ಕಲ್ಯಾಣ ಕರ್ನಾಟಕದ ಹಣ್ಣಿನ ಕಣಜ ಎಂದೇ ಖ್ಯಾತಿಯಾಗಿರುವ ಕೊಪ್ಪಳ ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆಯಿಂದ ಐದು ದಿನಗಳ ಕಾಲ ಆಯೋಜಿಸಿರುವ 8ನೇ ವರ್ಷದ ಹಣ್ಣು ಮತ್ತು ಜೇನು ಮೇಳದಲ್ಲಿ ಜಗತ್ತಿನ ಅತಿ ದುಬಾರಿ ದ್ರಾಕ್ಷಿಯನ್ನು ಪ್ರದರ್ಶನಕ್ಕೆ ಇಡಲಾಗಿದೆ.
ಕೊಪ್ಪಳ : ಕಲ್ಯಾಣ ಕರ್ನಾಟಕದ ಹಣ್ಣಿನ ಕಣಜ ಎಂದೇ ಖ್ಯಾತಿಯಾಗಿರುವ ಕೊಪ್ಪಳ ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆಯಿಂದ ಐದು ದಿನಗಳ ಕಾಲ ಆಯೋಜಿಸಿರುವ 8ನೇ ವರ್ಷದ ಹಣ್ಣು ಮತ್ತು ಜೇನು ಮೇಳದಲ್ಲಿ ಜಗತ್ತಿನ ಅತಿ ದುಬಾರಿ ದ್ರಾಕ್ಷಿಯನ್ನು ಪ್ರದರ್ಶನಕ್ಕೆ ಇಡಲಾಗಿದೆ.
ಜಪಾನ್‌ನ ರೂಬಿ ರೋಮನ್ ದ್ರಾಕ್ಷಿ ಹಣ್ಣಿನ ಬೆಲೆ 1 ಕೇಜಿಗೆ ₹8 ಲಕ್ಷವಾಗಿದ್ದು, ಇದು ನೋಡುಗರನ್ನು ಆಕರ್ಷಿಸುತ್ತಿದೆ.
ಇದರೊಂದಿಗೆ ವಿವಿಧ ವಿದೇಶಿ ಹಣ್ಣಿನ ತಳಿಗಳಾದ ಅವಕಾಡೋಫ್ಲಮ್, ಪೀಚ್, ಲಿಚ್ಚಿ, ರೆಡ್‌ಗ್ಲೋಬ್, ಕಿವಿ ಫ್ರೂಟ್, ರಾಮಭೂತಾನ, ಮ್ಯಾಂಗೋಸ್ಟೀನ್, ಜಪಾನ್ ಮ್ಯಾಂಗೋ, ಐಸ್‌ಗಾವಾ, ಅಮೆರಿಕನ್ ಆ್ಯಪಲ್, ಗ್ರೀನ್ ಆ್ಯಪಲ್ ಪ್ರದರ್ಶನಕ್ಕಿವೆ.