ಗ್ರಾಮದಲ್ಲಿ ಶ್ರೀದೇವಿಯ ಉತ್ಸವ ಮೆರವಣಿಗೆ ನಡೆಸಿದ ನಂತರ ದೇವಾಲಯದಲ್ಲಿ ಶ್ರೀ ದೇವಿಯ ಮೂಲಮೂರ್ತಿಗೆ ಪೂಜಾ ಕೈಂಕರ್ಯ ನೆರವೇರಿಸಿ, ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು. ಪೂರ್ವಿಕರ ಆಚರಣೆಯಂತೆ ಗ್ರಾಮಸ್ಥರು ಹರಕೆ ಸಮರ್ಪಿಸಿದರು. ಗ್ರಾಪಂ ಮಾಜಿ ಸದಸ್ಯ ರಂಗಸ್ವಾಮಿ, ಸದಸ್ಯ ಕೃಷ್ಣೇಗೌಡ, ಹಿರಿಯರಾದ ಶೇಷಪ್ಪ ಗೌಡ, ಪ್ರಭಾಕರ್, ಶಾಂತರಾಜು, ಸುರೇಶ್, ಶ್ರೀನಿವಾಸ(ಸ್ವಾಮಿ) ಹಾಗೂ ಗ್ರಾಮಸ್ಥರು ಪೂಜಾ ಮಹೋತ್ಸವದಲ್ಲಿ ಭಾಗವಹಿಸಿದ್ದರು.
ಹೊಳೆನರಸೀಪುರ: ತಾಲೂಕಿನ ಗುಳಿಸಾತೇನಹಳ್ಳಿಯಲ್ಲಿ ಗ್ರಾಮದೇವತೆ ಲಕ್ಷ್ಮೀ ದೇವಿ ಅಮ್ಮನವರ ಬಂಡಿಹಬ್ಬವು ಸಂಪ್ರದಾಯದ ಆಚರಣೆಯಂತೆ ವೈಭವದಿಂದ ನಡೆಯಿತು.
ಗ್ರಾಮದ ಹಿರಿಯರ ಮಾರ್ಗದರ್ಶನದಲ್ಲಿ ಶುಕ್ರವಾರ ಮುಂಜಾನೆ ಹೇಮಾವತಿ ನದಿ ತೀರದಲ್ಲಿ ಶ್ರೀದೇವಿಯ ಉತ್ಸವ ಮೂರ್ತಿಯನ್ನು ಗಂಗೆಯಿಂದ ಶುಚಿಗೊಳಿಸಿ, ಸಂಪ್ರದಾಯದಂತೆ ಪೂಜೆ ನೆರವೇರಿಸಿದರು. ಗ್ರಾಮದಲ್ಲಿ ಶ್ರೀದೇವಿಯ ಉತ್ಸವ ಮೆರವಣಿಗೆ ನಡೆಸಿದ ನಂತರ ದೇವಾಲಯದಲ್ಲಿ ಶ್ರೀ ದೇವಿಯ ಮೂಲಮೂರ್ತಿಗೆ ಪೂಜಾ ಕೈಂಕರ್ಯ ನೆರವೇರಿಸಿ, ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು. ಪೂರ್ವಿಕರ ಆಚರಣೆಯಂತೆ ಗ್ರಾಮಸ್ಥರು ಹರಕೆ ಸಮರ್ಪಿಸಿದರು. ಗ್ರಾಪಂ ಮಾಜಿ ಸದಸ್ಯ ರಂಗಸ್ವಾಮಿ, ಸದಸ್ಯ ಕೃಷ್ಣೇಗೌಡ, ಹಿರಿಯರಾದ ಶೇಷಪ್ಪ ಗೌಡ, ಪ್ರಭಾಕರ್, ಶಾಂತರಾಜು, ಸುರೇಶ್, ಶ್ರೀನಿವಾಸ(ಸ್ವಾಮಿ) ಹಾಗೂ ಗ್ರಾಮಸ್ಥರು ಪೂಜಾ ಮಹೋತ್ಸವದಲ್ಲಿ ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.