ಕನ್ನಡಪ್ರಭ ವಾರ್ತೆ ಕುದೂರು
ಪ್ರಾಥಮಿಕ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳನ್ನು ನಪಾಸು ಮಾಡುವಂತಿಲ್ಲ. ಹಾಗಾಗಿ ಅವರು ಪ್ರೌಢಶಾಲೆಗೆ ಬರುತ್ತಾರೆ. ಅದು ಯಾವ ಮಾಯೆಯಲ್ಲೋ ಎಸ್‌ಎಸ್‌ಎಲ್‌ಸಿ ಪಾಸ್ ಮಾಡಿ ಕೆಲವರು ಕಾಲೇಜು ಸೇರುತ್ತಾರೆ. ಆಗ ಇವರುಗಳಿಗೆ ಅಕ್ಷರ ಕಲಿಸಿಕೊಂಡು ಕೂರಬೇಕಾ? ಅಥವಾ ನಿಗದಿತ ಸಮಯದಲ್ಲಿ ಪಠ್ಯ ಮುಗಿಸಬೇಕಾ? ಎಂಬುದೇ ಗೊತ್ತಾಗುವುದಿಲ್ಲ. ಇದರಿಂದಾಗಿ ಪಿಯುಸಿಯಲ್ಲಿ ಉತ್ತಮ ಫಲಿತಾಂಶ ಬರಲು ಕಷ್ಟವಾಗುತ್ತಿದೆ ಎಂಬ ಸಮುಜಾಯಿಷಿಯನ್ನು ಉಪನ್ಯಾಸಕರು ಕೊಟ್ಟರು. ಇದರಿಂದ ಕೆರಳಿದ ಶಾಸಕರು ಇಂತಹ ಹಾರಿಕೆ ಉತ್ತರಗಳಿಂದ ಫಲಿತಾಂಶ ಸುಧಾರಿಸುವುದಿಲ್ಲ. ಇನ್ನು ಮುಂದಾದರು ಉತ್ತಮ ಫಲಿತಾಂಶದ ಕಡೆಗೆ ಕಾಲೇಜು ಮುಖ ಮಾಡುವಂತೆ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಹೇಳಿದರು.65 ಲಕ್ಷದ ಪ್ರಾಥಮಿಕ ಶಾಲ ಕಟ್ಟಡ ಮಂಜೂರು:
ಸರ್ಕಾರಿ ಪ್ರಾಥಮಿಕ ಶಾಲೆಗೆ 65 ಲಕ್ಷ ರು. ವೆಚ್ಚದಲ್ಲಿ ಕಟ್ಟಡ ಕಟ್ಟಲು ಮಂಜೂರಾಗಿದೆ. ಆ ಕಟ್ಟಡವನ್ನು ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿಯೇ ಕಟ್ಟಲಿ ಎಂದು ಶಾಸಕರು ಹೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪದ್ಮನಾಭ್ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳು ನಡೆಯುವಾಗ ಪ್ರಾಥಮಿಕ ಶಾಲೆಯ ಮಕ್ಕಳಿಗೆ ರಜೆ ಕೊಡಬೇಕಾಗುತ್ತದೆ. ಈ ಪರೀಕ್ಷೆಗಳು ಇಪ್ಪತ್ತು ದಿನಗಳ ಕಾಲ ನಡೆಯುವುದರಿಂದ ಪರೀಕ್ಷಾ ಸಮಯದಲ್ಲಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ರಜೆ ಕೊಡಬೇಕಾಗುತ್ತದೆ. ಅದಕ್ಕಾಗಿ ಈಗಿರುವ ಪ್ರಾಥಮಿಕ ಶಾಲಾ ಆವರಣದಲ್ಲೇ ಮಂಜೂರಾಗಿರುವ ಕಟ್ಟಡವನ್ನು ಕಟ್ಟಿ. ಎಂದು ಹೇಳಿದರು.ಇದಕ್ಕೆ ಒಪ್ಪದ ಶಾಸಕರು ಅಂತಹ ಸಂದರ್ಭ ಬಂದಾಗ ಪರೀಕ್ಷಾ ಕೇಂದ್ರವನ್ನೇ ಬೇರೆಡೆಗೆ ಬದಲಿಸುವ ಕೆಲಸ ಮಾಡೋಣ ಬಿಡಿ ಎಂದು ಹೇಳಿದರು.ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್, ಇಸಿಒ ಗಂಗಾಧರ್, ಗ್ರಾಮಪಂಚಾಯ್ತಿ ಅಧ್ಯಕ್ಷ ರೇಖಾ ಸೋಮೇಶ್, ಪ್ರಾಚಾರ್‍ಯ ನಾರಾಯಣಸ್ವಾಮಿ, ಜಗದೀಶ್, ಹನುಮಂತರಾಯಪ್ಪ ಮತ್ತಿತರರು ಇದ್ದರು. ಪೊಟೋ ೧೫ಸಿಪಿಟಿ೨: ಕುದೂರು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಪಿಯು ವಿಭಾಗದಲ್ಲಿ ಕಾಲೇಜು ಅಭಿವೃದ್ದಿಯ ಕುರಿತು ನಡೆದ ಸಭೆಯಲ್ಲಿ ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿದರು.