ಲ್ಯಾಂಡ್ ಜಿಹಾದ್ ಆತಂಕಕಾರಿ ಬೆಳವಣಿಗೆ: ಡಿ.ಎನ್. ಜೀವರಾಜ್

KannadaprabhaNewsNetwork |  
Published : Nov 02, 2024, 01:22 AM IST
ಸುದ್ಧೀಗೋಷ್ಠಿ | Kannada Prabha

ಸಾರಾಂಶ

ಕೊಪ್ಪ, ರಾಜ್ಯದಲ್ಲಿ ಲವ್ ಜಿಹಾದ್‌ನೊಂದಿಗೆ ಲ್ಯಾಂಡ್ ಜಿಹಾದ್ ಕೂಡ ಸೇರಿ ಕೊಂಡಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಮಾಜಿ ಶಾಸಕ ಡಿ.ಎನ್.ಜೀವರಾಜ್ ಹೇಳಿದರು.

ಒತ್ತುವರಿ ಸಮಸ್ಯೆ ರೈತರನ್ನು ಕಂಗೆಡಿಸಿರುವಾಗಲೆ ವಕ್ಫ್ ಆಸ್ತಿ ವಿಚಾರ ರೈತರಲ್ಲಿ ಭೀತಿ ಮೂಡಿಸಿದೆ

ಕನ್ನಡಪ್ರಭ ವಾರ್ತೆ, ಕೊಪ್ಪ

ರಾಜ್ಯದಲ್ಲಿ ಲವ್ ಜಿಹಾದ್‌ನೊಂದಿಗೆ ಲ್ಯಾಂಡ್ ಜಿಹಾದ್ ಕೂಡ ಸೇರಿ ಕೊಂಡಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಮಾಜಿ ಶಾಸಕ ಡಿ.ಎನ್.ಜೀವರಾಜ್ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಲೆನಾಡು ಸೇರಿದಂತೆ ರಾಜ್ಯದಲ್ಲಿ ಒತ್ತುವರಿ ಸಮಸ್ಯೆ ರೈತರನ್ನು ಕಂಗೆಡುವಂತೆ ಮಾಡುತ್ತಿರುವಾಗಲೆ ವಕ್ಫ್ ಆಸ್ತಿ ಎನ್ನುವ ವಿಚಾರ ಜನ ಸಾಮಾನ್ಯರನ್ನು ಆತಂಕಕ್ಕೆ ದೂಡಿದೆ. ರೈತರು, ಕೆಲವು ಮಠ ಮಾನ್ಯ, ಮಂದಿರಗಳ ಅನಾದಿ ಕಾಲದ ಆಸ್ತಿಯನ್ನು ವಕ್ಫ್ ಮಂಡಳಿ ತನ್ನ ಆಸ್ತಿ ಎನ್ನುತ್ತಿದೆ.ವಕ್ಫ್ ಹೆಸರಿನಲ್ಲಿ ಆಸ್ತಿ ನಮ್ಮದು ಎನ್ನುತ್ತಿರುವವರು ಯಾರು? ಭಾರತೀಯ ಮೂಲ ನಿವಾಸಿಗಳಾಗಿರದೆ ಅವರು ವಲಸೆ ಬಂದವರಾಗಿದ್ದಾರೆ. ಅಂದು ಇವರನ್ನು ಭಾರತದಲ್ಲಿ ಜೀವನ ಕಟ್ಟಿಕೊಂಡು ಬದುಕಲು ಬಿಟ್ಟ ತಪ್ಪಿಗೆ ಇಂದು ಭಾರತದ ಎಲ್ಲಾ ಆಸ್ತಿಗಳು ತಮ್ಮದು ಎನ್ನುವ ಹಂತ ತಲುಪಿದ್ದಾರೆ. ವಕ್ಫ್ ಬೋರ್ಡ್ ಯಾವುದೇ ಆಸ್ತಿ ತನ್ನದೆಂದರೂ ಯಾವುದೇ ದಾಖಲೆಗಳನ್ನು ನೀಡದೆ ಇದ್ದರೂ ಆಸ್ತಿ ಭೂಮಿ ಅವರದ್ದಾಗುತ್ತದೆ. ಬೇರೆ ಯಾರಾದರು ಇದು ನಮ್ಮ ಆಸ್ತಿ ವಕ್ಫ್ ಹೆಸರಿಗೆ ಸೇರಿದೆ ಇದನ್ನು ಬಿಟ್ಟುಕೊಡಿ ಎಂದರೆ ಎಲ್ಲಾ ದಾಖಲೆಗಳನ್ನು ನೀಡಬೇಕಾಗಿದೆ. ವಕ್ಫ್ ಬೋರ್ಡ್ನ ಈ ರೀತಿಯಾದ ವರ್ತನೆಯನ್ನು ತಡೆಗಟ್ಟಬೇಕು ಎಂದರು.

ಕೇಂದ್ರ ಸರ್ಕಾರ ಏಕರೂಪ ಕಾನೂನು ಜಾರಿಗೊಳಿಸಬೇಕು ಎಂದ ಅವರು ಎಸ್.ಸಿ, ಎಸ್.ಟಿ ಜಮೀನುಗಳು ಒಳಗೊಂಡಂತೆ ರಾಜ್ಯಾದ್ಯಂತ ಈವರೆಗೆ ಸುಮಾರು ೧೨ ಸಾವಿರ ಎಕರೆಗಿಂತಲೂ ಹೆಚ್ಚು ಆಸ್ತಿಗಳನ್ನು ವಕ್ಫ್ ತನ್ನದೆನ್ನುತ್ತಿದೆ ಎಂದರು.

ಬಿಜೆಪಿ ತಾಲೂಕು ಅಧ್ಯಕ್ಷ ದಿನೇಶ್ ಹೊಸೂರು, ಕಾರ್ಯದರ್ಶಿ ಬಿಷೇಜ ಭಟ್, ಅರುಣ ಶಿವಪುರ, ಮುಖಂಡರಾದ ಎಸ್.ಎನ್. ರಾಮಸ್ವಾಮಿ, ಸತೀಶ್ ಅದ್ದಡ, ದಿವಾಕರ್, ರೇವಂತ್ ಗೌಡ ಮುಂತಾದವರಿದ್ದರು.

-- ಬಾಕ್ಸ್--

4ರಂದು ಎಲ್ಲಾ ಜಿಲ್ಲೆ, ತಾಲೂಕಿನಲ್ಲಿ ಪ್ರತಿಭಟನೆ

ವಕ್ಫ್ ತನ್ನದೆಂದು ವಶಕ್ಕೆ ಪಡೆದಿರುವ ಎಲ್ಲಾ ಆಸ್ತಿ ಗಳನ್ನು ರಾಜ್ಯ ಸರ್ಕಾರ ಕೂಡಲೆ ಹಿಂಪಡೆಯಬೇಕು. ಅದನ್ನು ಸಂಬಂಧಿಸಿದವರಿಗೆ ನೀಡಬೇಕು ಎಂದು ಒತ್ತಾಯಿಸಿ ನ.೪ರಂದು ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯಲಿದೆ. ಈ ಸಂಬಂಧ ಆ ದಿನ ಕೊಪ್ಪ ಬಸ್ ನಿಲ್ದಾಣದಲ್ಲಿಯೂ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮುಖೇನ ಸರ್ಕಾರಕ್ಕೆ ಮನವಿ ನೀಡಲಾಗುವುದು. ಎಲ್ಲರೂ ಇದರಲ್ಲಿ ಭಾಗವಹಿಸಬೇಕು ಎಂದರು.

--

ಕ್ಯಾಪ್ಷನ್‌:

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಡಿ.ಎನ್.ಜೀವರಾಜ್ ಮಾತನಾಡಿದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ