ಕೊಪ್ಪಳ ಉಪನೋಂದಣಿ ಕಚೇರಿಯಲ್ಲಿ ಭ್ರಷ್ಟಾಚಾರ ತಡೆಗಟ್ಟಲು ಕರ್ನಾಟಕ ರಕ್ಷಣಾ ವೇದಿಕೆ ಜನಸೇನೆ ಒತ್ತಾಯ

KannadaprabhaNewsNetwork |  
Published : Jan 05, 2024, 01:45 AM IST
4ಕೆಪಿಎಲ್1:ಕೊಪ್ಪಳದಲ್ಲಿ ತಾಲೂಕಿನ ಉಪ ನೊಂದಣೆ ಕಛೇರಿಯಲ್ಲಿ ಅಧಿಕವಾಗಿ ಭ್ರಷ್ಟಾಚಾರ ನಡೆಯುತ್ತಿದ್ದು ತಡೆಹಿಡಿಯಬೇಕು ಎಂದು ಕರ್ನಾಟಕ ರಕ್ಷಣ ವೇಧಿಕೆ ಜನಸೇನೆಯವರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ. | Kannada Prabha

ಸಾರಾಂಶ

ಉಪನೋಂದಣಿ ಕಚೇರಿಯಲ್ಲಿ ಖರೀದಿ ನೋಂದಣಿ, ಮಾರಾಟ, ಆಸ್ತಿ ಭೋಜ ಇತರೆ ಕೆಲಸ ಕಾರ್ಯಗಳಿಗೆ ಸಾರ್ವಜನಿಕರು ನಿತ್ಯ ಉಪ ನೋಂದಣಿ ಕಚೇರಿಗೆ ತೆರಳುತ್ತಾರೆ. ಆದರೆ ಅಧಿಕಾರಿಗಳು ಸರ್ಕಾರದ ಶುಲ್ಕ ಹೊರತು ಪಡಿಸಿ ತಮಗೆ ಮನಬಂದಂತೆ ಹಣ ಪಡೆಯುತ್ತಿದ್ದಾರೆ.

ಕೊಪ್ಪಳ: ತಾಲೂಕಿನ ಉಪ ನೋಂದಣಿ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಇದನ್ನು ತಡೆಹಿಡಿಯಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜನಸೇನೆಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.ತಾಲೂಕಿನ ಉಪನೋಂದಣಿ ಕಚೇರಿಯಲ್ಲಿ ಖರೀದಿ ನೋಂದಣಿ, ಮಾರಾಟ, ಆಸ್ತಿ ಭೋಜ ಇತರೆ ಕೆಲಸ ಕಾರ್ಯಗಳಿಗೆ ಸಾರ್ವಜನಿಕರು ನಿತ್ಯ ಉಪ ನೋಂದಣಿ ಕಚೇರಿಗೆ ತೆರಳುತ್ತಾರೆ. ಆದರೆ ಅಧಿಕಾರಿಗಳು ಸರ್ಕಾರದ ಶುಲ್ಕ ಹೊರತು ಪಡಿಸಿ ತಮಗೆ ಮನಬಂದಂತೆ ಹಣ ಪಡೆಯುತ್ತಿದ್ದಾರೆ. ಜಮೀನು ಮಾಲೀಕರಲ್ಲಿ ಹಾಗೂ ನೋಂದಣಿಯ ಮಧ್ಯವರ್ತಿಗಳ ಮೂಲಕ ಅಧಿಕಾರಿಗಳು ಕಚೇರಿಯಲ್ಲಿ ಅನಧಿಕೃತವಾಗಿ ಕೆಲಸಗಾರರನ್ನು ಇಟ್ಟುಕೊಂಡು ಹಳ್ಳಿಗಳಿಂದ ಬರುವ ಜನರಲ್ಲಿ ಸಾವಿರಾರು ರುಪಾಯಿ ವಸೂಲಿ ಮಾಡುತ್ತಿದ್ದಾರೆ ಎಂದು ಮನವಿಯಲ್ಲಿ ದೂರಲಾಗಿದೆ.ಕರವೇ ಜನಸೇನೆ ಜಿಲ್ಲಾಧ್ಯಕ್ಷ ಬಸವರಡ್ಡಿ ಶಿವನಗೌಡ್ರ, ಪ್ರಮುಖರಾದ ಪರಶುರಾಮ, ಪ್ರಭುರಾಜ ಕರ್ಲಿ, ವಿನಯಕುಮಾರ್ ಅಡಿವಿಬಾವಿ, ನಾಗಲಿಂಗ ನಾಯಕ್, ಸಿದ್ದು ಅಂಗಡಿ, ಶಿವಣ್ಣ, ಆನಂತ ಕುಮಾರ ಜಂತಕಲ್‌, ಕಾಸಿಂಸಾಬ ಕುಷ್ಟಗಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಸಿಆರ್‌ಇ ಎಸ್ಪಿ, ಡಿವೈಎಸ್ಪಿ ವಿರುದ್ಧ ದಲಿತ ಇನ್ಸ್‌ಪೆಕ್ಟರ್ ಕಿರುಕುಳ ಆರೋಪ
ಈ ಬಾರಿ ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿ ಶೇ. 30-35ರಷ್ಟು ಇಳಿಮುಖ