ಕುಶಾಲನಗರ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘಕ್ಕೆ 2.5 ಲಕ್ಷ ರು. ಲಾಭ

KannadaprabhaNewsNetwork |  
Published : Aug 10, 2026, 03:00 AM IST
ಸುದ್ದಿಗೋಷ್ಠಿ ಸಂದರ್ಭ | Kannada Prabha

ಸಾರಾಂಶ

ಕುಶಾಲನಗರ ಕೊಡಗು ಬಸವೇಶ್ವರ ಸೌಹಾರ್ದ ಸಹಕಾರಿ ಸಂಘ ಮಾರ್ಚ್ 2026 ಅಂತ್ಯದಲ್ಲಿ 2.5 ಲಕ್ಷ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಟಿ. ಎಸ್.ಶಾಂಭ ಶಿವಯ್ಯ ತಿಳಿಸಿದ್ದಾರೆ.

ಕುಶಾಲನಗರ: ಕುಶಾಲನಗರ ಕೊಡಗು ಬಸವೇಶ್ವರ ಸೌಹಾರ್ದ ಸಹಕಾರಿ ಸಂಘ ಮಾರ್ಚ್ 2026 ಅಂತ್ಯದಲ್ಲಿ 2.5 ಲಕ್ಷ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಟಿ. ಎಸ್.ಶಾಂಭ ಶಿವಯ್ಯ ತಿಳಿಸಿದ್ದಾರೆ.

ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸಂಘವು 18.38 ಕೋಟಿ ವಹಿವಾಟನ್ನು ನಡೆಸಿದೆ. ಸಂಘದ ಮೂಲಕ ಸಾಲ ಪಡೆದ ಸಾಲ ಶೇ 100 ರಷ್ಟು ಮರುಪಾವತಿ ಆಗಿದೆ ಎಂದರು. ಸಂಘದಲ್ಲಿ ಸದಸ್ಯರಿಗೆ ಅನುಕೂಲವಾಗುವ ರೀತಿಯಲ್ಲಿ ಜಾಮೀನು ಸಾಲ, ವ್ಯಾಪಾರ ಸಾಲ, ಪಿಗ್ಮಿ ಸಾಲ, ಸ್ವಸಹಾಯ ಗುಂಪುಗಳಿಗೆ ಸಾಲ ಸೌಲಭ್ಯ, ವಾಹನಗಳಿಗೆ ಮತ್ತು ಸಂಘದಿಂದ ನೀಡುವ ಸಾಲಕ್ಕೆ ವಿಮಾ ಸೌಲಭ್ಯ ಇರುತ್ತದೆ. ನಿರಖು ಠೇವಣಿಗಳಿಗೆ ಆಕರ್ಷಕ ಬಡ್ಡಿ ದೊರೆಯಲಿದೆ ಎಂದರು. ಸೌಹಾರ್ದ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು16ರಂದು 11 ಗಂಟೆಗೆ ಕುಶಾಲನಗರ ಎ.ಪಿ.ಸಿ.ಎಂ.ಎಸ್ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ನಡೆಸಲಾಗುವುದು ಎಂದರು.

ಸಂಘದ ಉಪಾಧ್ಯಕ್ಷರಾದ ಎಚ್.ಪಿ. ಉದಯಕುಮಾರ್, ನಿರ್ದೇಶಕ ಹೆಚ್. ವಿ. ಶಿವಪ್ಪ, ಪುಟ್ಟರಾಜು ಹೆಚ್. ಎಸ್, ಸುರೇಶ್, ಮೋಕ್ಷಿಕ್ ರಾಜ್ ಹೊನ್ನಗುಡಿ, ಪ್ರಶಾಂತ್ ಕೆ.ಡಿ., ಮಮತಾ ಎ.ಆರ್. ಮತ್ತು ಯಶೋದ ಜಿ.ಎಸ್. ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ.ಕ.: ಪಶುಪಾಲನಾ ಇಲಾಖೆಗೆ ತೀವ್ರ ಸಿಬ್ಬಂದಿ ಕೊರತೆ!
ಚೌಕಿ ರಂಗಶಾಲೆಯೂ ಆಗಿತ್ತು: ದಿವಾಣ ಶಿವಶಂಕರ ಭಟ್