ವಸ್ತು ಪ್ರದರ್ಶನ, ಮನರಂಜನಾ ಆಟಗಳಿಗೆ ಚಾಲನೆ

KannadaprabhaNewsNetwork |  
Published : May 11, 2026, 03:45 AM IST
ಕೊಡವೂರು ಮಹಾರುದ್ರ ಯಾಗ: ವಸ್ತು ಪ್ರದರ್ಶನ - ಮನೋರಂಜನಾ ಆಟಗಳಿಗೆ ಚಾಲನೆ ನೀಡಲಾಯಿತು | Kannada Prabha

ಸಾರಾಂಶ

ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥ ನಾಡಿನ ಜನರ ಸುಭೀಕ್ಷೆಗಾಗಿ ಮೇ 14ರಿಂದ 19ರವರೆಗೆ ಮಹಾರುದ್ರ ಯಾಗದ ಪ್ರಯುಕ್ತ ವಸ್ತುಪ್ರದರ್ಶನ ಮಳಿಗೆ ಹಾಗೂ ಮನರಂಜನಾ ಆಟಗಳಿಗೆ ಭಾನುವಾರ ಚಾಲನೆ ನೀಡಲಾಯಿತು.

ಉಡುಪಿ: ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥ ನಾಡಿನ ಜನರ ಸುಭೀಕ್ಷೆಗಾಗಿ ಮೇ 14ರಿಂದ 19ರವರೆಗೆ ಮಹಾರುದ್ರ ಯಾಗದ ಪ್ರಯುಕ್ತ ವಸ್ತುಪ್ರದರ್ಶನ ಮಳಿಗೆ ಹಾಗೂ ಮನರಂಜನಾ ಆಟಗಳಿಗೆ ಭಾನುವಾರ ಚಾಲನೆ ನೀಡಲಾಯಿತು.ಹಿರಿಯ ಕಾಂಗ್ರೆಸ್ ನಾಯಕಿ ಸರಳಾ ಬಿ. ಕಾಂಚನ್ ರಿಬ್ಬನ್ ಕತ್ತರಿಸುವ ಮೂಲಕ ವಸ್ತುಪ್ರದರ್ಶನ ಮಳಿಗೆ ಹಾಗೂ ಮನರಂಜನಾ ಆಟಗಳಿಗೆ ಚಾಲನೆ ನೀಡಿದರು. “ಪ್ರತಿಭೆ ನಿಮ್ಮದು, ವೇದಿಕೆ ನಮ್ಮದು” ಪ್ರತಿಭಾ ಪ್ರದರ್ಶನಾ ಕಾರ್ಯಕ್ರಮ ವೇದಿಕೆಗೆ ಉಡುಪಿ ಜಿಲ್ಲಾ ಮಹಿಳಾ ಮಂಡಳಗಳ ಒಕ್ಕೂಟದ ಅಧ್ಯಕ್ಷೆ ವಾಸಂತಿ ರಾವ್ ಕೊರಡ್ಕಲ್ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಸರಳಾ ಬಿ. ಕಾಂಚನ್, ತಮ್ಮ ಕುಟುಂಬ ಹಾಗೂ ಸಮಾಜದ ಎಲ್ಲರೂ ಜೊತೆಯಾಗಿ ಸೇರಿ ನಡೆಸಲು ಉದ್ದೇಶಿಸಿರುವ ಮಹಾರುದ್ರ ಯಾಗಕ್ಕೆ ಸರ್ವರೂ ಕೂಡ ಸಹಕಾರ ನೀಡುವಂತೆ ಮನವಿ ಮಾಡಿದರು.

ಮಹಾರುದ್ರ ಯಾಗ ಸಮಿತಿ ಕಾರ್ಯಾಧ್ಯಕ್ಷ ಪ್ರಸಾದ್ರಾಜ್ ಕಾಂಚನ್ ಮಹಾರುದ್ರ ಯಾಗವನ್ನು ನಾಡ ಹಬ್ಬದಂತೆ ಆಚರಿಸಲು ನಿರ್ಧರಿಸಿದ್ದೇವೆ. ವಿವಿಧ ಧಾರ್ಮಿಕ, ಮನರಂಜನೆ, ಕ್ರೀಡೋತ್ಸವ, ಆರೋಗ್ಯ ಶಿಬಿರ, ಉದ್ಯೋಗ ಮೇಳಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಮೇ 10ರಿಂದ 20ರವರೆಗೆ ಮನರಂಜನೆಗಾಗಿ ಜಾಯಿಂಟ್ ವಿಲ್, ಬೃಹತ್ ವಸ್ತುಪ್ರದರ್ಶನ ಏರ್ಪಡಿಸಲಾಗಿದೆ. 14ರಂದು ಮಲ್ಪೆಯಿಂದ ಕೊಡವೂರು ಶಂಕರನಾರಯಣ ದೇವಸ್ಥಾನದವರೆಗೆ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. 15ರಂದು ಮಹಾರುದ್ರ ಯಾಗ, ಗಣ ಯಾಗ ಧಾರ್ಮಿಕ ವಿಧಿವಿಧಾನಗಳು ಆರಂಭಗೊಳ್ಳಲಿವೆ. ಅಂದು ಸಂಜೆ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ ಎಂದು ತಿಳಿಸಿದರು. 16ರಂದು ಉಚಿತ ಆರೋಗ್ಯ ಶಿಬಿರ, 17ರಂದು ಮಲ್ಪೆ ಬೀಚಲ್ಲಿ ಸಾಂಪ್ರದಾಯಿಕ ಕ್ರೀಡೆಗಳ ಸ್ಪರ್ಧೆಗಳು ನಡೆಯಲಿದ್ದು, ಅಂದು ಸಂಜೆ 6 ಗಂಟೆಗೆ ಮಲ್ಪೆ ಕಡಲ ತೀರದಲ್ಲಿ ವಾರಣಾಸಿಯ ಪುರೋಹಿತರಿಂದ ಗಂಗಾರತಿ ನೆರವೇರಲಿದೆ. ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸಲಿದ್ದಾರೆ. ಅಂದು ರಾತ್ರಿ 8ಕ್ಕೆ ದಕ್ಷಿಣ ಭಾರತದ ಖ್ಯಾತ ಗಾಯಕಿ ಮಂಗ್ಲಿ ಅವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. 18ರಂದು ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದರು. ಈ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಮಾಜಿ ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಕೊಡವೂರು ದೇವಸ್ಥಾನದ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಯಾಗ ಸಮಿತಿ ಪ್ರಧಾನ ಸಂಚಾಲಕ ತಾರನಾಥ ಪೂಜಾರಿ ಮತ್ತು ಕೆ. ಕೃಷ್ಣಮೂರ್ತಿ ಆಚಾರ್ಯ, ಸಂಚಾಲಕರಾದ ನಂದಕಿಶೋರ್ ಕೆಮ್ಮಣ್ಣು, ರಮೇಶ್ ತಿಂಗಳಾಯ, ಪದಾಧಿಕಾರಿಗಳಾದ ಡಾ. ವಿಜಯೇಂದ್ರ ವಸಂತ್, ಟಿ. ರಾಘವೇಂದ್ರ ರಾವ್ ಕೊಡವೂರು, ರಾಜ ಎ. ಸೇರಿಗಾರ, ಪೀಟರ್ ಸಿಕ್ವೇರಾ, ರೂಫಸ್ ಸಿಕ್ವೇರಾ, ಹೇಮಾವತಿ ಸಾಲ್ಯಾನ್, ಕೇಶವ ಕೋಟ್ಯಾನ್ ಹಾಗೂ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸೇವಾ ಕಾರ್‍ಯದಲ್ಲಿ ರೋಟರಿ ಪ್ರಮುಖ ಪಾತ್ರ: ರಾಮಕೃಷ್ಣ
ಬಿಸಿಲಾಘಾತ: ಕಾಫಿ, ಕಾಳುಮೆಣಸು ಕೃಷಿಕರಿಗೆ ಆತಂಕ