ಕನ್ನಡಪ್ರಭ ವಾರ್ತೆ ಪಾಂಡವಪುರ
ಕೆಎಸ್‌ಪಿ ಕಪ್‌ನ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಯಂಗ್ ಚಾಲೆಂಜರ್ಸ್ ಸ್ಪೋರ್ಟ್ ಮತ್ತು ಕ್ರೀಡಾ ಒಕ್ಕೂಟ, ಕ್ಯಾತನಹಳ್ಳಿ ಮಂಡ್ಯ ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ಇವರ ಸಹಯೋಗದಲ್ಲಿ ಫೆ.7ರಂದು ಸಂಜೆ 6ಕ್ಕೆ ತಾಲೂಕಿನ ಕ್ಯಾತನಹಳ್ಳಿ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಕಬಡ್ಡಿ ಪಂದ್ಯಾವಳಿ ಆರಂಭಗೊಳ್ಳಲಿದೆ. ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ವಿಜೇತ ತಂಡಗಳಿಗೆ ಮೊದಲ ಬಹುಮಾನ 75,000, ಎರಡನೇ ಬಹುಮಾನ 40,000, ಮೂರನೇ ಬಹುಮಾನ 20,000 ಹಾಗೂ ನಾಲ್ಕನೇ ಬಹುಮಾನ 15000 ರು. ನಗದು ಬಹುಮಾನ ನೀಡಲಾಗುತ್ತದೆ ಎಂದರು.ಉತ್ತಮ ದಾಳಿಗಾರ, ಉತ್ತಮ ಹಿಡಿತಗಾರ ಹಾಗೂ ಸರ್ವೋತ್ತಮ ಆಟಗಾರರಿಗೆ ವಿಶೇಷ ಬಹುಮಾನ ನೀಡಲಾಗುವುದು. ಪ್ರವೇಶ ದರ 1000 ರು. ನಿಗದಿಗೊಳಿಸಲಾಗಿದೆ. ಎ.ಕೆ.ಎಫ್.ಐ ಮಾದರಿಯಲ್ಲಿ ಪಂದ್ಯಾವಳಿಗಳು ನಡೆಯಲಿವೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊ-9880079414, 7795197797, 9886666980ನ್ನು ಸಂಪರ್ಕಿಸುವಂತೆ ಕೋರಿದರು.
ಈ ವೇಳೆ ರೈತಸಂಘದ ವರಿಷ್ಠ ನಾಯಕಿ ಸುನೀತಾ ಪುಟ್ಟಣ್ಣಯ್ಯ, ರೈತಸಂಘದ ಮುಖಂಡರಾದ ತುಳಸೀದಾಸ್, ಕೆ.ಎಸ್.ರವೀಂದ್ರ, ಕೆ.ಎಸ್.ವಿಶ್ವನಾಥ್, ಲೋಕೇಶ್, ಗ್ರಾಮ ಪಂಚಾಯ್ತಿ ಸದಸ್ಯರಾದ ಪಿ.ಎನ್.ಅನಿತಾ, ನೇತ್ರಾವತಿ, ಸುಧಾ, ಸಂತೋಷ್ (ನಯನ) ಸೇರಿದಂತೆ ಇತರರಿದ್ದರು.ರಾಷ್ಟ್ರೀಯ ಮಟ್ಟದ ಮಾಸ್ಟರ್ ಅಥ್ಲೆಟಿಕ್ಸ್; ಚಿನ್ನ, ಬೆಳ್ಳಿ ಗೆದ್ದ ಚಲುವೇಗೌಡಪಾಂಡವಪುರ:
ತಾಲೂಕಿನ ಚಿನಕುರಳಿ ಗ್ರಾಮದ ಕ್ರೀಡಾಪಟು ಸಿ.ಬಿ.ಚಲುವೇಗೌಡ ಅವರು 75 ವರ್ಷ ಮೇಲ್ಪಟ್ಟ ವಿಭಾಗದ 46ನೇ ರಾಷ್ಟ್ರೀಯ ಮಟ್ಟದ ಮಾಸ್ಟರ್ ಅಥ್ಲೆಟಿಕ್ಸ್ ನಲ್ಲಿ ಒಂದು ಚಿನ್ನ ಹಾಗೂ ಬೆಳ್ಳಿ ಗೆದ್ದು ಮಂಡ್ಯ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.ಜ.28ರಿಂದ ಫೆ.1ರ ವರೆಗೆ ಕೇರಳದ ತಿರುವನಂತಪುರದ ಯೂನಿರ್ವಸಿಟಿ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಮಾಸ್ಟರ್ ಅಥ್ಲೆಟಿಕ್ಸ್ ನಲ್ಲಿ ಕರ್ನಾಟಕದಿಂದ ಭಾಗವಹಿಸಿ ಗುಂಡು ಎಸೆತ ಸ್ಪರ್ಧೆಯಲ್ಲಿ 8.72 ಮೀಟರ್ ದೂರದವರೆಗೆ ಎಸೆಯುವ ಮೂಲಕ ಪ್ರಥಮ ಸ್ಥಾನ ಚಿನ್ನ ಹಾಗೂ ಹ್ಯಾಮರ್ ಎಸೆತ ಸ್ಪರ್ಧೆಯಲ್ಲಿ 23.28 ಮೀಟರ್ ದೂರ ಎಸೆಯುವ ಮೂಲಕ ದ್ವಿತೀಯ ಸ್ಥಾನ ಬೆಳ್ಳಿ ಪಡೆದು ಸಾಧನೆ ಮಾಡಿದ್ದಾರೆ.
2026ರ ಜುಲೈ ತಿಂಗಳಿನಲ್ಲಿ ದಕ್ಷಿಣ ಕೊರಿಯಾ ದೇಶದಲ್ಲಿ ನಡೆಯಲಿರುವ ವಿಶ್ವ ಮಟ್ಟದ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಕ್ರೀಡಾಕೂಟಕ್ಕೆ ಭಾಗವಹಿಸಲು ಭಾರತ ತಂಡದಿಂದ ಆಯ್ಕೆಯಾಗುವ ಮೂಲಕ ಮೈಸೂರು ಜಿಲ್ಲಾ ಮಾಸ್ಟರ್ ಅಥ್ಲೆಟಿಕ್ಸ್ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ಮತ್ತು ಭಾರತ ದೇಶಕ್ಕೆ ಗೌರವ ತಂದಿದ್ದಾರೆ.