ಲೋಕಜ್ಞಾನ ಸಂಶೋಧನಾ ನಿಯತಕಾಲಿಕೆ ಬಿಡುಗಡೆ

KannadaprabhaNewsNetwork |  
Published : Sep 18, 2024, 01:58 AM IST
‘ಲೋಕಜ್ಞಾನ’ ಸಂಶೋಧನಾ ನಿಯತಕಾಲಿಕೆ ಬಿಡುಗಡೆ | Kannada Prabha

ಸಾರಾಂಶ

ತುಮಕೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ ಪ್ರಕಟಿಸುವ ಸಂಶೋಧನಾ ಪತ್ರಿಕೆ ಲೋಕಜ್ಞಾನದ ಸಂಯುಕ್ತ ಸಂಚಿಕೆಯನ್ನು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮತ್ತು ಕುಲಸಚಿವೆ ನಾಹಿದಾ ಜುಮ್‌ ಜುಮ್‌ ಮಂಗಳವಾರ ಬಿಡುಗಡೆಗೊಳಿಸಿದರು.

ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ ಪ್ರಕಟಿಸುವ ಸಂಶೋಧನಾ ಪತ್ರಿಕೆ ಲೋಕಜ್ಞಾನದ ಸಂಯುಕ್ತ ಸಂಚಿಕೆಯನ್ನು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮತ್ತು ಕುಲಸಚಿವೆ ನಾಹಿದಾ ಜುಮ್‌ ಜುಮ್‌ ಮಂಗಳವಾರ ಬಿಡುಗಡೆಗೊಳಿಸಿದರು. ಲೋಕಜ್ಞಾನ ಯುಜಿಸಿ ಕೇರ್ ಮಾನ್ಯತೆ ಹೊಂದಿರುವ ಪತ್ರಿಕೆಯಾಗಿದ್ದು, ಕರ್ನಾಟಕದ ವಿಶ್ವವಿದ್ಯಾಲಯಗಳಲ್ಲೇ ತುಮಕೂರು ವಿಶ್ವವಿದ್ಯಾಲಯದ ಈ ಪತ್ರಿಕೆಗೆ ಮಾತ್ರ ಇಂತಹ ಮಾನ್ಯತೆ ಒದಗಿದೆ.ಇಲ್ಲಿಯ ಎಲ್ಲ ಲೇಖನಗಳು ಆಹ್ವಾನಿತ ಲೇಖನಗಳಾಗಿದ್ದು ಕನ್ನಡ ಸಂಶೋಧನೆಯ ಗಾಂಭೀರ್ಯವನ್ನು ಎತ್ತಿ ಹಿಡಿಯುತ್ತಿವೆ ಎಂದು ಕುಲಪತಿಪ್ರೊ. ಎಂ.ವೆಂಕಟೇಶ್ವರಲು ಈ ಸಂದರ್ಭದಲ್ಲಿ ತಿಳಿಸಿದರು.

ಲೋಕಜ್ಞಾನದ ನಿಯತಕಾಲಿಕೆ ಸಂಪಾದಕ ಪ್ರೊ.ನಿತ್ಯಾನಂದ ಬಿ.ಶೆಟ್ಟಿ, ಆಂತರಿಕ ಗುಣಮಟ್ಟ ಭರವಸೆ ಕೋಶದ (ಐಕ್ಯೂಎಸಿ)ನಿರ್ದೇಶಕ ಪ್ರೊ. ಬಿ.ರಮೇಶ್, ಯೋಜನೆ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಂಡಳಿ (ಪಿಎಂಇಬಿ) ನಿರ್ದೇಶಕ ಪ್ರೊ.ಬಿ. ಟಿ.ಸಂಪತ್‌ ಕುಮಾರ್ ಮತ್ತು ವಿವಿಯ ಉದ್ಯೋಗಾಧಿಕಾರಿ ಪ್ರೊ.ಕೆ.ಜಿ. ಪರಶುರಾಮ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಲ್ಪಕಲಾ ಅಕಾಡೆಮಿ ಗೌರವ-ಶಿಲ್ಪಶ್ರೀ ಪ್ರಶಸ್ತಿ ಪ್ರಕಟ
ಹಿರಿಯ ಕವಿಗಳ ಬರಹದಿಂದ ಹೆಚ್ಚು ಪ್ರಭಾವಿತ: ಪ್ರೊ.ರಂಗಸ್ವಾಮಿ