ಕನ್ನಡಪ್ರಭ ವಾರ್ತೆ ಕುಶಾಲನಗರ
ಈ ಸಂದರ್ಭ ಮಾತನಾಡಿದ ಅವರು, ಕುಶಾಲನಗರ ರೋಟರಿ ಸುವರ್ಣ ಮಹೋತ್ಸವ ಅಂಗವಾಗಿ ಕೈಗೊಂಡಿರುವ ಹಸಿ ಕಸವನ್ನು ಗೊಬ್ಬರವಾಗಿಸುವ ನಿರ್ವಹಣಾ ಘಟಕ ಸ್ಥಾಪನೆ ಕಾರ್ಯ ಉತ್ತಮವಾಗಿದೆ. ಇದೊಂದು ಮಾದರಿ ಕಾರ್ಯಕ್ರಮ. ಇಂತಹ ಕಾರ್ಯ ಯಾವುದೇ ಸಂಸ್ಥೆಯಿಂದ ನಡೆದಿಲ್ಲ. ಇತರೆಡೆ ಇದನ್ನು ಸ್ಥಾಪಿಸುವ ನಿಟ್ಟಿನಲ್ಲಿ ಚಿಂತಿಸಲಾಗುತ್ತಿದೆ. ಕುಶಾಲನಗರ ಪಟ್ಟಣ ಮಾದರಿ ಸ್ವಚ್ಚ ಪಟ್ಟಣವಾಗಲಿ ಎಂದು ಶುಭ ಹಾರೈಸಿದರು.ಶಾಸಕ ಡಾ. ಮಂತರ್ ಗೌಡ, ನೂತನ ಘಟಕವನ್ನು ಪುರಸಭೆ ಮುಖ್ಯಾಧಿಕಾರಿ ಟಿ.ಎಸ್. ಗಿರೀಶ್ ಗೆ ಹಸ್ತಾಂತರಿಸಿ ಮಾತನಾಡಿ, ಸರ್ಕಾರದ ಕಾರ್ಯಕ್ರಮಗಳ ಜೊತೆಗೆ ರೋಟರಿಯಂತಹ ಸೇವಾ ಸಂಸ್ಥೆಗಳು ಕೈಗೊಳ್ಳುತ್ತಿರುವ ಸಾಮಾಜಿಕ ಸೇವಾ ಕಾರ್ಯ ಶ್ಲಾಘನೀಯ ಎಂದರು.ಇತ್ತೀಚಿನ ದಿನಗಳಲ್ಲಿ ಕುಶಾಲನಗರ ಪಟ್ಟಣ ವೇಗವಾಗಿ ಬೆಳೆಯುತ್ತಿದೆ. ಇಂತಹ ಪಟ್ಟಣದಲ್ಲಿ ಕಸ, ತ್ಯಾಜ್ಯ ನಿರ್ವಹಣೆ ನಿಯಂತ್ರಣ ಇಲ್ಲದಂತೆ ಆಗಿದೆ. ಪುರಸಭೆ ವತಿಯಿಂದ ಮನೆ ಮನೆಗಳಲ್ಲಿ ಕಸ ಸಂಗ್ರಹವನ್ನು ವ್ಯವಸ್ಥಿತವಾಗಿ ಮಾಡಬೇಕು. ಕಸ ವಾಹನ ಹೋಗುವ ಸಮಯ ಸರಿಯಾಗಿ ನಿಗದಿ ಮಾಡಬೇಕು. ಜೊತೆಗೆ ಬಡಾವಣೆಯ ನಾಗರಿಕರು ಕೂಡ ಹಸಿ ಕಸ, ಒಣ ಕಸವನ್ನು ಬೇರ್ಪಡಿಸಿ ವಾಹನಕ್ಕೆ ಹಾಕಬೇಕು. ಇದು ಜನರ ಜವಬ್ದಾರಿ ಕೂಡ ಆಗಿದೆ ಎಂದರು.
ಭುವನಗಿರಿಯಲ್ಲಿ ಕಸ ವಿಲೇವಾರಿ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಬೇಕು. ಪರಿಸರ ಮಾಲಿನ್ಯ ಮಾಡದಂತೆ ಎಚ್ಚರಿಕೆ ವಹಿಸಬೇಕು. ಕಾಂಪೌಂಡ್ ಅನ್ನು ಎತ್ತರಿಸುವ ಮೂಲಕ ಸುತ್ತಲಿನ ಪ್ರದೇಶಗಳ ಜನರಿಗೆ ತೊಂದರೆ ಆಗದಂತೆ ಕ್ರಮ ವಹಿಸಬೇಕು ಎಂದು ಮುಖ್ಯಾಧಿಕಾರಿಗೆ ಸೂಚಿಸಿದರು.ಕುಶಾಲನಗರ ರೋಟರಿ ಸಂಸ್ಥೆಯ ಸುವರ್ಣ ಮಹೋತ್ಸವ ಅಂಗವಾಗಿ ಸ್ವಚ್ಚ ಕುಶಾಲನಗರ ಅಭಿಯಾನಕ್ಕೆ ಎಸ್.ಎಲ್.ಎನ್ ನ ಸಿಎಸ್ಆರ್ ಫಂಡ್ ಮೂಲಕ 15 ಲಕ್ಷ ರು. ವೆಚ್ಚದ ಯಂತ್ರವನ್ನು ಕೊಡುಗೆ ನೀಡಲಾಗಿದೆ. ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಹಸಿ ಕಸವನ್ನು ಗೊಬ್ಬರವಾಗಿಸುವ ಯೋಜನೆ ಇದಾಗಿದೆ.ಪುರಸಭೆ ಕುಶಾಲನಗರ ಯೋಜನ ಪ್ರಾಧಿಕಾರ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಮುಖ್ಯಾಧಿಕಾರಿ ಗಿರೀಶ್, ಎಸ್.ಎಲ್.ಎನ್ ಉದ್ಯಮಿ ವೆಂಚಟಾಚಲಂ, ರೋಟರಿ ಅಧ್ಯಕ್ಷ ಮನು ಪೆಮ್ಮಯ್ಯ, ಕಾರ್ಯದರ್ಶಿ ಮಂಜುನಾಥ್ ಎಚ್.ಪಿ., ಸಹಾಯಕ ರಾಜ್ಯಪಾಲ ಉಲ್ಲಾಸ್ ಕೃಷ್ಣ, ಹಿರಿಯ ಸದಸ್ಯ ಎಸ್.ಕೆ. ಸತೀಶ್, ಡಾ. ಹರಿ ಎ. ಶೆಟ್ಟಿ, ಎಂ.ಡಿ. ರಂಗಸ್ವಾಮಿ, ಶೋಭಾ ಸತೀಶ್, ಸಜಿ, ರುದ್ರೇಶ್ ಪಟೇಲ್, ನವೀನ್ ಪಿ.ಆರ್., ಅರುಣ್, ಜೇಕಬ್, ಶರ್ಲಿ, ರಾಣಿ ಉಲ್ಲಾಸ್, ಸಿ.ಬಿ. ಹರೀಶ್, ಪ್ರೇಮಚಂದ್ರನ್, ಕ್ರಿಜ್ಬಲ್ ಕೋಟ್ಸ್, ಮಹೇಶ್ ನಲ್ವಡೆ, ಪುರಸಭೆ ಕಂದಾಯಾಧಿಕಾರಿ ರಾಮು, ದಫೆದಾರ್ ಮೋಹನ್ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.