ದೀಪಗಳು ಮನೆಗಳಲ್ಲಿ ಮಾತ್ರವಲ್ಲ ಮನಗಳಲ್ಲೂ ಬೆಳಗಬೇಕು: ಉಮಾನಾಥ ಶೆಟ್ಟಿ ಪೆರ್ನೆ

KannadaprabhaNewsNetwork |  
Published : Nov 09, 2026, 02:30 AM IST
ಫೋಟೋ: 8ಪಿಟಿಆರ್-ದೀಪ ಸಂಜೀವಿನಿದೀಪ ಸಂಜೀವಿನಿಯನ್ನು ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ಉದ್ಘಾಟಿಸಿದರು.  | Kannada Prabha

ಸಾರಾಂಶ

ಮಹಿಳಾ ಸಬಲೀಕರಣದ ಹಿನ್ನಲೆಯಲ್ಲಿ ಸಂಜೀವಿನಿ ಒಕ್ಕೂಟದ ಮಹಿಳೆಯರು ದೀಪಾವಳಿ ಪ್ರಯುಕ್ತ ‘ದೀಪ ಸಂಜೀವಿನಿ ಸಂತೆ’ ವ್ಯವಸ್ಥೆ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗುವ ಕೆಲಸ ಮಾಡಿದ್ದಾರೆ. ದೀಪಗಳ ಬೆಳಕು ನಮ್ಮ ಮನೆಗಳಲ್ಲಿ ಮಾತ್ರವಲ್ಲ ಮನಗಳಲ್ಲೂ ಬೆಳಗಬೇಕು. ಸ್ವಾವಲಂಬಿ ಬದುಕಿಗೆ ಅರ್ಥ ನೀಡುವ ಮಹಿಳೆಯರು ತಾವು ಮನೆಗಳಲ್ಲಿಯೇ ತಯಾರಿಸಿದ ವಸ್ತುಗಳನ್ನು ಹಾಗೂ ಬೆಳೆದ ತರಕಾರಿಗಳನ್ನು ಯಾವುದೇ ದಳ್ಳಾಲಿಗಳಿಲ್ಲದೆ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದು ಉತ್ತಮವಾದ ಚಿಂತನೆಯಾಗಿದೆ. ಆರ್ಥಿಕವಾಗಿ ಭದ್ರತೆಯ ಜತೆಗೆ ಗ್ರಾಹಕನಿಗೂ ವಿಷಕಾರಕವಲ್ಲದ ವಸ್ತುಗಳು ದೊರೆಯುವಂತಾಗುತ್ತದೆ. ದೀಪಾವಳಿಯ ವಿಶೇಷ ಕಾರ್ಯಕ್ರಮ ಯಶಸ್ಸಿನಂತೆ ಬದುಕಿನ ನೆಮ್ಮದಿಗೆ ಕಾರಣವಾಗಲಿ ಎಂದು ತಾಲೂಕು ಪಂಚಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ಹೇಳಿದರು.

ಪುತ್ತೂರು : ಮಹಿಳಾ ಸಬಲೀಕರಣದ ಹಿನ್ನಲೆಯಲ್ಲಿ ಸಂಜೀವಿನಿ ಒಕ್ಕೂಟದ ಮಹಿಳೆಯರು ದೀಪಾವಳಿ ಪ್ರಯುಕ್ತ ‘ದೀಪ ಸಂಜೀವಿನಿ ಸಂತೆ’ ವ್ಯವಸ್ಥೆ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗುವ ಕೆಲಸ ಮಾಡಿದ್ದಾರೆ. ದೀಪಗಳ ಬೆಳಕು ನಮ್ಮ ಮನೆಗಳಲ್ಲಿ ಮಾತ್ರವಲ್ಲ ಮನಗಳಲ್ಲೂ ಬೆಳಗಬೇಕು. ಸ್ವಾವಲಂಬಿ ಬದುಕಿಗೆ ಅರ್ಥ ನೀಡುವ ಮಹಿಳೆಯರು ತಾವು ಮನೆಗಳಲ್ಲಿಯೇ ತಯಾರಿಸಿದ ವಸ್ತುಗಳನ್ನು ಹಾಗೂ ಬೆಳೆದ ತರಕಾರಿಗಳನ್ನು ಯಾವುದೇ ದಳ್ಳಾಲಿಗಳಿಲ್ಲದೆ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದು ಉತ್ತಮವಾದ ಚಿಂತನೆಯಾಗಿದೆ. ಆರ್ಥಿಕವಾಗಿ ಭದ್ರತೆಯ ಜತೆಗೆ ಗ್ರಾಹಕನಿಗೂ ವಿಷಕಾರಕವಲ್ಲದ ವಸ್ತುಗಳು ದೊರೆಯುವಂತಾಗುತ್ತದೆ. ದೀಪಾವಳಿಯ ವಿಶೇಷ ಕಾರ್ಯಕ್ರಮ ಯಶಸ್ಸಿನಂತೆ ಬದುಕಿನ ನೆಮ್ಮದಿಗೆ ಕಾರಣವಾಗಲಿ ಎಂದು ತಾಲೂಕು ಪಂಚಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ಹೇಳಿದರು.

ಅವರು ಶನಿವಾರ ಪುತ್ತೂರಿನ ಕಿಲ್ಲೆ ಮೈದಾನದ ಭಾಗದಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ದ.ಕ ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯಿತಿ ಪುತ್ತೂರು ಹಾಗೂ ಸಂಜೀವಿನಿ ಗ್ರಾಮಪಂಚಾಯತ್ ಮಟ್ಟದ ಒಕ್ಕೂಟಗಳ ಸಹಯೋಗದೊಂದಿಗೆ ದೀಪ ಸಂಜೀವಿನಿ ಮಾಸಿಕ ಸಂತೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಮಾತನಾಡಿದ ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಅವರು ಗುಡಿಕೈಗಾರಿಕೆಯ ಮೂಲಕ ಮಹಿಳೆಯರು ತಯಾರಿಸಿ ಮಾರುಕಟ್ಟೆಗೆ ತಂದಿರುವ ಈ ವಸ್ತುಗಳನ್ನು ಖರೀದಿ ಮಾಡುವ ಮೂಲಕ ಮಹಿಳೆಯರ ಸ್ವಾಭಿಮಾನದ ಕೆಲಸಕ್ಕೆ ಬೆಂಬಲ ನೀಡಬೇಕಾಗಿದೆ. ಯಾರನ್ನೂ ಅವಲಂಬಿಸದೆ ತಮ್ಮ ಬದುಕುಕಟ್ಟಿಕೊಳ್ಳುವ ಕಾಯಕದ ಜತೆಗೆ ಕುಟುಂಬವನ್ನು ರಕ್ಷಿಸುವ ಇಂತಹ ಮಹಿಳೆಯರಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ. ಈ ಮಹಿಳೆಯರು ತಾವು ಬೆಳೆಯುವ ಜತೆಗೆ ಉತ್ತಮ ವಸ್ತುಗಳನ್ನು ಗ್ರಾಹಕರಿಗೆ ನೀಡುವ ಮೂಲಕ ಇತರರ ಮನೆಗಳನ್ನು ಬೆಳಗಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಸ್ವಾವಲಂಬಿ ಚಿಂತನೆಗೆ ನಾವೆಲ್ಲಾ ಬೆಂಬಲ ನೀಡಬೇಕು ಎಂದು ಹೇಳಿದರು.

ನಗರಸಭೆಯ ಪೌರಾಯುಕ್ತೆ ವಿದ್ಯಾ ಎಂ ಕಾಳೆ ಅವರು ಮಾತನಾಡಿ, ಗ್ರಾಮೀಣ ಭಾಗದ ಮಹಿಳೆಯರು ಸ್ವಾವಲಂಬನೆಗೋಸ್ಕರ ತಮ್ಮಲ್ಲಿರುವ ಕುಶಲಕಲೆ ಮತ್ತು ದುಡಿಮೆಯ ಮೂಲಕ ಗೃಹೋತ್ಪನ್ನ ಮತ್ತು ಆಹಾರ ಉತ್ಪನ್ನಗಳನ್ನು ಇಲ್ಲಿ ಪ್ರದರ್ಶನ ಮತ್ತು ಮಾರಾಟ ಮಾಡುತ್ತಿದ್ದಾರೆ. ಇದು ಮಹಿಳೆಯ ಆತ್ಮಶಕ್ತಿಯನ್ನು ಪ್ರೇರೇಪಿಸುವ ಚಿಂತನೆಯಾಗಿದೆ. ಅವರು ಆರ್ಥಿಕವಾಗಿ ಪ್ರಬಲವಾಗಲು ಸಹಕಾರಿಯಾಗುತ್ತದೆ. ಈ ಮೇಳದ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದರು.ಕುಂಬಾರರ ಗುಡಿಕೈಗಾರಿಕಾ ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿ ಜನಾರ್ಧನ ಮೂಲ್ಯ ಅವರು ಮಾತನಾಡಿ, ದೀಪಾವಳಿಯನ್ನು ವಿಷಕಾರಕ ಪಟಾಕಿಗಳಿಂದ ಆಚರಿಸುವ ಬದಲು ಮಣ್ಣಿನ ಹಣತೆಗಳ ದೀಪ ಬೆಳಗಿಸಿ ಆಚರಣೆ ಮಾಡುವುದು ಅತ್ಯಂತ ಶ್ರೇಷ್ಠವಾಗಿದೆ. ಆ ಮೂಲಕ ಪರಿಸರ ಸಂರಕ್ಷಣೆಗೆ ಆದ್ಯತೆ ಕೊಡಬೇಕು. ಈ ಮೇಳದಲ್ಲಿ ಗುಡಿಕೈಗಾರಿಕೆ ಮೂಲಕ ನಿರ್ಮಿಸಲಾದ ಸಾಕಷ್ಟು ಬಗೆಯ ಮಣ್ಣಿನ ಹಣತೆಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ ಎಂದರು.ತಾಲೂಕು ಯೋಜನಾಧಿಕಾರಿ ಶೋಭಾ, ವ್ಯವಸ್ಥಾಪಕಿ ತುಳಸಿ, ನಗರಸಭೆಯ ಸಹಾಯಕ ಲೆಕ್ಕಾಧಿಕಾರಿ ಪೂರ್ಣಕಲಾ, ನಗರಸಭಾ ವ್ಯವಸ್ಥಾಪಕಿ ಶಾಂತಲಾ, ಆರೋಗ್ಯ ನಿರೀಕ್ಷಕಿ ಶ್ವೇತಾ, ತಾಲೂಕು ಪಂಚಾಯಿತಿ ಪುತ್ತೂರು ಮತ್ತು ನಗರಸಭೆಯ ಸಿಬ್ಬಂದಿ ಹಾಜರಿದ್ದರು. ವಲಯ ಮೇಲ್ವಿಚಾರಕಿ ನಮಿತಾ ಕೆ ಸ್ವಾಗತಿಸಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟನ್ ಕಬ್ಬಿಗೆ ₹1,000 ಹೆಚ್ಚುವರಿ ದರ ನಿಗದಿಗೆ ಪಟ್ಟು
ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆ ತಕ್ಷಣ ಆರಂಭಿಸಿ