ಕೆರೆ ಉಳಿಸಿ ಅಭಿಯಾನ ಕಾರ್ಯಕ್ರಮ ಉದ್ಘಾಟನೆ
ಕೆರೆ ಸಂರಕ್ಷಣೆ ಮಾಡುವುದರಿಂದ ಸುತ್ತಮುತ್ತ ಪ್ರದೇಶ ಉತ್ತಮ ವಾತಾವರಣದಿಂದ ಕೂಡಿರುತ್ತದೆಯಲ್ಲದೇ ಪರಿಸರ ಕೂಡ ರಕ್ಷಣೆಯಾಗುತ್ತದೆ ಎಂದು ಮುಂಡಗೋಡ ಹಿರೇಮಠದ ರುದ್ರಮುನಿಸ್ವಾಮಿಗಳು ಹೇಳಿದರು
ಸೋಮವಾರ ಇಲ್ಲಿಯ ದೈವಜ್ಞ ಕಲ್ಯಾಣ ಮಂಟಪದಲ್ಲಿ ಜೈಭೀಮ್ ಕೆರೆ ಸಂರಕ್ಷಣಾ ಜಾಗೃತಿ ಸಮಿತಿ ಮುಂಡಗೋಡ ವತಿಯಿಂದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಜನ್ಮ ದಿನೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕೆರೆ ಉಳಿಸಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಕೆರೆ ಅಣೆಕಟ್ಟು ನಿರ್ಮಾಣವಾಗಿದ್ದು, ಇಂದಿನ ಸರ್ಕಾರಗಳಿಗೆ ಅವುಗಳನ್ನು ನಿರ್ವಹಣೆ ಮಾಡಲಾಗುತ್ತಿಲ್ಲ. ಹಾಗಾಗಿ ರಾಮಕೃಷ್ಣ ಹೆಗಡೆಯರನ್ನು ನಾವಿಂದು ನೆನೆಯಬೇಕಿದ್ದು, ಸರ್ಕಾರ ಮತ್ತು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಹೂಳು ತುಂಬಿಕೊಂಡಿರುವ ಕೆರೆಗಳ ಹೂಳು ತೆಗೆದು ಒತ್ತುವರಿಯಾಗಿರುವ ಕೆರೆಗಳನ್ನು ತೆರವುಗೊಳಿಸುವ ಮೂಲಕ ಒತ್ತುವರಿದಾರರಿಗೆ ಪರ್ಯಾಯ ಸ್ಥಳಾವಕಾಶ ಮಾಡಿಕೊಡಬೇಕು ಎಂದರು. ಇದರಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಕರೆ ನೀಡಿದರು.