ಕುಶಾಲನಗರ ಲಯನ್ಸ್ ಕ್ಲಬ್‌ ಪದಾಧಿಕಾರಿಗಳ ಪದಗ್ರಹಣ

KannadaprabhaNewsNetwork |  
Published : Jun 30, 2025, 12:34 AM IST
ಪದಗ್ರಹಣ ಸಮಾರಂಭ ಸಂದರ್ಭ | Kannada Prabha

ಸಾರಾಂಶ

ಕುಶಾನಗರದಲ್ಲಿ ಲಯನ್ಸ್‌ ಕ್ಲಬ್‌ 2025- 26ನೇ ಸಾಲಿನ ಆಡಳಿತ ಮಂಡಳಿಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಕುಶಾಲನಗರ ಗೌಡ ಸಮಾಜ ಸಭಾಂಗಣದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕುಶಾಲನಗರದ ಲಯನ್ಸ್ ಕ್ಲಬ್ ನ 2025-26ನೇ ಸಾಲಿನ ಆಡಳಿತ ಮಂಡಳಿಯ ನೂತನ‌ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಕುಶಾಲನಗರ ಗೌಡ ಸಮಾಜ ಸಭಾಂಗಣದಲ್ಲಿ ನಡೆಯಿತು. ಹಿಂದಿನ ಸಾಲಿನ ಅಧ್ಯಕ್ಷ ದೇವರಗುಂಡ ಪ್ರವೀಣ್ ಸೋಮಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಸಾಲಿನಅಧ್ಯಕ್ಷರಾಗಿ ಎನ್.ಟಿ.ನಾರಾಯಣ, ಕಾರ್ಯದರ್ಶಿಯಾಗಿ ಎಂ.ಜಿ.ಕಿರಣ್, ಖಜಾಂಚಿಯಾಗಿ ಡಾ.ಶರತ್ ಕುಮಾರ್ ಮ್ಯಾಥ್ಯು ಅಧಿಕಾರ ವಹಿಸಿಕೊಂಡರು.ಮಾಜಿ ಜಿಲ್ಲಾ ಗವರ್ನರ್ ಎಂ.ಬಿ. ಸದಾಶಿವ ಅವರು ನೂತನ ಪದಾಧಿಕಾರಿಗಳಿಗೆ ಮತ್ತು ನೂತನ ಸಾಲಿನ ಆಡಳಿತ ಮಂಡಳಿ ಸದಸ್ಯರಿಗೆ ಪದಗ್ರಹಣ ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಅವರು, ಸರ್ಕಾರದ ಯೋಜನೆ ತಲುಪಲಾಗದ ಗ್ರಾಮೀಣ ಸ್ಥಳಗಳಿಗೆ,‌ ಫಲಾನುಭವಿಗಳಿಗೆ ತಲುಪಿಸುವಲ್ಲಿ ಲಯನ್ಸ್ ಮೂಲಕ ನೆರವಾಗುತ್ತದೆ. ಸೇವೆಯೇ ಮುಖ್ಯ ಧ್ಯೇಯವಾಗಿಸಿಕೊಂಡಿರುವ ಲಯನ್ಸ್ ಸಂಸ್ಥೆ ಬಡವರು, ಅಶಕ್ತರ‌ ಪಾಲಿನ ಆಶಾಕಿರಣವಾಗಿದೆ, ಸೇವೆಯ ರಾಯಭಾರಿಗಳಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಕ್ರಿಯ, ಸಮಾಜ ಸೇವೆಯ ಗುಣಗಳನ್ನು ಹೊಂದಿರುವವರು ಹೆಚ್ಚು ಸದಸ್ಯರಾಗಬೇಕಿದೆ ಎಂದು ಕರೆ ನೀಡಿದರು.ಲಯನ್ಸ್ ಕ್ಯಾಬಿನೆಟ್ ಕಾರ್ಯದರ್ಶಿ ಗೀತಾ ರಾವ್, ಹಿಂದಿನ ಸಾಲಿನ ಕ್ಲಬ್ ಕಾರ್ಯದರ್ಶಿ ನಿತಿನ್ ಗುಪ್ತ, ವಲಯ ಅಧ್ಯಕ್ಷರುಗಳಾದ ಸುಮನ್ ಬಾಲಚಂದ್ರ, ಕನ್ನಿಕಾ ಅಯ್ಯಪ್ಪ, ಮಹದೇವಪ್ಪ, ಕನ್ನಂಡ‌ ಬೊಳ್ಳಪ್ಪ, ಕೊಡಗನ ಹರ್ಷ, ಮಾಜಿ ಅಧ್ಯಕ್ಷರುಗಳಾದ ಕೆ ಎಸ್ ಸತೀಶ್ ಕುಮಾರ್, ಟಿ ಕೆ ರಾಜಶೇಖರ್, ಎಂ ಎಸ್ ಚಿಣ್ಣಪ್ಪ, ಸಿ ಆರ್ ನಾಗರಾಜು ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧರಣಿ ಸ್ಥಳಕ್ಕೆ ಎಡಿಸಿ ಭೇಟಿ: ಪಟ್ಟು ಬಿಡದ ರೈತರು
ಸಂಕ್ರಮಣದ ಸಂಭ್ರಮದ ತೆಪ್ಪೋತ್ಸವ