ಹೊಸಕೋಟೆ ಕಲ್ಲುಕೋರೆಗೆ ತೆರಳುವ ರಸ್ತೆಯ ಅಂಚಿನಲ್ಲಿ ಕರೆಯೊಂದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಸಂಬಂಧಿಸಿದ ಇಲಾಖೆಗಳು ತಮಗೆ ಸಂಬಂಧವೇ ಇಲ್ಲದಂತೆ ಕಣ್ಣು ಮುಚ್ಚಿ ಕುಳಿತ್ತಿರುವುದು ಈ ಭಾಗದ ನಿವಾಸಿಗಳು ಸಾರ್ವಜನಿಕರು ಆತಂಕಗೊಳ್ಳುವಂತಾಗಿದೆ.
ಸುಂಟಿಕೊಪ್ಪ: ಹೊಸಕೋಟೆ ಕಲ್ಲುಕೋರೆಗೆ ತೆರಳುವ ರಸ್ತೆಯ ಅಂಚಿನಲ್ಲಿ ಕರೆಯೊಂದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಸಂಬಂಧಿಸಿದ ಇಲಾಖೆಗಳು ತಮಗೆ ಸಂಬಂಧವೇ ಇಲ್ಲದಂತೆ ಕಣ್ಣು ಮುಚ್ಚಿ ಕುಳಿತ್ತಿರುವುದು ಈ ಭಾಗದ ನಿವಾಸಿಗಳು ಸಾರ್ವಜನಿಕರು ಆತಂಕಗೊಳ್ಳುವಂತಾಗಿದೆ.7ನೇ ಹೊಸಕೋಟೆ, ಹಾಗೂ ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ಹಾಗೂ ನಾಕೂರು ಶಿರಂಗಾಲದ ಕೆಲವು ಗ್ರಾಮಗಳಿಗೆ ಈ ರಸ್ತೆಯು ಮುಖ್ಯ ಸಂಪರ್ಕ ರಸ್ತೆಯಾಗಿದೆ. ಕಲ್ಲೂರು, ಹೆರೂರು, ಅಂದಗೋವೆ, ನಾಕೂರು ಶಿರಂಗಾಲ, ಹಾದ್ರೆ ಹೆರೂರು, ಬಸವನಹಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿರುವ ರಸ್ತೆಯಾಗಿದೆ. ಈ ರಸ್ತೆಗೆ ಹೊಂದಿಕೊಂಡಂತೆ ಇರುವ ಈ ಕೆರೆ ರಸ್ತೆಯ ಸಮೀಪವೇ ಇದೆ ಕೆರೆ ಸಮೀಪ ಯಾವುದೇ ರೀತಿಯ ಎಚ್ಚರಿಕೆಯ ಫಲಕ ಇತ್ಯಾದಿ ಸುರಕ್ಷಿತ ಕ್ರಮ ವಹಿಸಿಲ್ಲ. ಇದರಿಂದಾಗಿ ವಾಹನಗಳು ಈ ಭಾಗದಲ್ಲಿ ವೇಗವಾಗಿ ಸಂಚರಿಸುತ್ತಿದೆ. ಚಾಲಕರು ಕೊಂಚ ಎಚ್ಚರ ತಪ್ಪಿದರೂ ವಾಹನ ಸವಾರರ ಮತ್ತು ಪಾದಚಾರಿಗಳ ಪ್ರಾಣಕ್ಕೆ ಕುತ್ತು ಬರಲಿದೆ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಹಾಗೂ ವಾಹನ ಸವಾರರು ಆಗ್ರಹಿಸಿದ್ದಾರೆ.
ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕೆರೆ ಸಮೀಪದ ಅಪಾಯಕಾರಿ ರಸ್ತೆಗೆ ಸೂಕ್ತ ಭದ್ರತೆ ಹಾಗೂ ಎಚ್ಚರಿಕೆಯ ಸೂಚನಾ ಫಲಕಗಳನ್ನು ಅಳವಡಿಸಲು ಮುಂದಾಗಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಅನಿಸಿಕೆ:ಈ ರಸ್ತೆಯಲ್ಲಿ ನಿತ್ಯ ಟಿಪ್ಪರ್ ವಾಹನಗಳು ಕಲ್ಲು ಇನ್ನಿತರ ಸಾಮಗ್ರಿಗಳನ್ನು ಸಾಗಾಟಗೊಳಿಸುತ್ತಿದ್ದು ಅವುಗಳಿಗೆ ಸೈಡ್ ನೀಡುವ ಸಂದರ್ಭ ವಾಹನ ಚಾಲಕರು ಕೊಂಚ ಎಚ್ಚರ ತಪ್ಪಿದರೂ ವಾಹನಗಳು ಕೆರೆಗೆ ಪ್ರಯಾಣಿಕರ ಜೀವಕ್ಕೆ ಕಂಟಕವಾಗಲಿದೆ ಎಂದು ಸಂಬಂಧಿಸಿ ಅಧಿಕಾರಿಗಳು ಈ ಸೂಕ್ಷ್ಮ ಪ್ರದೇಶಕ್ಕೆ ಸೂಕ್ತ ಭದ್ರತಾ ಕಾರ್ಯಕ್ಕೆ ಮುಂದಾಗಬೇಕೆನ್ನುತ್ತಾರೆ 7ನೇ ಹೊಕೋಟೆ ನಿವಾಸಿ ಲತಾ ಬಸವರಾಜ್.ಈ ಭಾಗದ ರಸ್ತೆಯನ್ನು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಅನುದಾನವನ್ನು ಮೀಸಲಿರಿಸಿ ಸಂಪೂರ್ಣ ದುರಸ್ತಿಗೊಳಿಸಲಾಗಿದೆ. ಕೂಡಲೇ ಈ ಸ್ಥಳಕ್ಕೆ ಸೂಚನ ಫಲಕವನ್ನು ಅಳವಡಿಸಲು ಮುಂದಾಗಲಿದ್ದೇವೆ. ಅತೀ ಶೀಘ್ರದಲ್ಲಿ ಪಂಚಾಯಿತಿಗೆ ಅನುದಾನ ಬರಬೇಕಿದ್ದು, ಅನುದಾನ ಬಂದ ತಕ್ಷಣವೇ ಪಂಚಾಯಿತಿ ವತಿಯಿಂದ ಆದ್ಯತೆ ನೀಡಿ ಸುರಕ್ಷತಾ ವ್ಯವಸ್ಥೆಯನ್ನು ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದೆಂದು 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂದೀಶ್ ಹೇಳಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.