ಪ್ರತಿ ಶಾಲೆಯು ತನ್ನದೇ ಆದ ವಿಶೇಷತೆ ಹೊಂದಿರುತ್ತದೆ

ಕುಷ್ಟಗಿ:ಮಕ್ಕಳ ಕೈಯಲ್ಲಿ ಮೊಬೈಲ್‌ ಕೊಡುವ ಬದಲಿಗೆ ಕಲಿಕೆಗೆ ಪೂರಕವಾಗಿರುವ ಚಟುವಟಿಕೆ ಮಾಡಿಸಬೇಕು ಎಂದು ಪಪಂ ಅಧ್ಯಕ್ಷ ನಾರಾಯಣಗೌಡ ಮೆದಿಕೇರಿ ಹೇಳಿದರು.

ತಾಲೂಕಿನ ತಾವರಗೇರಾ ಪಟ್ಟಣದ ಎಕ್ಸಲೆಂಟ್‌ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಮತ್ತು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿ ಕಾಶಿನಾಥ ನಾಗಲಿಕರ ಮಾತನಾಡಿ, ಪ್ರತಿ ಶಾಲೆಯು ತನ್ನದೇ ಆದ ವಿಶೇಷತೆ ಹೊಂದಿರುತ್ತದೆ. ಆದರಂತೆ ಈ ಶಾಲೆಯಲ್ಲಿ ಮಕ್ಕಳ ಕಲಿಕೆ ಗುಣಮಟ್ಟ,ಶಿಕ್ಷಕರ ಬೋಧನೆ,ಆಟೋಟ, ಪಠ್ಯೇತರ ಚಟುವಟಿಕೆ ಸಹ ಇರಬಹುದು. ಆದ್ದರಿಂದ ನಮ್ಮ ಇಲಾಖೆ ಸಹ ಎಲ್ಲ ಶಾಲೆಗಳಿಗೆ ಸಮರ್ಪಕ ದಾಖಲಾತಿ,ಹಾಜರಾತಿ ಬೋಧನೆಯ ಪರಿಶೀಲನೆ ಮಾಡುತ್ತಿದ್ದು, ಒಟ್ಟಿನಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು ಎಂದರು.

ಪಿಎಸೈ ಚಂದ್ರಪ್ಪ ಮಾತನಾಡಿದರು, ಮುಖ್ಯ ಶಿಕ್ಷಕಿ ಶಕೀಲಾ ಶೆಟ್ಟಿ ವಾರ್ಷಿಕ ವರದಿ ಓದಿದರು. ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ,ಪೋಷಕರಿಗೆ ಬಹುಮಾನ ವಿತರಿಸಲಾಯಿತು. ಸಂಸ್ಥೆ ಅಧ್ಯಕ್ಷೆ ಅರುಣಾಕುಮಾರಿ ವಸ್ತ್ರದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಪಾಲಕರ ಸಮಿತಿ ಅಧ್ಯಕ್ಷ ಚನ್ನಪ್ಪ ನಾಲತ್ವಾಡ,ಉಪಾಧ್ಯಕ್ಷ ಸಂತೋಷ ಸರನಾಡಗೌಡರ, ಪೋಷಕರ ಪ್ರತಿನಿಧಿ ಕವಿತಾ ಗುಡಸಲಿ ವೀರಭದ್ರಪ್ಪ ಕಾರಟಗಿ, ಶೃತಿ ಸಂಕನೂರು, ರಾಘವೇಂಧ್ರ, ಚಂದ್ರಶೇಖರ ದಂಡಿನ ಮತ್ತು ಕರಾಟೆ ಶಿಕ್ಷಕರು ಇದ್ದರು. ಕವಿತಾ ಸ್ವಾಗತಿಸಿದರು, ಶಿಕ್ಷಕಿ ಜ್ಯೋತಿ ನಿರೂಪಿಸಿ ವಂದಿಸಿದರು.