ಜಮೀನು ವ್ಯಾಜ್ಯ: ವ್ಯಕ್ತಿ ಮೇಲೆ ಸಿನಿಮೀಯ ರೀತಿ ಹಲ್ಲೆ !

KannadaprabhaNewsNetwork |  
Published : Aug 08, 2025, 01:00 AM IST
ಹಲ್ಲೆ ನಡೆಸಿ, ಪರಾರಿಯಾಗುತ್ತಿದ್ದ ದುಷ್ಕರ್ಮಿಗಳ ಕಾರಿನ ಟಯರ್‌ ಸ್ಫೋಟಗೊಂಡಿದ್ದರಿಂದ, ಕಾರು ಪಲ್ಟಿಯಾಗಿ ಪಕ್ಕದ ಜಮೀನಿನಲ್ಇ ಬಿದ್ದಿದೆ. ಈ ವೇಳೆ ಗಾಯಗೊಡವರನ್ನು ಸ್ಥಳೀಯರು, ರಕ್ಷಿಸಿ, ಪೊಲೀಸರ ವಶಕ್ಕೆ ಒಪ್ಪಿಸಿದರು. | Kannada Prabha

ಸಾರಾಂಶ

ಜಮೀನು ವ್ಯಾಜ್ಯವೊಂದಕ್ಕೆ ಸಂಬಂಧಿಸಿದಂತೆ, ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಲೆಂದು ಮುಂಬೈನಿಂದ ಇಲ್ಲಿಗೆ ಬಂದಿದ್ದ ದುಷ್ಕರ್ಮಿಗಳ ಗುಂಪೊಂದು, ಸಿನಿಮೀಯ ರೀತಿಯಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿ ವೇಳೆ, ಕಾರಿನ ಟೈರ್ ಸ್ಫೋಟಗೊಂಡು ಅಪಘಾತ ಸಂಭವಿಸಿದಾಗ, ಸ್ಥಳೀಯರ ನೆರವಿನಿಂದ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಗುರುವಾರ ಜಿಲ್ಲೆಯ ವಡಗೇರಾ ತಾಲೂಕಿನ ತುಮಕೂರು ಗ್ರಾಮದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ತುಮಕೂರ ಗ್ರಾಮದ ಸೈಯದ್ ಬಾಷಾ ಎಂಬುವರ ಮೇಲೆ ಆರು ಜನರ ಗುಂಪೊಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿದೆ. ಜಮೀನು ವ್ಯಾಜ್ಯ ಸಂಬಂಧ ಈ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.

ಕಾರಿನಲ್ಲಿ ಬಂದು ದಾಳಿ ಮಾಡಿದ ಮುಂಬೈನ ದುಷ್ಕರ್ಮಿಗಳು, ಚಾಕು ಸೇರಿದಂತೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಇದೇ ತುಮಕೂರು ಗ್ರಾಮದ ಇಬ್ರಾಹಿಂ ಎಂಬಾತ ಮುಂಬೈನಿಂದ ಐವರ ಕರೆಯಿಸಿಕೊಂಡು ಸೈಯದ್ ಬಾಷಾ ಮೇಲೆ‌ ಹಲ್ಲೆ ನಡೆಸಿದ್ದಾನೆಂದು ದೂರಲಾಗಿದೆ. ಗಾಯಗೊಂಡ ಸೈಯ್ಯದ್‌ ಬಾಷಾನನ್ನು ಹೆಚ್ಚಿನ ಚಿಕಿತ್ಸೆಗೆಂದು ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮಧ್ಯೆ, ಹಲ್ಲೆ ಮಾಡಿ ಕಾರು ಸಮೇತ ಪರಾರಿಯಾಗುತ್ತಿದ್ದ ದುಷ್ಕರ್ಮಿಗಳ ಕಾರಿನ ಟೈಯರ್ ಸ್ಫೋಟಗೊಂಡು ವಾಹನ ಪಲ್ಟಿಯಾಗಿದೆ.

ಗಾಯಗೊಂಡು ನರಳಾಡುತ್ತಿದ್ದ ಹಲ್ಲೆಕೋರರನ್ನು ಜನರ ಬಂದು ರಕ್ಷಿಸಿದ್ದಾರೆ. ಕೊನೆಗೆ, ಹಲ್ಲೆ ನಡೆಸಿದ ತಂಡ ಎಂದು ಗೊತ್ತಾಗುತ್ತಲೇ, ಪೊಲೀಸರು ಅವರನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಈ ಸಾಲಲ್ಲಿ ಅಬಕಾರಿ ರಾಜಸ್ವ ಟಾರ್ಗೆಟ್‌ ಕಷ್ಟ? 11 ತಿಂಗಳಲ್ಲಿ ಮದ್ಯ ಮಾರಾಟ ಗಣನೀಯ ಕುಸಿತ
ನಾಳೆ ಸಿದ್ದರಾಮಯ್ಯ ಬಜೆಟ್‌ : ವಲಯವಾರು ನಿರೀಕ್ಷೆಗಳೇನು?