ಕನ್ನಡಪ್ರಭ ವಾರ್ತೆ ಕೊರಟಗೆರೆ
ಪಟ್ಟಣದ ನಿರೀಕ್ಷಣ ಮಂದಿರದಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿ ಮಾತನಾಡಿದ ಅವರು, ಜಾತ್ಯಾತೀತವಾಗಿ ಎಲ್ಲಾ ಸಮುದಾಯಗಳಿಂದ ಗೌರವಿಸಲ್ಪಡುವ ನಾಯಕರಾಗಿದ್ದು, ರಾಜ್ಯ ಸರ್ಕಾರ ವಿವಿಧ ಜಾತಿ ಸಮುದಾಯ ಮತ ಪಂಥಗಳ ನಾಯಕರ ಜನ್ಮದಿನಾಚರಣೆಯನ್ನು ಆಚರಣೆ ಮಾಡುತ್ತಿದೆ. ಈ ಬಾರಿ ಮಂಡಿಸಿರುವ ಬಜೆಟ್‌ನಲ್ಲಿ ಕೆಂಪೇಗೌಡ ಅವರ ಜಯಂತಿಯನ್ನು ನಿರ್ಲಕ್ಷ್ಯ ಮಾಡಲಾಗಿದ್ದು, ಕೂಡಲೇ ಸರ್ಕಾರ ಕೆಂಪೇಗೌಡ ಅವರಿಗೆ ಸೂಕ್ತ ಗೌರವ ಸ್ಥಾನಮಾನ ನೀಡಿ ಸರ್ಕಾರಿ ರಜೆಯೊಂದಿಗೆ ಜನ್ಮ ಜಯಂತಿಯನ್ನು ಆಚರಣೆ ಮಾಡಬೇಕು ಎಂದು ಒತ್ತಾಯಿಸಿದರು.
ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಯುವ ಪಡೆ ರಾಜ್ಯ ಉಪಾಧ್ಯಕ್ಷ ರಂಗಶಾಮಯ್ಯ ಮಾತನಾಡಿ, ನಾಡಪ್ರಭು ಕೆಂಪೇಗೌಡ ಅವರ ಆಡಳಿತ ಈಗಿನ ಸರ್ಕಾರಗಳಿ ಮಾದರಿಯಾಗಿದ್ದು, ಇಂತಹ ನಾಯಕನ ಜನ್ಮದಿನಾಚರಣೆ ಸಕಲ ಗೌರವದೊಂದಿಗೆ ಆಚರಿಸಬೇಕಾಗಿದೆ. ಇದು ಸರ್ಕಾರದ ಕರ್ತವ್ಯ. ಆದರೆ ರಾಜ್ಯ ಸರ್ಕಾರ ಜಯಂತ್ಯುತ್ಸವವನ್ನು ಆಚರಣೆ ಮಾಡುವುದನ್ನು ಬಜೆಟ್‌ನಲ್ಲಿ ಯಾವುದೇ ರೀತಿಯ ಅನುದಾನ ಘೋಷಿಸದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದರು.ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ರಣಭೈರೇಗೌಡ ಅವರ ಸಮಾಧಿ ಇದ್ದು, ಇಲ್ಲಿನ ಸ್ಥಳೀಯ ಆಡಳಿತ ಅದನ್ನು ಅಭಿವೃದ್ಧಿಗೊಳಿಸದೆ ನಿರ್ಲಕ್ಷ್ಯ ಮಾಡಿದೆ. ಕೂಡಲೇ ಇಲ್ಲಿನ ಸ್ಥಳೀಯ ಆಡಳಿತ ಅಭಿವೃದ್ಧಿಗೊಳಿಸಿ ಪುನರುಜ್ಜೀವನಗೊಳಿಸಬೇಕು. ಕೊರಟಗೆರೆ ತಾಲೂಕು ಮಟ್ಟದ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಯುವಪಡೆಯ ಶಾಖೆಯನ್ನು ಸ್ಥಾಪಿಸಲಾಗುವುದು. ಒಕ್ಕಲಿಗ ಸಮುದಾಯಕ್ಕೆ ಸಂಬಂಧಿಸಿದಂತಹ ಎಲ್ಲಾ ಹೋರಾಟಗಳಿಗೂ ಸಂಘಟನೆ ಸ್ಪಂದಿಸುವಂತಹ ಕೆಲಸಗಳು ನಡೆಯುತ್ತವೆ ಎಂದರು.
ಸಭೆಯಲ್ಲಿ ರಾಜ್ಯ ಕಾರ್ಯದರ್ಶಿ ಮಂಜುನಾಥ್ ಆರ್., ರಾಜ್ಯ ಸಂಘಟನಾ ಕಾರ್ಯದರ್ಶಿ ರಮೇಶ್ ಎಂ.ಜೆ.ಅರ್., ಆರ್. ಕೆಂಪಯ್ಯ, ಪುಟ್ಟರಾಜು ಜಿ., ರಾಮಚಂದ್ರಯ್ಯ, ವನಜಾಕ್ಷಿ , ಕೃಷ್ಣಪ್ಫ, ಪುಟ್ಟಯ್ಯ, ಗಿರೀಶ್, ಶ್ರೀಧರ್, ಶಿವಣ್ಣ, ಕಾಂತರಾಜು, ರಾಮಂಜಿಣಪ್ಪ, ಲೀಲಾವತಿ, ಕಾಮಣ್ಣ ಜಯರಾಮಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.