ಕನ್ನಡಪ್ರಭ ವಾರ್ತೆ ಪಾಂಡವಪುರ
ಸಂಘದ ನೂತನ ಆಡಳಿತ ಮಂಡಳಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆದು ಅಧ್ಯಕ್ಷ ಸ್ಥಾನಕ್ಕೆ ಲಕ್ಷ್ಮಣಶೆಟ್ಟಿ ಹಾಗೂ ಸಿ.ಪ್ರಕಾಶ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಿ.ಕೆ.ನಿಂಗೇಗೌಡ ಹಾಗೂ ಸೌಭಾಗ್ಯಮ್ಮ ನಾಮಪತ್ರ ಸಲ್ಲಿಸಿದರು. ನಂತರ ಸಿ.ಪ್ರಕಾಶ್ ಮತ್ತು ಸೌಭಾಗ್ಯಮ್ಮ ನಾಮಪತ್ರ ವಾಪಸ್ ಪಡೆದರು.
ಅಧ್ಯಕ್ಷರಾಗಿ ಸ್ಥಾನಕ್ಕೆ ಲಕ್ಷ್ಮಣಶೆಟ್ಟಿ ಹಾಗೂ ಉಪಾಧ್ಯಕ್ಷರಾಗಿ ಸಿ.ಕೆ.ನಿಂಗೇಗೌಡ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ನಿರ್ಮಲಾ ಘೋಷಿಸಿದರು. ನಂತರ ಎಲ್ಲಾ ನಿರ್ದೇಶಕರು, ತಾಪಂ ಮಾಜಿ ಸದಸ್ಯೆ ಮಂಗಳ ನವೀನ್ ಸೇರಿದಂತೆ ಮುಖಂಡರು ನೂತನ ಅಧ್ಯಕ್ಷ - ಉಪಾಧ್ಯಕ್ಷರನ್ನು ಅಭಿನಂದಿಸಿದರು.ಸಂಘದ ನಿರ್ದೇಶಕರಾದ ಪಿ.ರಮೇಶ್, ಸಿ.ಪಿ.ಮಹದೇವಶೆಟ್ಟಿ(ಕ್ಯಾತಶೆಟ್ಟಿ), ಸಿ.ಎನ್.ಉಮೇಶ್, ಕೆ.ಕಂಚಯ್ಯ, ಸಿ.ಪ್ರಕಾಶ್, ಸಿ.ರಾಜಶೇಖರ್, ಸಿ.ಎನ್.ಪುಷ್ಪ, ಸೌಭಾಗ್ಯಮ್ಮ ಸೇರಿದಂತೆ ಹಲವರು ಇದ್ದರು.
ಶ್ರೀರಂಗಪಟ್ಟಣ:
ನಂತರ ಮಾತನಾಡಿದ ಹರೀಶ್ ಗೌಡ, ನಾರಾಯಣಗೌಡರು ನಾಡು, ನುಡಿ, ಜಲದ ವಿಷಯ ಹಾಗೂ ಕನ್ನಡಿಗರಿಗೆ ಅನ್ಯಾಯವಾದಲ್ಲಿ ದ್ವನಿ ಎತ್ತುವ ಮೊದಲ ನಾಯಕರು ಎಂದರು.
ಈ ವೇಳೆ ಚೇತನ್, ಗಣೇಶ್, ನಂದನ್, ಲೋಹತ್, ಚಂದ್ರು, ಕುಮಾರ್, ಕೌಶಿಕ್, ಅರುಣ್ ಸೇರಿದಂತೆ ಇತರರು ಇದ್ದರು.