ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಪ್ಪಟ ದೇಶಪ್ರೇಮಿ- ಶಾಸಕ ಡಾ. ಚಂದ್ರು ಲಮಾಣಿ

KannadaprabhaNewsNetwork |  
Published : Aug 18, 2025, 12:00 AM IST
ಪೋಟೋ- ೧೬ ಎಸ್.ಎಚ್.ಟಿ. ೧ಕೆ- ಮೂರ್ತಿದಾನಿ ರಾಮಣ್ಣ ಕಂಬಳಿ ಅವರ ಮನೆಯ ಆವರಣದಲ್ಲಿ ಸಂಗೊಳ್ಳಿ ರಾಯಣ್ಣ ಜಯಂತಿಯ ಉತ್ಸವ ಮೂರ್ತಿಗೆ ಚಾಲನೆ ನೀಡಿದ ಶಾಸಕ ಡಾ.ಚಂದ್ರು ಲಮಾಣಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. | Kannada Prabha

ಸಾರಾಂಶ

ಬ್ರಿಟಿಷರ ವಿರುದ್ಧ ಸಿಡಿದೆದ್ದ ಅಪ್ಪಟ ದೇಶಪ್ರೇಮಿ ಸಂಗೊಳ್ಳಿ ರಾಯಣ್ಣ ನಿಜವಾದ ದೇಶಾಭಿಮಾನಿ. ಕಿತ್ತೂರು ರಾಣಿ ಚನ್ನಮ್ಮನ ಸೈನ್ಯದಲ್ಲಿ ಸೈನಿಕರಾಗಿ ಬ್ರಿಟಿಷರ ವಿರುದ್ಧ ಹೋರಾಡಿದರು. ನಾಡಿನ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು ಎಂದು ಶಾಸಕ ಡಾ. ಚಂದ್ರು ಕೆ. ಲಮಾಣಿ ಹೇಳಿದರು.

ಶಿರಹಟ್ಟಿ: ಬ್ರಿಟಿಷರ ವಿರುದ್ಧ ಸಿಡಿದೆದ್ದ ಅಪ್ಪಟ ದೇಶಪ್ರೇಮಿ ಸಂಗೊಳ್ಳಿ ರಾಯಣ್ಣ ನಿಜವಾದ ದೇಶಾಭಿಮಾನಿ. ಕಿತ್ತೂರು ರಾಣಿ ಚನ್ನಮ್ಮನ ಸೈನ್ಯದಲ್ಲಿ ಸೈನಿಕರಾಗಿ ಬ್ರಿಟಿಷರ ವಿರುದ್ಧ ಹೋರಾಡಿದರು. ನಾಡಿನ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು ಎಂದು ಶಾಸಕ ಡಾ. ಚಂದ್ರು ಕೆ. ಲಮಾಣಿ ಹೇಳಿದರು. ಸಂಗೊಳ್ಳಿ ರಾಯಣ್ಣ ಜಯಂತಿ ಅಂಗವಾಗಿ ಉತ್ಸವ ಮೂರ್ತಿ ಕೊಡುಗೆಯಾಗಿ ನೀಡಿದ ಪಟ್ಟಣದ ನಿವಾಸಿ ಮೂರ್ತಿದಾನಿ ರಾಮಣ್ಣ ಕಂಬಳಿ ಅವರ ಮಹಾಮನೆಯ ಆವರಣದಲ್ಲಿ ರಾಯಣ್ಣ ಮೂರ್ತಿಗೆ ಪುಷ್ಪಾರ್ಪಣೆ ಮಾಡುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.ಗೆರಿಲ್ಲಾ ಯುದ್ಧದ ಮೂಲಕ ಬ್ರಿಟಿಷರ ನಿದ್ದೆಗೆಡಿಸಿದ ಸಂಗೊಳ್ಳಿ ರಾಯಣ್ಣ ಸ್ವತಂತ್ರ ನಾಡಿನ ಕನಸು ಕಟ್ಟಿಕೊಂಡೇ ಹುತಾತ್ಮರಾದರು. ಬ್ರಿಟಿಷರ ವಿರುದ್ಧ ರಾಯಣ್ಣ ಸಾರಿದ ಸಮರ ಅವಿಸ್ಮರಣೀಯ. ವಸಾಹತುಶಾಹಿ ಸೈನ್ಯದ ವಿರುದ್ಧ ಸಿಡಿದೆದ್ದ ರಾಯಣ್ಣನಿಗೆ ಅಪಾರ ಜನ ಬೆಂಬಲ ದೊರೆತಿತ್ತು. ಕಿತ್ತೂರು ಸಂಸ್ಥಾನದ ರಾಣಿ ಚನ್ನಮ್ಮನ ಬಲಗೈ ಬಂಟನಾಗಿ ಶತ್ರುಗಳ ವಿರುದ್ದ ಹೋರಾಡಿದ ರಾಯಣ್ಣನ ಆದರ್ಶಗಳನ್ನು ಯುವಪೀಳಿಗೆ ಅಳವಡಿಸಿಕೊಳ್ಳಬೇಕು ಎಂದರು.ಸಂಗೊಳ್ಳಿ ರಾಯಣ್ಣ ಅವರ ಬದುಕು ಮತ್ತು ಹೋರಾಟ ಚರಿತ್ರಾರ್ಹವಾಗಿದೆ. ಜನತೆಗೆ ನಿರಂತರ ಸ್ಫೂರ್ತಿದಾಯಕವಾಗಿದೆ. ಅವರ ತತ್ವ, ಸಿದ್ಧಾಂತ ಎಲ್ಲರಿಗೂ ದಾರಿದೀಪವಾಗಿದೆ. ಬ್ರಿಟಿಷ ಈಸ್ಟ್ ಇಂಡಿಯಾ ಕಂಪನಿಯ ವಿರುದ್ದ ಅವರು ಸಾವಿನವರೆಗೂ ಹೋರಾಡಿದರು ಎಂದು ಹೇಳಿದರು.ಗೆರಿಲ್ಲಾ ಯುದ್ಧ ತಂತ್ರದ ರೂವಾರಿಯಾಗಿದ್ದ ಸಂಗೊಳ್ಳಿ ರಾಯಣ್ಣ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ. ದೇಶಕ್ಕಾಗಿ ಮಡಿದ ರಾಯಣ್ಣ ಶೌರ್ಯದ ಪ್ರತೀಕ. ಶೌರ್ಯ, ಪರಾಕ್ರಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಯೊಬ್ಬರಿಗೂ ಸ್ಫೂರ್ತಿಯ ಚಿಲುಮೆ. ಕಿತ್ತೂರು ಚೆನ್ನಮ್ಮನ ಬಲಗೈ ಬಂಟನಾಗಿ ಸ್ವಾತಂತ್ರ‍್ಯ ಹೋರಾಟಕ್ಕೆ ಕಿಚ್ಚು ಹಚ್ಚಿದ ಮೊದಲ ಕ್ರಾಂತಿ ಕಿಡಿಯೇ ಈ ರಾಯಣ್ಣ. ಇಂತಹ ಮಹಾನ್ ಹೋರಾಟಗಾರನ ದೇಶಪ್ರೇಮ ಇಂದಿನ ಯುವಕರಲ್ಲಿ ಒಡಮೂಡಬೇಕು. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರೊಂದಿಗೆ ಅವರನ್ನು ನಿತ್ಯ ಆರಾಧಿಸೋಣ ಎಂದು ಹೇಳಿದರು.ಈ ಸಂದರ್ಭದಲ್ಲಿ ಹುಲ್ಲೂರು ಅಮೋಘಿ ಮಠದ ಹಾಲುಮತ ಗುರುಗಳಾದ ಸಿದ್ದಯ್ಯ ಅಮೋಘೀಮಠ, ಮೂರ್ತಿದಾನಿ ರಾಮಣ್ಣ ಕಂಬಳಿ, ಸುನೀಲ ಮಹಾಂತಶೆಟ್ಟರ, ನಾಗರಾಜ ಲಕ್ಕುಂಡಿ, ಫಕೀರೇಶ ರಟ್ಟಿಹಳ್ಳಿ, ಸಂತೋಷ ಕುರಿ, ಜೆ.ಆರ್. ಕುಲಕರ್ಣಿ, ಶಂಕರ ಮರಾಠೆ, ಬಿ.ಡಿ. ಪಲ್ಲೇದ, ನಿಂಗಪ್ಪ ಬನ್ನಿ, ಗೂಳಪ್ಪ ಕರಿಗಾರ, ಪುಲಕೇಶಿ ಸ್ವಾಮಿ, ಬಸವರಾಜ ವಡವಿ, ದೇವು ಪೂಜಾರ, ಪರಶುರಾಮ ಡೊಂಕಬಳ್ಳಿ, ಫಕೀರೇಶ ನಿಟ್ಟಾಲಿ, ಕಾಶಪ್ಪ ಮೀಸಿ, ಫಕೀರೇಶ ವರವಿ, ಫಕೀರೇಶ ಕರಿಗಾರ ಸೇರಿದಂತೆ ಮುಂತಾದವರು ಇದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌