ಸಾವಿರಾರು ಭಕ್ತರು ಭಾಗಿ
ಕನ್ನಡಪ್ರಭ ವಾರ್ತೆ, ಕೊಳ್ಳೇಗಾಲ
ಪಟ್ಟಣದಲ್ಲಿ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ರಥೋತ್ಸವವು ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಬಳಿಕ ಮಂಗಳವಾದ್ಯದೊಂದಿಗೆ ರಾಜಬೀದಿಗಳಲ್ಲಿ ರಥೋತ್ಸವ ನಡೆಯಿತು. ಈ ವೇಳೆ ದಾಸರುಗಳು ಜಾಗಟೆ ಹಾಗೂ ಶಂಖನಾದ ಮೊಳಗಿಸಿ ರಥೋತ್ಸವಕ್ಕೆ ಕಳೆ ತಂದರು.ಗರುಡ ಕಾಣಿಸಿಕೊಂಡ ಬಳಿಕವೇ ರಥೋತ್ಸವ:
ಆಕಾಶದಲ್ಲಿ ಹಾರಾಡಿ ತೇರಿನತ್ತ ಬರಲೇ ಇಲ್ಲ, ಆದರೆ ಹದ್ದೊಂದು ತೇರಿನ ಸಮೀಪವೇ ಆಗಮಿಸಿ ಮೂರು, ನಾಲ್ಕು ಸುತ್ತು ಪ್ರದಕ್ಷಿಣೆ ಹಾಕಿತಲ್ಲದೆ, ಬಳಿಕವೂ ನಾರಾಯಣಸ್ವಾಮಿ ದೇಗುಲದ ಸುತ್ತವೂ ಸಹಾ ಹತ್ತಿರದಲ್ಲೆ ರೆಕ್ಕಿ ಬಿಚ್ಚಿ 3 ಪ್ರದಕ್ಷಿಣೆ ಹಾಕಿ ನಿರ್ಗಮಿಸಿತು.
ಶಾಸಕ ಎ. ಆರ್. ಕೃಷ್ಣಮೂರ್ತಿ ಮಾತನಾಡಿ, ನಾರಾಯಣಸ್ವಾಮಿ ದೇಗುಲಕ್ಕೆ ತನ್ನದೆ ಆದ ಇತಿಹಾಸವಿದೆ. ರಥೋತ್ಸವವು ಯಶಸ್ವಿಯಾಗಿ ಜರುಗಿದೆ. ಸಾವಿರಾರು ಭಕ್ತರು ನಾರಾಯಣಸ್ವಾಮಿ ಕೖಪೆಗೆ ಪಾತ್ರರಾಗಿ ಪೂಜೆ ಸಲ್ಲಿಸಿದ್ದಾರೆ. ನಾನು ಸಹಾ ಇತಿಹಾಸ ಪ್ರಸಿದ್ಧ ಶ್ರೀಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ರಥೋತ್ಸವದಲ್ಲಿ ಪಾಲ್ಗೊಂಡಿದ್ದು ಸಂತಸ ತಂದಿದೆ. ನಾರಾಯಣಸ್ವಾಮಿ ಎಲ್ಲರಿಗೂ ಸನ್ಮಂಗಳವನ್ನು ಕರುಣಿಸಲಿ ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಚಂದ್ರು, ಮಾಜಿ ಸಚಿವ ಎನ್.ಮಹೇಶ್, ಮಾಜಿ ಶಾಸಕರಾದ ಜಿ.ಎನ್.ನಂಜುಂಡಸ್ವಾಮಿ, ಎಸ್.ಬಾಲರಾಜು, ತಹಸೀಲ್ದಾರ್ ಬಸವರಾಜು, ಅಪರ ಪೊಲೀಸ್ ವರಿಷ್ಟಾಧಿಕಾರಿ ಶಶಿಧರ್, ಜೆಡಿಎಸ್ ಕ್ಷೇತ್ರಾಧ್ಯಕ್ಷ ಪುಟ್ಟಸ್ವಾಮಿ, ನಗರಸಭೆ ಪೌರಯುಕ್ತೆ ರುದ್ರಮ್ಮ ಶರಣಯ್ಯ, ಚಾಮುಲ್ ಸದಸ್ಯ ಕಮರವಾಡಿ ರೇವಣ್ಣ, ನಗರಸಭೆ ಮಾಜಿ ಅಧ್ಯಕ್ಷ ಶಾಂತರಾಜು, ಮಾಜಿಸದಸ್ಯರುಗಳಾದ ಜಿ.ಪಿ. ಶಿವಕುಮಾರ್,ನರಸಿಂಹನ್, ಮಂಜುನಾಥ್, ಜಿ ಎಂ ಸುರೇಶ್, ರಾಘವೇಂದ್ರ, ಜಿಪಂನ ಮಾಜಿ ಸದಸ್ಯ ಕೊಪ್ಪಾಳಿಮಹದೇವನಾಯಕ, ಕಂದಳ್ಳಿ ನಂಜುಂಡಸ್ವಾಮಿ, ಡಿವೈಎಸ್ಪಿ ಧರ್ಮೇಂದ್ರ , ವೆಂಕಟೇಶಮೂರ್ತಿ, ಸಿದ್ದರಾಜು, ಚೇತನ್ ದೊರೈರಾಜು, ಸಿಗ್ ಬತ್ ಉಲ್ಲಾ, ಕೇಶವಮೂರ್ತಿ, ಪ್ರಭು, ಮಹದೇವಪ್ರಸಾದ್, ತೇರಂಬಳ್ಳಿ ಕುಮಾರಸ್ವಾಮಿ, ಕೖಷ್ಣಪ್ಪ ಇನ್ನಿತರಿದ್ದರು.----------
ಕೊಳ್ಳೇಗಾಲದಲ್ಲಿ ನಾರಾಯಣಸ್ವಾಮಿ ರಥೋತ್ಸವವು ವಿಜೖಂಭಣೆಯಿಂದ ಜರುಗಿತು.
3ಕೆಜಿಎಲ್ 2ಕೊಳ್ಳೇಗಾಲದ ನಾರಾಯಣ ರಥೋತ್ಸವದಲ್ಲಿ ಪಾಲ್ಗೊಂಡ ಶಾಸಕ ಎ. ಆರ್. ಕೃಷ್ಣಮೂರ್ತಿ, ಮಾಜಿ ಶಾಸಕ ಜಿ. ಎನ್. ನಂಜುಂಡಸ್ವಾಮಿ, ತಹಸೀಲ್ದಾರ್ ಬಸವರಾಜು ಅವರುಗಳನ್ನು ಅಭಿನಂದಿಸಲಾಯಿತು.