ಕೋಟ ಆನಂದ್ ಸಿ. ಕುಂದರ್ ಜನ್ಮದಿನ: ಸೇವಾಶ್ರಮಗಳಿಗೆ, ಅಶಕ್ತರಿಗೆ ಧನಸಹಾಯ

KannadaprabhaNewsNetwork |  
Published : May 08, 2024, 01:08 AM IST
ಆನಂದ7 | Kannada Prabha

ಸಾರಾಂಶ

ತಮ್ಮ ೭೬ನೇ ಜನ್ಮದಿನದ ಹಿನ್ನೆಲೆಯಲ್ಲಿ ಆನಂದ್‌ ಸಿ. ಕುಂದರ್‌, ಜನತಾ ಗ್ರೂಪ್ ಹಾಗೂ ಗೀತಾನಂದ ಫೌಂಡೇಶನ್ ಮೂಲಕ ಒಂದಿಷ್ಟು ಅನಾಥಾಶ್ರಮ, ವಿಕಲಚೇತನ, ಅಶಕ್ತರಿಗೆ ಸುಮಾರು ೬ ಲಕ್ಷ ರು.ಗೂ ಅಧಿಕ ಮೌಲ್ಯದ ಧನ ಸಹಾಯದ ಚೆಕ್ ವಿತರಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕೋಟ

ಅನಾಥಾಶ್ರಮಗಳ ನಿರ್ವಹಣೆಯೇ ಕ್ಲಿಷ್ಟಕರ, ಆದ್ದರಿಂದ ಅದರ ನಿರ್ವಹಣೆಗೆ ಅಗತ್ಯವಾದ ಆರ್ಥಿಕ ಕ್ರೋಡಿಕರಣ ಅಗತ್ಯ. ಈ ದಿಸೆಯಲ್ಲಿ ಗೀತಾನಂದ ಫೌಂಡೇಶನ್ ಮೂಲಕ ನೆರವು ಯೋಜನೆ ಸಹಕಾರಿಯಾಗಲಿ ಎಂದು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ. ಕುಂದರ್ ನುಡಿದರು.

ತಮ್ಮ ೭೬ನೇ ಜನ್ಮದಿನದ ಹಿನ್ನೆಲೆಯಲ್ಲಿ ಜನತಾ ಗ್ರೂಪ್ ಹಾಗೂ ಗೀತಾನಂದ ಫೌಂಡೇಶನ್ ಮೂಲಕ ಒಂದಿಷ್ಟು ಅನಾಥಾಶ್ರಮ, ವಿಕಲಚೇತನ, ಅಶಕ್ತರಿಗೆ ಸುಮಾರು ೬ ಲಕ್ಷ ರು.ಗೂ ಅಧಿಕ ಮೌಲ್ಯದ ಧನ ಸಹಾಯದ ಚೆಕ್ ವಿತರಿಸಿ ಮಾತನಾಡಿದರು.

ಕಳೆದ ವರ್ಷ ಅಮೃತಮಹೋತ್ಸವದ ಹಿನ್ನೆಲೆಯಲ್ಲಿ ಒಂದಿಷ್ಟು ಆಶ್ರಮಗಳಿಗೆ ನೆರವು ನೀಡಲಾಗಿದ್ದು, ಅದೇ ರೀತಿ ಈ ವರ್ಷವು ಹಮ್ಮಿಕೊಳ್ಳಲಾಗಿದೆ. ಅನಾಥಾಶ್ರಮಗಳು ನೆರಳು ನೀಡುವ ಧಾಮಗಳಾಗಿ ಕಾರ್ಯ ನಿರ್ವಹಿಸುತ್ತಿವೆ. ಈ ಕಾರ್ಯ ನಿತ್ಯ ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.

ಇದೇ ವೇಳೆ ಒಟ್ಟು ೧೩ ಅನಾಥಾಶ್ರಮ, ವಿಕಲಚೇತನ, ಅಶಕ್ತರಿಗೆ ಚೆಕ್ ಮೂಲಕ ಧನಸಹಾಯ ಹಸ್ತಾಂತರಿಸಿದರು.

ಈ ವೇಳೆ ಆಶ್ರಮಗಳ ಮುಖ್ಯಸ್ಥರು, ಜನತಾ ಸಂಸ್ಥೆಯ ಸಿಬ್ಬಂದಿ, ಗೀತಾನಂದ ಟ್ರಸ್ಟ್ ಪ್ರಮುಖರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಗೀತಾನಂದ ಫೌಂಡೇಶನ್, ಸಮಾಜಕಾರ್ಯ ವಿಭಾಗದ ರವಿಕಿರಣ್ ಕೋಟ ನಿರೂಪಿಸಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಪ್ಪ ಕ್ರಿಸ್ ಮಸ್ ಪ್ರಯುಕ್ತ ೨೧ರಂದು ಸೌಹಾರ್ದ ರ‍್ಯಾಲಿ
ಪ್ರತಿ ಮಹಿಳೆ ಸಮತೋಲನ ಆಹಾರ ಸೇವಿಸಬೇಕು: ಸೋನಾ ಮ್ಯಾಥ್ಯೂ