‘ಮೌನದ ಮಹಾ ಪಯಣ’ ‘ಅಭಿಮನ್ಯುವಿಗೆ ಕಾವ್ಯಾರತಿ’ ಕೃತಿಗಳ ಬಿಡುಗಡೆ

KannadaprabhaNewsNetwork |  
Published : Sep 10, 2026, 01:15 AM IST
6 | Kannada Prabha

ಸಾರಾಂಶ

‘ಪ್ರಾಣಿಗಳ ನಡವಳಿಕೆ ಬಗ್ಗೆ ಬರೆಯುವುದೇ ಒಂದು ಭಾವನಾತ್ಮಕ ಹಾಗೂ ಬಹು ದೀರ್ಘವಾದ ಪ್ರತಿಕ್ರಿಯೆ. ಏಕೆಂದರೆ ನನ್ನ ವಿದೇಶಿ ಸ್ನೇಹಿತರೊಬ್ಬರು ಒಂದು ಪಕ್ಷಿಯ ಬಗ್ಗೆ 50 ವರ್ಷ ಅಧ್ಯಯನ ಮಾಡಿ ಅವುಗಳ ವರ್ತನೆಯ ಬಗ್ಗೆ ದಾಖಲಿಸಿದರು. ಆದರೂ ಅದು ಪೂರ್ಣಗೊಳ್ಳಲಿಲ್ಲ.

ಕನ್ನಡಪ್ರಭ ವಾರ್ತೆ ಮೈಸೂರು

ಹಿರಿಯ ಪತ್ರಕರ್ತ ಐತಿಚಂಡ ರಮೇಶ್‌ ಉತ್ತಪ್ಪ ಅವರ ‘ಮೌನದ ಮಹಾ ಪಯಣ’ ‘ಅಭಿಮನ್ಯುವಿಗೆ ಕಾವ್ಯಾರತಿ’ ಕೃತಿಗಳನ್ನು ಬುಧವಾರ ಬಿಡುಗಡೆಗೊಳಿಸಲಾಯಿತು.

ಮೈಸೂರು ಕಲ್ಚರಲ್‌ಅಸೋಸಿಯೇಷನ್‌, ಕರ್ನಾಟಕ ಅರಣ್ಯ ಇಲಾಖೆ ವನ್ಯಜೀವಿ ವಿಭಾಗ ವತಿಯಿಂದ ಪೀಪಲ್ಸ್‌ ಪಾರ್ಕಿನ ನಗರ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್‌ಪ್ರಭುಗೌಡ, ನಗರ ಕೇಂದ್ರ ಗ್ರಂಥಾಲಯ ಉಪ ನಿರ್ದೇಶಕ ಬಿ.ಮಂಜುನಾಥ್‌ ಪುಸ್ತಕಗಳನ್ನು ಬಿಡುಗಡೆಗೊಳಿಸಿದರು.

ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಕೃಪಾಕರ್‌ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಪ್ರಾಣಿಗಳ ನಡವಳಿಕೆ ಬಗ್ಗೆ ಬರೆಯುವುದೇ ಒಂದು ಭಾವನಾತ್ಮಕ ಹಾಗೂ ಬಹು ದೀರ್ಘವಾದ ಪ್ರತಿಕ್ರಿಯೆ. ಏಕೆಂದರೆ ನನ್ನ ವಿದೇಶಿ ಸ್ನೇಹಿತರೊಬ್ಬರು ಒಂದು ಪಕ್ಷಿಯ ಬಗ್ಗೆ 50 ವರ್ಷ ಅಧ್ಯಯನ ಮಾಡಿ ಅವುಗಳ ವರ್ತನೆಯ ಬಗ್ಗೆ ದಾಖಲಿಸಿದರು. ಆದರೂ ಅದು ಪೂರ್ಣಗೊಳ್ಳಲಿಲ್ಲ. ಇಂತಹ ಗಂಭೀರವಾದ ವಿಚಾರಗಳನ್ನು ಇಟ್ಟುಕೊಂಡು ರಮೇಶ್‌ಉತ್ತಪ್ಪ ಅವರು ಕೃತಿ ರಚಿಸಿದ್ದಾರೆ. ಅದರಲ್ಲಿಯೂ ಆನೆಗಳ ವರ್ತನೆ, ಮನುಷ್ಯರು ಅವುಗಳೊಟ್ಟಿಗೆ ಹೇಗೆ ನಡೆದುಕೊಳ್ಳಬೇಕು ಎಂಬ ಅಂಶಗಳನ್ನು ತಿಳಿಸಿದ್ದಾರೆ ಎಂದರು.

ರಮೇಶ್‌ ಉತ್ತಪ್ಪ ಅವರ ಎರಡೂ ಕೃತಿಗಳ ರಚನೆಯೇ ಒಂದು ಭಾವನಾತ್ಮಕ ಪ್ರತಿಕ್ರಿಯೆ ಆಗಿದೆ. ಅದರ ಮೂಲಕ ಜನರಿಗೆ ಪ್ರಾಣಿಗಳ ಮೇಲಿನ ಪ್ರೀತಿ ಹೆಚ್ಚಾಗುವುದಾದರೆ ಸಂತೋಷ ಎಂದು ಅಭಿನಂದಿಸಿರು.

ಎಡಿಸಿ ಆರ್‌.ಐಶ್ವರ್ಯ ಅವರು ಅಭಿಮನ್ಯುವಿನ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ‘ಪ್ರಾಣಿಗಳಿಗೆ ಸಾಹಿತ್ಯದ ಮೂಲಕ ಅಭಿನಂದಿಸುವ ಪ್ರಪಂಚದಲ್ಲಿಯೇ ವಿಶಿಷ್ಟ ಕೃತಿ ಇದಾಗಿದೆ. ಪ್ರಾಣಿಗಳೊಂದಿಗೆ ಸಂಯಮದಿಂದ ವರ್ತಿಸಬೇಕು. ಮೌನ ಸಂವಹನ ಮಾಡಬೇಕು. ದೂರದಿಂದಲೇ ನೋಡಿ ಪ್ರಾಣಿಗಳ ಸೌಖ್ಯ ಬಯಸಬೇಕು ಎಂದು ಕೃತಿಯ ಮೂಲಕ ತಿಳಿಸಿಕೊಡಲಾಗಿದೆ ಎಂದರು.

‘ಲೇಖಕರು ಕಥೆ ಹೇಳುವುದು ಸಹಜ. ಆದರೆ, ಅಭಿಮನ್ಯು ಆನೆಯನ್ನು ಮುಖ್ಯವಾಗಿ ಇಟ್ಟುಕೊಂಡು ಆತನ ಮೂಲಕವೇ ಆತನ ವಿಶಿಷ್ಟ ಕಾರ್ಯಗಳಮನ್ನು ಹೇಳಿಸುವ ಸಾಹಿತ್ಯದ ಕಾರ್ಯ ವಿಶೇಷವಾಗಿದೆ. ಪ್ರಾಣಿಗಳು ಬಹಳ ಸೂಕ್ಷ್ಮ ಜೀವಿಗಳು. ಹಾಗಾಗಿ ಅವುಗಳೊಂದಿಗೆ ಮೌನದಿಂದಲೇ ಮಾತನಾಡಬೇಕು. ದೂರದಲ್ಲೇ ನಿಂತು ಅವಗಳ ಸೌಖ್ಯ ಬಯಸಬೇಕು ಎಂಬ ಅಂಶವನ್ನು ರಮೇಶ್‌ಉತ್ತಪ್ಪ ಅವರು ಕೃತಿಯ ಮೂಲಕ ತಿಳಿಸಿದ್ದಾರೆ ಎಂದರು.

ವನ್ಯಜೀವಿ ವಿಭಾಗದ ಡಿಸಿಎಫ್‌ಡಾ.ಐ.ಬಿ. ಪ್ರಭುಗೌಡ ಮಾತನಾಡಿ, ಅಭಿಮನ್ಯುವಿನ ಬಗ್ಗೆ ಪುಸ್ತಕ ಬರೆದಿದ್ದೇವೆ ಎಂದಾಗ ಅದರ ಹುಟ್ಟು ಮತ್ತು ಬೆಳವಣಿಗೆಗಳ ಬಗ್ಗೆ ಇರಬಹುದು ಎಂದುಕೊಂಡೇ. ಆದರೆ, ಓದಿದಾಗ ಇದೊಂದು ಭಾವನಾತ್ಮಕ ಕವಿತೆಗಳ ಸಮಾಗಮ ಎಂದು ತಿಳಿಯಿತು. ಅಭಿಮನ್ಯು ಕಾರ್ಯಚರಣೆಗಳಿದರೆ ವೀರಾವೇಶದಿಂದ ಹೋರಾಡಿ ರೈತರ ಜಮೀನುಗಳಿಗೆ ನುಗ್ಗಿ ಹಾವಳಿ ಎಬ್ಬಿಸುವ ಆನೆಗಳನ್ನು ತಹಬದಿಗೆ ತರುತ್ತಾನೆ. ಅದೇ ರೀತಿ ದಸರಾ ಮಹೋತ್ಸವಕ್ಕೆ ಕರೆತಂದರೆ ತನ್ನಷ್ಟು ಸಂಯಮದವ ಯಾರೂ ಇಲ್ಲ ಎಂಬಂತೆ ಲಕ್ಷಾಂತರ ಜನರ ನಡುವೆ ಅಂಬಾರಿ ಹೊತ್ತು ಜಂಬೂಸವಾರಿಯಲ್ಲಿ ಸೈ ಎನಿಸಿಕೊಳ್ಳುತ್ತಾನೆ. ಈ ರೀತಿ ಎರಡು ವೈರುಧ್ಯಗಳನ್ನು ಹೊಂದಿ ಅವುಗಳನ್ನು ಕರಾರುವಕ್ಕಾಗಿ ನಿಭಾಯಿಸುವ ಗುಣವನ್ನು ಹೊಂದಿರುವ ಈ ರೀತಿಯ ಪ್ರಾಣಿಯನ್ನು ನೋಡಿಯೇ ಇಲ್ಲ ಎಂದು ಸ್ಮರಿಸಿದರು.

ವಸಂತ ಮತ್ತು ಅಭಿಮನ್ಯುವಿನ ನಡುವೆ ಅವಿನಾಭಾವ ಸಂಬಂಧವಿದೆ. ಅದಕ್ಕಾಗಿಯೇ ಅವರಿಬ್ಬರ ಕೆಲಸ ಇಷ್ಟು ಯಶಸ್ವಿಯಾಗಿದೆ. ವಸಂತನಿಗೆ ಮತ್ತೊಂದು ಆನೆ ಕೊಡುತ್ತೇವೆ. ಆತ ಅದನ್ನೂ ಪಳಗಿಸಿ ತನ್ನ ಎಂದಿನ ಕೆಲಸವನ್ನು ಮುಂದುವರಿಸಲು ಅವಕಾಶ ಮಾಡಿಕೊಡುತ್ತೇವೆ ಎಂದರು.

ಬಳಿಕ ಮೈಸೂರು ಕಲ್ಚರಲ್‌ಅಸೋಸಿಯೇಷನ್‌ ಅಧ್ಯಕ್ಷ ಎ.ಪಿ. ನಾಗೇಶ್‌, ಕಾರ್ಯದರ್ಶಿ ಮಹದೇವ್‌ಅವರು ಅಭಿಮನ್ಯು ಮಾವುತ ವಸಂತ ಅವರಿಗೆ ಸನ್ಮಾನಿಸಿದರು. ಇದೇ ವೇಳೆ ಮಾವುತ ವಸಂತ ಮಾತನಾಡಿ, ಕರ್ನಾಟಕದ ಎಲ್ಲಾ ಕಡೆ ಕೆಲಸ ಮಾಡಿರುವ ಅಭಿಮನ್ಯು ಆನೆಯ ಬಗ್ಗೆ ರಮೇಶ್‌ಉತ್ತಪ್ಪ ಅವರು ಪುಸ್ತಕ ಬರೆದಿದ್ದಾರೆ. ಆ ಪುಸ್ತಕಗಳನ್ನು ಎಲ್ಲರೂ ಓದಬೇಕು. ಆನೆಗಳನ್ನು ಪಳಗಿಸುವುದು ಅಷ್ಟು ಸುಲಭವಲ್ಲ. ಎಲ್ಲರೂ ದಸರಾಗೆ ಬರಬೇಕು. ಆನೆಗಳನ್ನು ಹಾಗೂ ತಾಯಿ ಚಾಮುಂಡೇಶ್ವರಿಯನ್ನು ನೋಡಬೇಕು ಎಂದರು.

ಸಾರ್ವಜನಿಕ ಗ್ರಂಥಾಲಯ ನಗರ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕ ಮಂಜುನಾಥ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ. ಸುದರ್ಶನ್‌, ಕೃತಿಗಳ ಕರ್ತೃ ಐತಿಚಂಡ ರಮೇಶ್‌ಉತ್ತಪ್ಪ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆತ್ರೇಯ ಕಾಲೇಜು ಲಾಕ್‌ಡೌನ್‌: 2ನೇ ದಿನಕ್ಕೆ ಕಾಲಿಟ್ಟ ಧರಣಿ
ಈಶ್ವರ ಖಂಡ್ರೆ ಭೇಟಿ ಬೆನ್ನಲ್ಲೇ ಹಿರೇಹಳ್ಳಿ ಕೆರೆ ಒತ್ತುವರಿ ತೆರವು