ಕೆವಿಜಿ ಬ್ಯಾಂಕ್‌ನಿಂದ ವಿಕಾಸ ಸ್ಫೂರ್ತಿ ಯೋಜನೆ ಬಿಡುಗಡೆ

KannadaprabhaNewsNetwork |  
Published : Mar 12, 2024, 02:11 AM IST
10ಡಿಡಬ್ಲೂಡಿ3ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ಜಾರಿಗೆ ತಂದ ವಿನೂತನ ಕಿರುಸಾಲ ಯೋಜನೆಯನ್ನು ಧಾರವಾಡದಲ್ಲಿ ಬ್ಯಾಂಕಿನ ಅಧ್ಯಕ್ಷ ಶ್ರೀಕಾಂತ ಭಂಡಿವಾಡ ಬಿಡುಗಡೆ ಮಾಡಿದರು. | Kannada Prabha

ಸಾರಾಂಶ

ಗ್ರಾಮೀಣ ಸಾಲ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ, ಜನಸಾಮಾನ್ಯರನ್ನು ಚಿಕ್ಕ ಪ್ರಮಾಣದ ಆದಾಯ ತರಬಲ್ಲ ಚಟುವಟಿಕೆಗಳಿಗೆ ಪ್ರೇರೇಪಿಸುವ ಯತ್ನವಾಗಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ವಿನೂತನ ಸಾಲ ಯೋಜನೆಯನ್ನು ವಿಕಾಸ ಸ್ಫೂರ್ತಿ ಹೆಸರಿನಲ್ಲಿ ರೂಪಿಸಿದೆ.

ಧಾರವಾಡ:

ಗ್ರಾಮೀಣ ಸಾಲ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ, ಜನಸಾಮಾನ್ಯರನ್ನು ಚಿಕ್ಕ ಪ್ರಮಾಣದ ಆದಾಯ ತರಬಲ್ಲ ಚಟುವಟಿಕೆಗಳಿಗೆ ಪ್ರೇರೇಪಿಸುವ ಯತ್ನವಾಗಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ವಿನೂತನ ಸಾಲ ಯೋಜನೆಯನ್ನು ವಿಕಾಸ ಸ್ಫೂರ್ತಿ ಹೆಸರಿನಲ್ಲಿ ರೂಪಿಸಿದೆ.ಬ್ಯಾಂಕ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಯೋಜನೆ ಬಿಡುಗಡೆ ಮಾಡಿದ ಬ್ಯಾಂಕ್‌ ಅಧ್ಯಕ್ಷ ಶ್ರೀಕಾಂತ ಎಂ. ಭಂಡಿವಾಡ, ಇದೊಂದು ಜಾಮೀನು, ತೃತೀಯ ಭದ್ರತೆ ಬೇಡದ ಸರಳ ಯೋಜನೆ. ಆದಾಯ ತರಬಲ್ಲ ಚಟುವಟಿಕೆಗಳಾದ ಠೋಕ್ ವ್ಯಾಪಾರ, ಸಣ್ಣ ವ್ಯಾಪಾರ, ಗ್ರಾಮೀಣ ಕೈ ಕಸಬು ಅಲ್ಲದೆ ಯಾವುದೇ ಸ್ವ-ಉದ್ಯೋಗ ಮತ್ತು ಕೃಷಿಯೇತರ ಚಟುವಟಿಕೆ ಈ ಸಾಲ ಯೋಜನೆಯ ವ್ಯಾಪ್ತಿಗೆ ಒಳಪಡುತ್ತವೆ. ಈ ಸಾಲ ಯೋಜನೆಯಡಿ ಕನಿಷ್ಠ ₹ 50ರಿಂದ ಗರಿಷ್ಠ ₹ 2 ಲಕ್ಷ ವರೆಗೆ ಸಾಲ ದೊರೆಯಲಿದೆ. ಅತಿ ಸಣ್ಣ ಸಾಲಕ್ಕೆ ಜನರು ಖಾಸಗಿ ಲೇವಾದೇವಿಗಾರರ ಮೊರೆ ಹೋಗುವುದೇ ಜಾಸ್ತಿ. ಅಂತಹವರ ಕಪಿಮುಷ್ಟಿಯಿಂದ ಸಣ್ಣ ಸಾಲಗಾರರನ್ನು ಪಾರು ಮಾಡುವ ಉದ್ದೇಶದಿಂದ ಈ ಕಿರು ಸಾಲ ಯೋಜನೆ ರೂಪಿಸಿದೆ ಎಂದು ಶ್ರೀಕಾಂತ ಭಂಡಿವಾಡ ಹೇಳಿದರು.

ಎಷ್ಟೋ ಸಮಯದಲ್ಲಿ ಸಣ್ಣ ಸಾಲಗಾರರು ಸಾಲದ ಮರುಪಾವತಿಯನ್ನೇ ಯೋಚಿಸುತ್ತಾರೆ. ತಿಂಗಳಿಗೆ ₹1000 ಕಂತು ಕೂಡ ಅವರಿಗೆ ದೊಡ್ಡದಾಗಿ ಕಾಣುತ್ತದೆ. ಹೀಗಾಗಿ ಅವರು ಬ್ಯಾಂಕಿನತ್ತ ಮುಖ ಮಾಡುವುದಿಲ್ಲ. ಈ ಯೋಜನೆಯನ್ವಯ ಬ್ಯಾಂಕಿನ ನಿತ್ಯ ಠೇವಣಿ ಸಂಗ್ರಾಹಕ (ಪಿಗ್ಮಿ ಏಜಂಟ್) ನಿತ್ಯವೂ ಸಾಲಗಾರರ ಮನೆ ಬಾಗಿಲಿಗೆ ತೆರಳಿ ಅವರು ಕೊಟ್ಟಷ್ಟು ಹಣ ಸಂಗ್ರಹಿಸಿ ಬ್ಯಾಂಕಿಗೆ ಬಂದು ಅವರ ಖಾತೆಗೆ ಜಮಾ ಮಾಡುತ್ತಾನೆ. ಆ ಖಾತೆಗೆ ಜಮಾಗೊಂಡ ಹಣದಲ್ಲಿ ತಿಂಗಳಾವರ್ತೆಯಲ್ಲಿ ಸಾಲದ ಕಂತು ಪಡೆದುಕೊಳ್ಳಲಾಗುತ್ತದೆ ಎಂದು ವಿವರಿಸಿದರು.

ಸರಳ ಕಾಗದ ಪತ್ರಗಳು ಈ ಯೋಜನೆಯನ್ನು ಇನ್ನಷ್ಟು ಸರಳಗೊಳಿಸಿದೆ. ಈ ಯೋಜನೆಗೆ ಜನಸ್ಪಂದನೆ ವ್ಯಕ್ತವಾಗುವ ಎಲ್ಲ ಭರವಸೆ ಇದ್ದು, ಇದರಡಿಯಲ್ಲೇ ಮುಂದಿನ ಮೂರು ತಿಂಗಳ ಅವಧಿಯಲ್ಲಿ ಕನಿಷ್ಠ ₹ 100 ಕೋಟಿ ಸಾಲ ವಿತರಿಸಲಾಗುವುದು ಎಂದೂ ಶ್ರೀಕಾಂತ ಹೇಳಿದರು.ಬ್ಯಾಂಕಿನ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೇಮಕಾತಿ ಪ್ರಕ್ರಿಯೆ ಇನ್ನು ಸುಗಮ-ಒಳಮೀಸಲು ಬಿಲ್‌ಗೆ ಕೊನೆಗೂ ಗೌರ್ನರ್‌ ಗೆಹಲೋತ್‌ ಅಂಕಿತ
ಡಿಕೆಶಿ ಬಣದ 18 ಶಾಸಕರು, ಸಚಿವರಿಂದ ಡಿನ್ನರ್‌ ಪಾರ್ಟಿ