;Resize=(412,232))
ಯಲಬುರ್ಗಾ : ಗ್ಯಾರಂಟಿ ಯೋಜನೆಯ ರೂವಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇವರಾಜ ಅರಸು ಅವರ ದೀರ್ಘಾವಧಿ ಆಡಳಿತದ ದಾಖಲೆ ಮುರಿದ ಸಂಭ್ರಮಾಚರಣೆಗೆ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಲಿಂಗನಬಂಡಿ ಗ್ರಾಮದ ದೇವಕ್ಕಮ್ಮ ನಾಗರಾಜ ಹುಲ್ಲೆ ಎಂಬುವರು ತಮ್ಮ ಆರು ತಿಂಗಳ ಗೃಹಲಕ್ಷ್ಮೀ ಹಣ ನೀಡಿ ಗಮನ ಸೆಳೆದಿದ್ದಾರೆ.
ಗ್ರಾಮದಲ್ಲಿ ಸಿದ್ದರಾಮಯ್ಯ ಅಭಿಮಾನಿ ಬಳಗದ ಮೂಲಕ ಹಣ ನೀಡಿ, ಅದರಿಂದ ಪ್ಲೆಕ್ಸ್ ಹಾಕಿಸಿದ್ದಲ್ಲದೆ, ಸಾರ್ವಜನಿಕರಿಗೆ ಉಪಾಹಾರ ಹಂಚಿ, ಪ್ಲೆಕ್ಸ್‌ಗೆ ಹಾಲಿನ ಅಭಿಷೇಕ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ದೇವಕ್ಕಮ್ಮ, ಸಿದ್ದರಾಮಯ್ಯ ಅವರು ನಾಡಿನ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ವಿಶೇಷವಾಗಿ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡುತ್ತಿದ್ದಾರೆ. ಅವರು ಐದು ವರ್ಷವೂ ಸಿಎಂ ಆಗಿ ಮುಂದುವರೆಯಲಿ ಎಂದರು.
ಸಿಎಂ ಸಿದ್ದರಾಮಯ್ಯ ಸರ್ವ ಜನಾಂಗದ ಅಭಿವೃದ್ಧಿಗೆ ಶ್ರಮಿಸುವ ಜನಪರ ಕಾಳಜಿ ಇರುವ ನಾಯಕರಾಗಿದ್ದಾರೆ. ಬಡವರ ಆಶಾಕಿರಣವಾಗಿ ಜನಪರವಾದ ಆಡಳಿತ ನೀಡುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದ್ದಾರೆ.
- ದೇವಕ್ಕಮ್ಮ ನಾಗರಾಜ ಹುಲ್ಲೆ, ಲಿಂಗನಬಂಡಿ ನಿವಾಸಿ.