ಳೆಯ ಅವಾಂತರದಿಂದ ಪಕ್ಕದ ಲೇಔಟ್‌ನ ತಡೆಗೋಡೆ ಕಿತ್ತು ಹೋಗಿದೆ. ಪರಿಣಾಮ ಅಲ್ಲಿನ ಮಳೆನೀರು ಶಾಲೆಗೆ ನುಗ್ಗಿದೆ.
ಕುರುಗೋಡು: ಸೋಮವಾರ ತಡರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಪಟ್ಟಣದ ಹರಿಕೃಪ ಕಾಲೋನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಕುಸಿದಿದೆ.
ಮಳೆಯ ಅವಾಂತರದಿಂದ ಪಕ್ಕದ ಲೇಔಟ್‌ನ ತಡೆಗೋಡೆ ಕಿತ್ತು ಹೋಗಿದೆ. ಪರಿಣಾಮ ಅಲ್ಲಿನ ಮಳೆನೀರು ಶಾಲೆಗೆ ನುಗ್ಗಿದೆ. ಇದರಿಂದ ಕಟ್ಟಡದ ತಳಪಾಯ ಕುಸಿದಿದೆ.
ಶಾಲೆಯಲ್ಲಿ ೧ರಿಂದ ೫ನೇ ತರಗತಿಯ ೧೦೪ ಮಕ್ಕಳು ಇದ್ದಾರೆ. ಮಕ್ಕಳು ಮಂಗಳವಾರ ವಿದ್ಯಾಭ್ಯಾಸ ಮಾಡಲು ಪರದಾಡಬೇಕಾಯಿತು. ಶಾಲೆಯ ೬ ಕೊಠಡಿಗಳ ಪೈಕಿ ೪ ಕೊಠಡಿಗಳು ಸಂಪೂರ್ಣ ಹಾನಿಗೆ ಒಳಗಾಗಿವೆ. ಅಲ್ಲದೆ, ಧ್ವನಿವರ್ಧಕ, ಇನ್ವರ್ಟರ್, ಎರಡು ಕಂಪ್ಯೂಟರ್ ಮಳೆನೀರಿನಿಂದ ಹಾನಿಗೊಳಗಾಗಿವೆ.
ಹಳೆಯ ಪಿಯುಸಿ ಕೊಠಡಿಯಲ್ಲಿ ಪಾಠ:
ಸುರಕ್ಷತೆಯ ದೃಷ್ಟಿಯಿಂದ ತಾತ್ಕಾಲಿಕವಾಗಿ ಶಾಲೆಯ ಕೊಠಡಿಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಬಾರದು. ಹಳೆಯ ಪಿಯು ಕಾಲೇಜಿನ ಕೊಠಡಿಗಳಲ್ಲಿಯೇ ಮಕ್ಕಳಿಗೆ ಕಲಿಕೆ ಮುಂದುವರಿಸಲು ಬಿಇಒ ಸಿದ್ದಲಿಂಗಮೂರ್ತಿ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಳೆಯ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿದೆ.
ಭಾರೀ ಮಳೆಯಿಂದಾಗಿ ಶಾಲಾ ಕಟ್ಟಡಕ್ಕೆ ಹಾನಿಯಾಗಿದೆ. ಕೂಡಲೇ ದುರಸ್ತಿಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಶಾಸಕರು ತಿಳಿಸಿದ್ದಾರೆ. ಸದ್ಯ ಮಕ್ಕಳಿಗೆ ಪಕ್ಕದ ಹಳೆ ಪಿಯು ಕಾಲೇಜಿನ ಕೊಠಡಿಗಳಲ್ಲಿ ವಿದ್ಯಾಭ್ಯಾಸ ಮಾಡಲಾಗುತ್ತಿದೆ ಎನ್ನುತ್ತಾರೆ ಕುರುಗೋಡು ಬಿಇಒ ಸಿದ್ದಲಿಂಗಮೂರ್ತಿ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.