ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಈ ಕುರಿತು ಪ್ರಕಟಣೆ ನೀಡಿರುವ ಅವರು, ಈ ವಿಧೇಯಕ ಜಾರಿಗೆ ಬಂದರೆ ಪತ್ರಕರ್ತರು ಸರ್ಕಾರದ ವೈಫಲ್ಯಗಳನ್ನು ಪ್ರಶ್ನಿಸಲು ಭಯಪಡಬೇಕಾಗುತ್ತದೆ. ಸರ್ಕಾರಗಳ ಭ್ರಷ್ಟಾಚಾರವನ್ನು ಬಯಲಿಗೆ ಎಳೆಯಲು ಮಾಧ್ಯಮಗಳು ಹೆದರಿಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಮಾಧ್ಯಮಗಳು ಏನನ್ನಾದರೂ ಬರೆಯಲು ಸಾವಿರ ಸಲ ಯೋಚನೆ ಮಾಡಬೇಕಾಗುತ್ತದೆ. ಈ ಕಾನೂನು ಮಾಧ್ಯಮ ಲೋಕಕ್ಕೆ ಕಂಟಕವಾಗಲಿದೆ. ಮಾಧ್ಯಮ ಲೋಕಕ್ಕೆ ಮರಣಗಂಟೆಯಾಗುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಜ್ಯಪಾಲರು ಈ ವಿಧೇಯಕಕ್ಕೆ ಸಹಿ ಹಾಕಬಾರದು. ಈ ಕಾನೂನು ಕನ್ನಡಪರ ಸಂಘಟನೆಗಳ ಸಾಹಿತಿಗಳ ಹಾಗೂ ಕಲಾವಿದರ ವ್ಯಕ್ತಿ ಸ್ವಾತಂತ್ರ್ಯದ ಮೇಲೆ ಮಾಡಿದ ಸವಾರಿಯಾಗಿದೆ. ಸತ್ಯವನ್ನು ಹೇಳುವವರ ಬಾಯಿಗೆ ಬೀಗ ಹಾಕುವ ಕಾನೂನು ಇದಾಗಿದೆ. ಈ ಕಾನೂನು ತಮಗೆ ಬೇಕಾದಂತೆ ಬಳಸಿಕೊಳ್ಳುವ ಸಾಧ್ಯತೆ ಇರುವುದರಿಂದ ನಾಡಿನ ಲೇಖಕರು, ಬುದ್ಧಿಜೀವಿಗಳು, ಪತ್ರಕರ್ತರು ವಿವಿಧ ಸಂಘಟನೆಗಳು ಹಾಗೂ ಕನ್ನಡ ಪರ ಹೋರಾಟಗಾರರು ಒಟ್ಟಾಗಿ ವಿರೋಧಿಸುವ ಅವಶ್ಯಕತೆ ಇದೆ. ಒಟ್ಟಾರೆಯಾಗಿ ಕಾನೂನು ವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆಯಾಗಿದೆ. ಸಂವಿಧಾನದ ಆಶಯಗಳಿಗೆ ಧಕ್ಕೆಯಾಗುವ ಕಾನೂನು ಜಾರಿಗೆ ಬರದಂತೆ ರಾಜ್ಯಪಾಲರ ಮೇಲೆ ಒತ್ತಡ ತರಬೇಕು ಜೊತೆಗೆ ಈ ನಡೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬೇಕೆಂದು ವಿವೇಕಾನಂದ ಕಲ್ಯಾಣಶೆಟ್ಟಿ ತಿಳಿಸಿದ್ದಾರೆ.