ಕುತ್ಪಾಡಿ ಎಸ್‌ಡಿಎಂಎ ಕಾಲೇಜಿಗೆ ಮೊದಲ ರ್‍ಯಾಂಕ್‌: ಸತೀಶ್‌ ಪೈ ಶ್ಲಾಘನೆ

KannadaprabhaNewsNetwork |  
Published : Jun 28, 2025, 12:18 AM IST
26ಸತೀಶ್‌ | Kannada Prabha

ಸಾರಾಂಶ

ಮಣಿಪಾಲ ಇನ್‌ಫಾರ್ಮೇಶನ್ ನೆಟ್‌ವರ್ಕ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಪೈ ಇತ್ತೀಚೆಗೆ ಇಲ್ಲಿನ ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿದರು.

ಕನ್ನಡಪ್ರಭ ವಾರ್ತೆ ಉಡುಪಿಮಣಿಪಾಲ ಇನ್‌ಫಾರ್ಮೇಶನ್ ನೆಟ್‌ವರ್ಕ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಪೈ ಇತ್ತೀಚೆಗೆ ಇಲ್ಲಿನ ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿದರು. ಕಾಲೇಜಿನ ನವೀನ ಕಟ್ಟಡಕ್ಕೆ ಭೇಟಿ ನೀಡಿ ಅವರು ಸಂಸ್ಥೆಯ ಆಡಳಿತ ಮಂಡಳಿಯು ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಅಗತ್ಯ ಸೌಲಭ್ಯ ನೀಡಿರುವ ಬಗ್ಗೆ ಶ್ಲಾಘಿಸಿದರು. ಸರ್ವ ಖಾಸಗಿ ಆಯುರ್ವೇದ ಕಾಲೇಜುಗಳ ಪಟ್ಟಿಯಲ್ಲಿ ಉಡುಪಿಯ ಎಸ್.ಡಿ.ಎಂ. ಆಯುರ್ವೇದ ಕಾಲೇಜಿಗೆ ಮೊದಲನೇ ರ್‍ಯಾಂಕ್ ಬಂದಿರುವುದು ಕಲಶಪ್ರಾಯ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ಎಸ್‌ಡಿಎಂ ಆಯುರ್ವೇದ ಫಾರ್ಮಸಿಗೆ ಭೇಟಿ ನೀಡಿ ಗುಣಮಟ್ಟದ ಆಯುರ್ವೇದ ಔಷಧ ತಯಾರಿಕಾ ಘಟಕದಿಂದ ಜಿ.ಎಂ.ಪಿ. ಮಾನ್ಯತೆವುಳ್ಳ ಆಯುರ್ವೇದ ಔಷಧಿಗಳು ಬರಿಯ ಭಾರತ ದೇಶವಲ್ಲದೆ ಹೊರದೇಶಗಳಿಗೂ ರಘ್ತಾಗುತ್ತಿರುವುದು ಈ ಗುಣಮಟ್ಟಕ್ಕೆ ನಿದರ್ಶನ ಎಂದು ನುಡಿದರು. ರತ್ನಶ್ರೀ ಆರೋಗ್ಯಧಾಮಕ್ಕೆ ಭೇಟಿ ನೀಡಿ ಗುಣಮಟ್ಟದ ಆಯುರ್ವೇದ ಹಾಗೂ ಯೋಗ ಚಿಕಿತ್ಸೆಯ ವೈಖರಿ ನೋಡಿ ಪರಿಸರದ ಶುಚಿತ್ವ ಹಾಗೂ ಶಾಂತತೆಯನ್ನು ಪ್ರಶಂಶಿಸಿದರು.

ನಂತರ ಕಾಲೇಜಿನ ಪ್ರಾಂಶುಪಾಲೆ ಡಾ. ಮಮತಾ ಕೆ.ವಿ, ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ್ ಎಸ್., ಉಪ ವೈದ್ಯಕೀಯ ಅಧೀಕ್ಷಕ ಡಾ. ದೀಪಕ್ ಎಸ್.ಎಮ್., ಫಾರ್ಮಸಿಯ ಮಹಾವ್ಯವಸ್ಥಾಪಕ ಡಾ. ಮುರಳೀಧರ ಆರ್. ಬಲ್ಲಾಳ್, ಡೀನ್ ಹಾಗೂ ಎಲ್ಲಾ ವಿಭಾಗದ ಮುಖ್ಯಸ್ಥರ ಜೊತೆ ಸಮಾಲೋಚನೆ ನಡೆಸಿದರು.ಈ ಸಂಸ್ಥೆಯಿಂದ ಸಮಾಜಕ್ಕೆ ನೀಡುತ್ತಿರುವ ಗುಣಮಟ್ಟದ ಶಿಕ್ಷಣ ಆರೋಗ್ಯ ಸೇವೆ, ಚಿಕಿತ್ಸೆಗಾಗಿ ನೀಡುತ್ತಿರುವ ಪ್ರಾಶಸ್ತ್ಯ ಹಾಗೂ ಪ್ರಯತ್ನಗಳಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಐ.ಇ.ಸಿ.ಯ ಸದಸ್ಯರು ಹಾಗೂ ಮಣಿಪಾಲ ಟೆಕ್ನೋಲಜೀಸ್ ಲಿಮಿಟೆಡ್, ಮಣಿಪಾಲ ಇದರ ಹಿರಿಯ ವ್ಯವಸ್ಥಾಪಕ ರಾಜೇಶ್ ರಾವ್ ಹಾಗೂ ನಿವೃತ್ತ ಹಿರಿಯ ಪತ್ರಕರ್ತ ಮಟಪಾಡಿ ಕುಮಾರಸ್ವಾಮಿ ಅವರು ಹಾಜರಿದ್ದರು.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ