ವನಕಲ್ಲು ಮಲ್ಲೇಶ್ವರ ಮಠಕ್ಕೆ ಕೆಎಸ್‌ಆರ್‌ಟಿಸಿ ಸಂಚಾರ ಸೇವೆ

KannadaprabhaNewsNetwork |  
Published : Nov 25, 2026, 02:00 AM IST
ಪೋಟೋ 4 : ಸೋಂಪುರ ಹೋಬಳಿಯ ಶ್ರೀ ವನಕಲ್ಲು ಮಲ್ಲೇಶ್ವರ ಮಠಕ್ಕೆ ತುಮಕೂರು ಕೆಎಸ್ ಆರ್ ಟಿಸಿ ಡಿಪೋ ವತಿಯಿಂದ ನೂತನ ಬಸ್ ಸೇವೆಗೆ ವನಕಲ್ಲು ಮಠದ ಡಾ.ಶ್ರೀ ಬಸವರಮಾನಂದ ಸ್ವಾಮೀಜಿ ಚಾಲನೆ ನೀಡಿದರು. | Kannada Prabha

ಸಾರಾಂಶ

ದಾಬಸ್‍ಪೇಟೆ: ಮಠದಲ್ಲಿ ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಜೊತೆಗೆ ರಾಜ್ಯದ ಮೂಲೆಮೂಲೆಗಳಿಂದ ಭಕ್ತರು ಮಠಕ್ಕೆ ಆಗಮಿಸುತ್ತಾರೆ. ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಸ್ ಸೌಲಭ್ಯ ಉಪಯುಕ್ತಕರ ಎಂದು ಡಾ. ಶ್ರೀ ಬಸವರಮಾನಂದ ಸ್ವಾಮೀಜಿ ಹೇಳಿದರು

ದಾಬಸ್‍ಪೇಟೆ: ಮಠದಲ್ಲಿ ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಜೊತೆಗೆ ರಾಜ್ಯದ ಮೂಲೆಮೂಲೆಗಳಿಂದ ಭಕ್ತರು ಮಠಕ್ಕೆ ಆಗಮಿಸುತ್ತಾರೆ. ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಸ್ ಸೌಲಭ್ಯ ಉಪಯುಕ್ತಕರ ಎಂದು ಡಾ. ಶ್ರೀ ಬಸವರಮಾನಂದ ಸ್ವಾಮೀಜಿ ಹೇಳಿದರು. ಸೋಂಪುರ ಹೋಬಳಿಯ ಶ್ರೀ ವನಕಲ್ಲು ಮಲ್ಲೇಶ್ವರ ಮಠಕ್ಕೆ ತುಮಕೂರು ಕೆಎಸ್‌ಆರ್‌ಟಿಸಿ ಡಿಪೋದಿಂದ ನೂತನ ಬಸ್‌ ಸಂಚಾರ ಸೇವೆಗೆ ಚಾಲನೆ ನೀಡಿ ಮಾತನಾಡಿದ ಶ್ರೀಗಳು, ಬಸ್ ವ್ಯವಸ್ಥೆಗೆ ಸಹಕರಿಸಿದ ಶಾಸಕರಾದ ಎನ್‌ ಶ್ರೀನಿವಾಸ್, ಎಸ್.ಆರ್.ಶ್ರೀನಿವಾಸ್‌, ಗೃಹ ಸಚಿವ ಡಾ.ಜಿ.ಪರಮೇಶ್ವರ್, ನಿಗಮದ ಅಧ್ಯಕ್ಷರಿಗೆ ಮಠದ ಪರವಾಗಿ ಅಭಿನಂದನೆ ತಿಳಿಸುತ್ತೇನೆ ಎಂದರು.

ಬಸ್ ಸಂಚಾರದ ಸಮಯ: ಬೆಳಗ್ಗೆ 8:15ಕ್ಕೆ ತುಮಕೂರಿನಿಂದ ಹೊರಟು ದಾಬಸ್‍ಪೇಟೆ, ನರಸೀಪುರ, ಹೆಗ್ಗುಂದ ಮಾರ್ಗವಾಗಿ 9:45ಕ್ಕೆ ಶ್ರೀ ವನಕಲ್ಲು ಮಲ್ಲೇಶ್ವರ ಮಠವನ್ನು ತಲುಪಲಿದೆ. ಬಳಿಕ 9:55ಕ್ಕೆ ಮಠದಿಂದ ಹೊರಟು ಅದೇ ಮಾರ್ಗವಾಗಿ 11:15ಕ್ಕೆ ತುಮಕೂರು ತಲುಪಲಿದೆ. ಅದೆ ರೀತಿ ಸಂಜೆ 4:30ಕ್ಕೆ ಮತ್ತು ರಾತ್ರಿ 7:45ಕ್ಕೆ ತುಮಕೂರಿನಿಂದ ದಾಬಸ್‍ಪೇಟೆ ಮಾರ್ಗವಾಗಿ ಬೈರನಾಯಕನಹಳ್ಳಿಗೆ ತೆರಳಿ ಅಲ್ಲಿಯೇ ರಾತ್ರಿ ತಂಗಲಿದೆ.

ಪೋಟೋ 4 :

ಸೋಂಪುರ ಹೋಬಳಿಯ ಶ್ರೀ ವನಕಲ್ಲು ಮಲ್ಲೇಶ್ವರ ಮಠಕ್ಕೆ ತುಮಕೂರು ಕೆಎಸ್‌ಆರ್‌ಟಿಸಿ ಡಿಪೋದಿಂದ ಬಸ್ ಸೇವೆಗೆ ವನಕಲ್ಲು ಮಠದ ಡಾ.ಶ್ರೀ ಬಸವರಮಾನಂದ ಸ್ವಾಮೀಜಿ ಚಾಲನೆ ನೀಡಿದರು. ಮಠದ ಸಿಬ್ಬಂದಿ, ಸ್ಥಳೀಯರು, ಶಾಲಾ ಮಕ್ಕಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಶ್ರಯ ಮನೆಗಳ ಹಂಚಿಕೆ ಕನಸು ನನಸಾಗಿದೆ: ಸಚಿವ ರುದ್ರಪ್ಪ ಲಮಾಣಿ
ಕಾಯಂ ಮುಖ್ಯ ಶಿಕ್ಷಕರ ನೇಮಕಕ್ಕೆ ಪಟ್ಟು; ಗ್ರಾಮಸ್ಥರಿಂದ ಶಾಲೆಗೆ ಬೀಗ