವರು ಕುಟುಂಬದ ಸದಸ್ಯರಿಗೆ ಆರೋಗ್ಯ, ಐಶ್ವರ್ಯ ಹಾಗೂ ನೆಮ್ಮದಿ ದೊರೆಯಲಿ ಎಂದು ಪ್ರಾರ್ಥಿಸಿದರು.

ಗುಂಡು ಹೊಡೆದು ಶೌರ್ಯಪ್ರದರ್ಶನ: ಕೈಲ್ ಪೊಳ್ದ್ ನಮ್ಮೆಯ ವಿಶೇಷತೆಯಂತೆ ಹಬ್ಬದ ಅಂಗವಾಗಿ ಸಾಂಪ್ರದಾಯಿಕ ವಿಶೇಷ ಭೋಜನವನ್ನು ಕುಟುಂಬಸ್ಥರು ಸವಿದರು. ಬಳಿಕ ಹಿರಿಯರು, ಕಿರಿಯರು ಹಾಗೂ ಮಕ್ಕಳು ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ತಮ್ಮ ಶೌರ್ಯ ಮತ್ತು ಕೋವಿ ಸಂಸ್ಕೃತಿಯ ಪ್ರದರ್ಶನ ನೀಡಿದರು.

ಕುಟುಂಬದ ಕಾರ್ಯದರ್ಶಿ ಪುತ್ತರಿರ ಸೀತಮ್ಮ ಮೊಣ್ಣಪ್ಪ ವಂದಿಸಿದರು. ಬಳಿಕ ಊರಿನವರು ಮಂದ್‌ನಲ್ಲಿ ಸೇರಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಸಂಭ್ರಮಿಸಿದರು. ಪರಸ್ಪರ ಶುಭಾಶಯ ಹಾಗೂ ಸೌಹಾರ್ದತೆಯೊಂದಿಗೆ ಕೈಲ್ ಪೊಳ್ದ್ ಆಚರಣೆಗೆ ಸಂಭ್ರಮದ ತೆರೆ ಎಳೆಯಲಾಯಿತು.

ಕೊಡವ ಸಂಸ್ಕೃತಿಯ ವಿಶಿಷ್ಟ ಆಚರಣೆಗಳಲ್ಲಿ ಒಂದಾದ ಕೈಲ್ ಪೊಳ್ದ್, ಕುಟುಂಬದ ಹಿರಿಯರಿಗೆ ಗೌರವ ಸಲ್ಲಿಸುವುದರೊಂದಿಗೆ ಪರಂಪರೆ ಮತ್ತು ಶೌರ್ಯದ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಹಬ್ಬವಾಗಿ ಪುತ್ತರಿರ ಐನ್ ಮನೆಯಲ್ಲಿ ಆಚರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಷ್ಟ್ರೀಯ ಸೇವಾ ಯೋಜನೆ ಘಟಕ ಉದ್ಘಾಟನೆ
ಹಾರಂಗಿ ಸಾಕಾನೆ ಶಿಬಿರ ಪ್ರವಾಸಿಗರಿಗೆ ಶೀಘ್ರ ಮುಕ್ತ