ಕೆರೆ ಮಣ್ಣಿಗೆ ಕನ್ನ: ಜನರ ಆಕ್ರೋಶ

KannadaprabhaNewsNetwork |  
Published : May 16, 2026, 12:15 AM IST
ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿಯ ಸೋಮಲಾಪುರ ಕೆರೆಯಲ್ಲಿ ಮಣ್ಣು ಹೊಡೆಯತ್ತಿರುವುದು.ಕಣ್ಣುಮುಚ್ಚಿ ಕುಳಿತ ಜಿಲ್ಲಾ ಹಾಗೂ ತಾಲ್ಲೂಕ್ ಆಡಳಿತ. | Kannada Prabha

ಸಾರಾಂಶ

ತಾಲೂಕಿನ ನಿಟ್ಟೂರು ಹೋಬಳಿಯ ಸೋಮಲಾಪುರ ಕೆರೆಯಲ್ಲಿ ಕೆರೆಯ ಒಡ್ಡು ಅಗೆದು ಮಣ್ಣು ಸಾಗಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕನ್ನಡಪ್ರಭ ವಾರ್ತೆ ಗುಬ್ಬಿ

ತಾಲೂಕಿನ ನಿಟ್ಟೂರು ಹೋಬಳಿಯ ಸೋಮಲಾಪುರ ಕೆರೆಯಲ್ಲಿ ಕೆರೆಯ ಒಡ್ಡು ಅಗೆದು ಮಣ್ಣು ಸಾಗಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿ ದಿನ ಸೋಮಲಾಪುರ ಕೆರೆಯಲ್ಲಿ ಮಣ್ಣು ಲೂಟಿ ಆಗುತ್ತಿದ್ದರೂ ಸಹ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳದೆ ತಮಗೆ ಸಂಬಂಧವಿಲ್ಲವೆಂದು ಕಣ್ಣು ಮುಚ್ಚಿ ಕುಳಿತಿದ್ದಾರೆ. ಸೋಮಲಾಪುರ ಕೆರೆ ಕುಡಿಯುವ ನೀರಿನ ಕೆರೆಯಾಗಿದ್ದು ಹೇಮಾವತಿ ನೀರು ಹರಿಯುತ್ತದೆ. ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಗೆ ಈ ಕೆರೆಯಿಂದ ನೀರು ಹೋಗುತ್ತದೆ. ಮಣ್ಣು ಲೂಟಿಯಿಂದ ಅಂತರ್ಜಲ ಬತ್ತಿ ಹೋಗುತ್ತಿದೆ. ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ತಡೆಯಬೇಕು. ಕೆರೆಯ ಮಣ್ಣು ತುಂಬಿಕೊಂಡು ಹೋಗುವ ಟ್ರ್ಯಾಕ್ಟರ್ ಗಳು ಗ್ರಾಮದ ರಸ್ತೆಗಳಲ್ಲಿ ಚಲಿಸುವಾಗ ರಸ್ತೆ ಹಾಳಾಗಿದೆ. ರಸ್ತೆಯ ಪಕ್ಕದಲ್ಲಿರುವ ಮನೆಗಳಿಗೆ ಧೂಳು ತುಂಬಿ ಆರೋಗ್ಯ ಕೆಡುವಂತ ಪರಿಸ್ಥಿತಿ ಬಂದಿದೆ ಹಾಗೂ ಓಡಾಡಲು ತೊಂದರೆಯಾಗಿದೆ ಈ ಬಗ್ಗೆ ಅಧಿಕಾರಿಗಳಿಗೆ ಗಮನ ತಂದರೂ ಸಹ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಇದೇ ರೀತಿ ಮಣ್ಣು ಸಾಗಾಣಿಕೆ ಮುಂದುವರೆದರೆ ಮಣ್ಣು ಹೊಡೆಯುವವರ ವಿರುದ್ಧ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೋಮಲಾಪುರದ ಗ್ರಾಮಸ್ಥರು ಬೃಹತ್ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

7 ವರ್ಷವಾದರೂ ಪೂರ್ಣಗೊಳ್ಳದ ಮಲ್ಲಿಪಟ್ಟಣ ಏತ ನೀರಾವರಿ ಯೋಜನೆ
ಬೇಲೂರು ಪುರಸಭೆ ನೂತನ ಅಧ್ಯಕ್ಷ ಅಕ್ರಂ ಶರೀಫ್ ರಿಗೆ ಗಾಣಿಗರ ಸಂಘದಿಂದ ಸನ್ಮಾನ