ಇಂದು ಮಂಗಳೂರಿನಲ್ಲಿ ‘ಕುಡ್ಲದ ಪಿಲಿ ಪರ್ಬ’ ಸ್ಪರ್ಧೆ

KannadaprabhaNewsNetwork |  
Published : Oct 11, 2024, 11:52 PM IST
ಗಿರಿಧರ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವುದು | Kannada Prabha

ಸಾರಾಂಶ

ಈ ಬಾರಿ ವಿಧಾನ ಪರಿಷ್‌ ಉಪ ಚುನಾವಣೆಯ ನೀತಿ ಸಂಹಿತೆ ಇರುವುದರಿಂದ ರಾತ್ರಿ 10 ಗಂಟೆಯೊಳಗೆ ಕಾರ್ಯಕ್ರಮ ಮುಕ್ತಾಯಗೊಳಿಸಬೇಕಾಗಿದೆ. ಹೀಗಾಗಿ ಸೀಮಿತವಾಗಿ ಕರಾವಳಿಯ ಜನಪ್ರತಿಯ 10 ಹುಲಿ ವೇಷ ತಂಡಗಳಿಗೆ ಮಾತ್ರ ಸ್ಪರ್ಧೆಯಲ್ಲಿ ಅವಕಾಶ ಕಲ್ಪಿಸಲಾಗಿದೆ

ಕನ್ನಡಪ್ರಭ ವಾರ್ತೆ ಮಂಗಳೂರು

ತುಳುನಾಡಿನ ನೆಲದ ಪರಂಪರೆಯ ಗತವೈಭವವನ್ನು ಮರುಕಳಿಸುವ ನಿಟ್ಟಿನಲ್ಲಿ ಹಾಗೂ ರಾಷ್ಟ್ರಮಟ್ಟದ ಮಾನ್ಯತೆ ಪಡೆದುಕೊಳ್ಳುತ್ತಿರುವ ಹುಲಿವೇಷ ಕುಣಿತದ ಕಲಾ ಶ್ರೇಷ್ಠತೆಯನ್ನು ಮುಂದಿನ ತಲೆಮಾರಿಗೆ ದಾಟಿಸುವ ಸದುದ್ದೇಶದಿಂದ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಅಕ್ಟೋಬರ್‌ 11ರಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ಮೂರನೇ ವರ್ಷದ ‘ಕುಡ್ಲದ ಪಿಲಿ ಪರ್ಬ’ ಸ್ಪರ್ಧೆಯನ್ನು ಆಯೋಜಿಸಿದೆ.

ಪ್ರತಿಷ್ಠಾನದ ಗೌರವಾಧ್ಯಕ್ಷ ಗಿರಿಧರ ಶೆಟ್ಟಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮಾರ್ಗದರ್ಶನ ಹಾಗೂ ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಆಯೋಜಿಸಿದ್ದ ಕುಡ್ಲದ ಪಿಲಿಪರ್ಬ ಬೆಳಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿದೆ ಎಂದರು.

ಈ ಬಾರಿ ವಿಧಾನ ಪರಿಷ್‌ ಉಪ ಚುನಾವಣೆಯ ನೀತಿ ಸಂಹಿತೆ ಇರುವುದರಿಂದ ರಾತ್ರಿ 10 ಗಂಟೆಯೊಳಗೆ ಕಾರ್ಯಕ್ರಮ ಮುಕ್ತಾಯಗೊಳಿಸಬೇಕಾಗಿದೆ. ಹೀಗಾಗಿ ಸೀಮಿತವಾಗಿ ಕರಾವಳಿಯ ಜನಪ್ರತಿಯ 10 ಹುಲಿ ವೇಷ ತಂಡಗಳಿಗೆ ಮಾತ್ರ ಸ್ಪರ್ಧೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು. ಉದ್ಘಾಟನೆಯನ್ನು ದ.ಕ. ಸಂಸದ ಕ್ಯಾ.ಬ್ರಿಜೇಶ್‌ ಚೌಟ ನೆರವೇರಿಸಲಿದ್ದು, ಮಾಜಿ ಸಂಸದ ನಳಿನ್‌ ಕುಮಾರ್‌, ಶಾಸಕ ವೇದವ್ಯಾಸ್‌ ಕಾಮತ್‌, ಮೇಯರ್‌ ಮನೋಜ್‌ ಕುಮಾರ್‌, ಉಪ ಮೇಯರ್‌ ಭಾನುಮತಿ, ಮುಖಂಡರಾದ ಪ್ರೇಮಾನಂದ ಶೆಟ್ಟಿ, ಸುಧೀರ್‌ ಶೆಟ್ಟಿ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ರಿಷಬ್‌ ಶೆಟ್ಟಿ, ರಾಜ್‌ ಬಿ.ಶೆಟ್ಟಿ, ಬಿಗ್‌ಬಾಸ್‌ ಖ್ಯಾತಿಯ ರೂಪೇಶ್‌ ಶೆಟ್ಟಿ, ರಾಕೇಶ್‌ ಅಡಿಗ, ದೇವದಾಸ್‌ ಕಾಪಿಕಾಡ್‌, ಭೋಜರಾಜ್‌ ವಾಮಂಜೂರು ಮತ್ತಿತರ ಗಣ್ಯರು ಆಗಮಿಸಲಿದ್ದಾರೆ ಎಂದರು. ಪ್ರತಿಷ್ಠಾನ ಅಧ್ಯಕ್ಷ ದಿವಾಕರ್‌ ಪಾಂಡೇಶ್ವರ್‌, ಪದಾಧಿಕಾರಿಗಳಾದ ಅಶ್ವಿತ್‌ ಕೊಟ್ಟಾರಿ, ಜಗದೀಶ್‌ ಕದ್ರಿ, ಲಲಿತ್‌ ಮೆಂಡನ್‌, ಶಾನ್‌ ಕೋಡಿಕೆರೆ ಇದ್ದರು. ತೃತೀಯ ಅಂಪೇರ್‌ ತೀರ್ಮಾನವೇ ಅಂತಿಮ

ಈ ಬಾರಿ ಕುಡ್ಲ ಪಿಲಿ ಪರ್ಬ ಸ್ಪರ್ಧೆಯಲ್ಲಿ ತೀರ್ಪುಗಾರರು ಇರುತ್ತಾರೆ. ಆದರೆ ಯಾವುದೇ ಗೊಂದಲಗಳಿಗೆ ಆಸ್ಪದ ಆಗಬಾರದು ಎಂಬ ಕಾರಣಕ್ಕೆ ತೃತೀಯ ಅಂಪೇರ್‌ನ್ನು ಬಳಸಿಕೊಳ್ಳಲಾಗುತ್ತದೆ. ತೃತೀಯ ಅಂಪೇರ್‌ಗಳು ನೀಡಿದ ತೀರ್ಮಾನವನ್ನೇ ಅಂತಿಮ ಎಂದು ಪರಿಗಣಿಸಲಾಗುತ್ತದೆ ಎಂದು ಗಿರಿಧರ್‌ ಶೆಟ್ಟಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5000 ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ : ಲಕ್ಷ್ಮೀ
ನಾಯಿಗಳ ಮೇಲೂ ತೆರಿಗೆ ಹೇರಿಕೆಗೆ ಮುಂದಾದ ಸರ್ಕಾರ!