ಕೇರಳದ ತ್ರಿಶೂರ್ ನನ್ನ ಹುಟ್ಟೂರಾದರೂ, ಕುಂದಾಪುರದ ಜನರು ನನ್ನನ್ನು ತಮ್ಮವನಾಗಿ ಸ್ವೀಕರಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಇಲ್ಲಿ ಸೇವೆ ಸಲ್ಲಿಸಿದ್ದ ಅನುಭವದಿಂದ ಈ ನೆಲದ ಜನರ ಹೃದಯವಂತಿಕೆಯನ್ನು ಕಂಡಿದ್ದೇನೆ. ಆದ್ದರಿಂದ ಕುಂದಾಪುರ ನನ್ನ ಇನ್ನೊಂದು ತವರು ಮನೆ ಎಂಬ ಭಾವನೆ ಇದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಹೇಳಿದರು.
ಕುಂದಾಪುರ: ಕೇರಳದ ತ್ರಿಶೂರ್ ನನ್ನ ಹುಟ್ಟೂರಾದರೂ, ಕುಂದಾಪುರದ ಜನರು ನನ್ನನ್ನು ತಮ್ಮವನಾಗಿ ಸ್ವೀಕರಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಇಲ್ಲಿ ಸೇವೆ ಸಲ್ಲಿಸಿದ್ದ ಅನುಭವದಿಂದ ಈ ನೆಲದ ಜನರ ಹೃದಯವಂತಿಕೆಯನ್ನು ಕಂಡಿದ್ದೇನೆ. ಆದ್ದರಿಂದ ಕುಂದಾಪುರ ನನ್ನ ಇನ್ನೊಂದು ತವರು ಮನೆ ಎಂಬ ಭಾವನೆ ಇದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಹೇಳಿದರು.
ಕುಂದಾಪ್ರ ಕನ್ನಡ ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾಲಯ ಮಂಗಳ ಗಂಗೋತ್ರಿ, ಸುಜ್ಞಾನ ಪಿಯು ಕಾಲೇಜು ಯಡಾಡಿ ಮತ್ಯಾಡಿ ಇದರ ಜಂಟಿ ಪ್ರಸ್ತುತಿಯಲ್ಲಿ ಸೋಮವಾರ ಕುಂದಾಪ್ರ ಕನ್ನಡ ಭಾಷಿಕ ಪ್ರದೇಶದ ವಿದ್ಯಾರ್ಥಿಗಳಿಗೆ ನಡೆದ ಸಾಂಸ್ಕೃತಿಕ ಹಾಗೂ ಚಿತ್ರಕಲಾ ಸ್ಪರ್ಧೆ ‘ವಾಲ್ಬೆಲ್ಲ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಸಮಾರೋಪ ಭಾಷಣ ಮಾಡಿದ ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸದಸ್ಯ, ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಅವರು, ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಬೇಕು. ಮಾದಕ ವ್ಯಸನ ಹಾಗೂ ಬೆಟ್ಟಿಂಗ್‌ನಂತಹ ದುಶ್ಚಟಗಳಿಂದ ದೂರವಿರಬೇಕು ಎಂದರು.
ಉಪ ವಿಭಾಗಾಧಿಕಾರಿ ರಶ್ಮಿ ಎಸ್.ಆರ್. ಮಾತನಾಡಿ, ಕುಂದಾಪ್ರ ಕನ್ನಡದ ಭಾಷಾ ಸೊಗಡು ಎಲ್ಲರನ್ನೂ ಆಕರ್ಷಿಸುತ್ತದೆ. ಇಲ್ಲಿನ ಪ್ರಾಕೃತಿಕ ಸೌಂದರ್ಯದಂತೆ ಜನರ, ರೀತಿ-ನೀತಿಗಳು ಇಷ್ಟವಾಗುತ್ತದೆ ಎಂದರು.
ಸನ್ಮಾನ್ಯ ಸ್ವೀಕರಿಸಿ ಮಾತನಾಡಿದ ಪದವಿ ಪೂರ್ವ ಶಿಕ್ಷಣ ಇಲಾಖೆಯ ವಿಶ್ರಾಂತ ಉಪ ನಿರ್ದೇಶಕ ಮಾರುತಿ ಎಲ್. ಅವರು, ಇಂತಹ ಕಾರ್ಯಕ್ರಮಗಳು ಕುಂದಾಪ್ರ ಕನ್ನಡದ ಬಗ್ಗೆ ಅಭಿಮಾನ ಮೂಡಿಸುತ್ತವೆ ಎಂದರು. ಅಧ್ಯಕ್ಷತೆ ವಹಿಸಿದ್ದ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಅವರು, ಶಿಕ್ಷಣ, ಸಂಸ್ಕೃತಿ, ಕ್ರೀಡೆ, ಆರೋಗ್ಯ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಸಹಕಾರ ನೀಡಬೇಕು ಎನ್ನುವ ಸಂಕಲ್ಪ ಇರಿಸಿಕೊಂಡಿದೆ. ಎಲ್ಲ ವಿದ್ಯಾರ್ಥಿಗಳಿಗೆ ಅವಕಾಶ ದೊರಕಬೇಕು ಎನ್ನುವ ಉದ್ದೇಶ ಹೊರತುಪಡಿಸಿ, ನಮ್ಮ ಸಂಸ್ಥೆಗೆ ಇನ್ನಾವುದೇ ವ್ಯವಹಾರಿಕ ಹಿಡನ್ ಅಜೆಂಡಾಗಳು ಇಲ್ಲ ಎಂದರು.ಸುಜ್ಞಾನ ಎಜುಕೇಶನಲ್ ಟ್ರಸ್ಟ್ ವತಿಯಿಂದ ಬೆಂಗಳೂರಿನ ಕುಂದಾಪ್ರ ಕನ್ನಡ ಪ್ರತಿಷ್ಠಾನಕ್ಕೆ ನೀಡಲಾದ ರಾಜ್ಯ ಮಟ್ಟದ ಪ್ರತಿಷ್ಠಿತ ‘ವಿದ್ಯಾರಣ್ಯ'''''''' ಪ್ರಶಸ್ತಿಯನ್ನು ಪ್ರತಿಷ್ಠಾನದ ಗೌರವಾಧ್ಯಕ್ಷ ಬಿ. ಉದಯ್ ಕುಮಾರ ಹೆಗ್ಡೆ ಸ್ವೀಕರಿಸಿದರು. ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಪೀಠದ ಸದಸ್ಯರಾದ ರಾಜೇಶ್ ಕೆ.ಸಿ. ಹಾಗೂ ಉದಯ್ ಶೆಟ್ಟಿ ಪಡುಕರೆ ಅವರನ್ನು ಗೌರವಿಸಲಾಯಿತು.
ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸಂಯೋಜಕ ಪ್ರೊ. ನಾಗಪ್ಪ ಗೌಡ, ಸದಸ್ಯರಾದ ಡಾ. ರೇಖಾ ಬನ್ನಾಡಿ, ಪಂಜು ಗಂಗೊಳ್ಳಿ, ಸುಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರಂಜನ್ ಬಿ. ಶೆಟ್ಟಿ, ಪ್ರಕಾಶ್ ಆಚಾರ್ಯ, ವಿದ್ಯಾರಣ್ಯ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಪ್ರದೀಪ್ ಕೆ. ಹಾಗೂ ಅನಿತಾ ಕುಮಾರಿ ಇದ್ದರು.ಸುಜ್ಞಾನ ಟ್ರಸ್ಟ್ ಕೋಶಾಧಿಕಾರಿ ಭರತ್ ಶೆಟ್ಟಿ ಸ್ವಾಗತಿಸಿದರು, ಸುಮಾ ಸಂಗ್ರಾಮ್ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು, ಪಣೂತ್ ಆರ್. ಗಾಣಿಗ ಬಹುಮಾನ ವಿಜೇತರ ಪಟ್ಟಿಯನ್ನು ಪ್ರಕಟಿಸಿದರು, ತೀರ್ಪುಗಾರರ ಪರವಾಗಿ ಮನು ಹಂದಾಡಿ ಮಾತನಾಡಿದರು, ಪ್ರದೀಪ್ ಶೆಟ್ಟಿ ವಂದಿಸಿದರು, ಕೆ.ಸಿ. ರಾಜೇಶ್ ನಿರೂಪಿಸಿದರು.
ಸ್ಪರ್ಧಾ ವಿಜೇತರು:
ಸಾಂಸ್ಕೃತಿಕ ಸ್ಪರ್ಧೆ ಪ್ರಥಮ ಸುಜ್ಞಾನ ಪಿಯು ಕಾಲೇಜು ಯಡಾಡಿ ಮತ್ಯಾಡಿ, ದ್ವಿತೀಯ ಶ್ರೀ ಮೂಕಾಂಬಿಕಾ ಪಿಯು ಕಾಲೇಜು ಕೊಲ್ಲೂರು, ತೃತೀಯ ಸುಜ್ಞಾನ ನ್ಯಾಶನಲ್ ಕಾಲೇಜು ಬಾರ್ಕೂರು ಹಾಗೂ ಶ್ರೀ ಶಾರದಾ ಪಿಯು ಕಾಲೇಜು ಬಸ್ರೂರು.ಚಿತ್ರ ಕಲಾ ಸ್ಪರ್ಧೆ 9 ಮತ್ತು 10 ನೇ ತರಗತಿ ವಿಭಾಗದಲ್ಲಿ ಪ್ರಥಮ ಆರಾಧ್ಯ ಕಾಂಚನ್ ಕೆಪಿಎಸ್ ಸ್ಕೂಲ್ ಬ್ರಹ್ಮಾವರ, ದ್ವಿತೀಯ ರೀತಾ ಶೆಟ್ಟಿ ಸರ್ಕಾರಿ ಪ್ರೌಢಶಾಲೆ ಸಿದ್ದಾಪುರ, ತೃತೀಯ ವೈಭವ ಆರ್ ಸರ್ಕಾರಿ ಪ್ರೌಢಶಾಲೆ ಹೈಕಾಡಿ. 8ನೇ ತರಗತಿ ವಿಭಾಗದಲ್ಲಿ ಪ್ರಥಮ ಸಂಜೀತ್ ಎಂ. ದೇವಾಡಿಗ ಎಸ್‌ವಿ ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿ, ದ್ವಿತೀಯ ಸಾನಿಧ್ಯ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ ಯಡಾಡಿ ಮತ್ಯಾಡಿ, ತೃತೀಯ ನಿಧಿ ಕುಮಾರ್ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ ಯಡಾಡಿ ಮತ್ಯಾಡಿ. ವಿಜೇತರಿಗೆ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಎಸ್‌ಪಿ ಹರಿರಾಮ್ ಶಂಕರ್ ವಿತರಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.