- 60 ನಿರುದ್ಯೋಗಿ ಪದವೀಧರರಿಗೆ ₹28.98 ಲಕ್ಷ ವೆಚ್ಚದಲ್ಲಿ ಖರೀದಿಸಿರುವ ಲ್ಯಾಪ್ ಟಾಪ್‌ಗಳೀಗ ಮೂಲೆಗುಂಪು
- ತ್ರಿಶೂಲ್ ಏಜೆನ್ಸಿ ಲ್ಯಾಪ್ ಟಾಪ್‌ಗಳ ಖರೀದಿಸಿ 17 ತಿಂಗಳೇ ಕಳೆದರೂ ಹಣ ಸಂದಾಯವಾಗಿಲ್ಲ
- ಲ್ಯಾಪ್ ಟಾಪ್‌ಗಳಿಗೆ 1 ವರ್ಷದ ವಾರಂಟಿ ಅವಧಿಯೂ ಮುಗಿದಿದ್ದು ಯೋಜನೆ ಹಳ್ಳ ಹಿಡಿದಿರುವುದಕ್ಕೆ ಸಾಕ್ಷಿ - - -ಕನ್ನಡಪ್ರಭ ವಾರ್ತೆ, ಚನ್ನಗಿರಿ
ನಿರುದ್ಯೋಗಿ ಯುವ ಜನಾಂಗಕ್ಕೆ ಸ್ವಉದ್ಯೋಗ ನಡೆಸಿ, ಸ್ವಾವಲಂಬನೆ ಸಾಧಿಸಲಿ ಎಂಬ ಉದ್ದೇಶದಿಂದ ಈ ಹಿಂದಿನ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವಧಿಯಲ್ಲಿ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಲ್ಲಿ ಪಟ್ಟಣ ವ್ಯಾಪ್ತಿಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗದವರಿಗೆ ಹಾಗೂ ಅಂಗವಿಕಲರು ಸೇರಿದಂತೆ 60 ನಿರುದ್ಯೋಗಿ ಪದವೀಧರರಿಗೆ ₹28.98 ಲಕ್ಷ ವೆಚ್ಚದಲ್ಲಿ ಉಚಿತ ಲ್ಯಾಪ್ ಟಾಪ್‌ಗಳ ವಿತರಣೆಗೆ ಕ್ರಮ ಕೈಗೊಂಡಿದ್ದರು. ಈ ಬಗ್ಗೆ ಟೆಂಡರ್ ಪ್ರಕ್ರಿಯೆಯೂ ಮುಗಿದು, ಟೆಂಡರ್ ದಾರರು ಲ್ಯಾಪ್ ಟಾಪ್‌ಗಳನ್ನು ತಂದು ಇಟ್ಟುಕೊಂಡಿದ್ದಾರೆ. ಆದರೆ, ಅರ್ಹರಿಗೆ ಮಾತ್ರ ಇನ್ನೂ ಕೈಸೇರಿಲ್ಲ.
ವಾರಂಟಿ ಅವಧಿ ಅಂತ್ಯ:
ಪುರಸಭೆ ಆಡಳಿತ 60 ಅರ್ಹರ ಆಯ್ಕೆ ಪಟ್ಟಿಯನ್ನು ಡಿಸಿ ಕಚೇರಿಗೆ ಕಳುಹಿಸಬೇಕು. ಆದರೆ ಇಲ್ಲಿಯವರೆಗೂ ಫಲಾನುಭವಿಗಳ ಆಯ್ಕೆ ಪಟ್ಟಿ ಕಳಿಸಿಲ್ಲ. ಇದರ ಹಿಂದೆ ಯಾರ ಕೈವಾಡ ಇದೆ ಎನ್ನುವುದು ತಿಳಿಯದಾಗಿದೆ.
- - - ಬಾಕ್ಸ್
ಪುರಸಭೆಯ ಸಮುದಾಯ ಸಂಘಟನೆ ಅಧಿಕಾರಿ ಬಾಲಾಜಿ ರಾವ್ ಹೇಳುವಂತೆ, ಯೋಜನೆಯಡಿ ಸೌಲಭ್ಯಕ್ಕೆ 9 ಪುರಸಭೆ ಚುನಾಯಿತ ಸದಸ್ಯರೇ ಲ್ಯಾಪ್ ಟಾಪ್‌ಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಇದು ಕಾನೂನು ವಿರುದ್ಧ ನಡೆ. ಈ ಬಗ್ಗೆ ಪುರಸಭೆ ಸದಸ್ಯರ ಗಮನಕ್ಕೆ ತಂದರೆ, ಸೌಲಭ್ಯ ಯಾಕೆ ಕೊಡಲು ಬರುವುದಿಲ್ಲ ಎಂದು ದಬಾಯಿಸುತ್ತಾರೆ. ಸಮಸ್ಯೆಯನ್ನು ಮುಖ್ಯಾಧಿಕಾರಿ ಗಮನಕ್ಕೆ ತರಲಾಗಿದೆ. ಅವರ ತೀರ್ಮಾನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
- ಕೃಷ್ಣ ಡಿ. ಕಟ್ಟಿಮನಿ, ಮುಖ್ಯಾಧಿಕಾರಿ, ಪುರಸಭೆ
- - -ಬಾಕ್ಸ್
* ಲ್ಯಾಪ್‌ಟಾಪ್ ಖರೀದಿ ಹಣ ಬಾರದೇ ತೊಂದರೆಲ್ಯಾಪ್ ಟಾಪ್ ಟೆಂಡರ್ ಪಡೆದ ತ್ರಿಶೂಲ್ ಏಜೆನ್ಸಿಯ ಚಂದನ್ ಮಾಹಿತಿ ನೀಡಿ, ದಾವಣಗೆರೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಈ ಯೋಜನೆ ಫಲಾನುಭವಿಗಳಿಗೆ ಲ್ಯಾಪ್‌ಟಾಪ್‌ಗಳನ್ನು ನೀಡಿ, ಆಯಾ ಟೆಂಡರ್‌ದಾರರು ಹಣವನ್ನು ಸರ್ಕಾರದಿಂದ ಪಡೆದುಕೊಂಡಿದ್ದಾರೆ. ಆದರೆ, ಚನ್ನಗಿರಿ ಪಟ್ಟಣದ ಪುರಸಭೆಯವರು ಫಲಾನುಭವಿಗಳ ಆಯ್ಕೆ ಮಾಡುವಲ್ಲಿ ಗೊಂದಲ ಸೃಷ್ಠಿಸಿದ್ದಾರೆ. ಈಗಾಗಲೇ ಲ್ಯಾಪ್ ಟಾಪ್‌ಗಳನ್ನು ಖರೀದಿ ಮಾಡಲಾಗಿದೆ. ಅವುಗಳ ಗ್ಯಾರಂಟಿ ವಾರಂಟಿಯ ಅವಧಿಗಳು ಮುಗಿಯುತ್ತಿವೆ. ಸಮಸ್ಯೆಗಳಿರುವ ಫಲಾನುಭವಿಗಳನ್ನು ಬಿಟ್ಟು ಇನ್ನುಳಿದ ಅರ್ಹರಿಗಾದರೂ ಲ್ಯಾಪ್ ಟಾಪ್ ಸೌಲಭ್ಯ ವಿತರಣೆಯಾಗಲಿ. ಈಗಾಗಲೇ ಖರೀದಿ ಮಾಡಿರುವ ಲ್ಯಾಪ್ ಟಾಪ್‌ಗಳ ಹಣವೂ ಬಾರದೇ ನಮಗೆ ತುಂಬಾ ತೊಂದರೆಯಾಗಿದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಲಿ ಎಂದು ಹೇಳುತ್ತಾರೆ. - - -
-10ಕೆಸಿಎನ್‌ಜಿ1:ಚನ್ನಗಿರಿ ಪಟ್ಟಣದ ಪುರಸಭೆ ಕಚೇರಿ.