ಹರಿಹರ ಕ್ರಿಕೆಟ್ ಟೂರ್ನಿಯಲ್ಲಿ ವಕೀಲರ ತಂಡಕ್ಕೆ ಜಯ

KannadaprabhaNewsNetwork |  
Published : Nov 27, 2024, 01:00 AM IST
ಚಿತ್ರದುರ್ಗ ಎರಡನೇ ಪುಟದ ಟಿಂಟ್  ಬಾಟಂ | Kannada Prabha

ಸಾರಾಂಶ

Lawyer's team wins in Harihar cricket tournament

-ವಕೀಲರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಿಗೆ ಟ್ರೋಪಿ

-----

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಹರಿಹರದಲ್ಲಿ ನಡೆದ ಅಂತರ್ ಜಿಲ್ಲಾ ಮಟ್ಟದ ಟೆನ್ನಿಸ್‍ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಿ ಟ್ರೋಫಿ ಗೆದ್ದ ತಂಡ ವಕೀಲರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಿಗೆ ಟ್ರೋಪಿ ಸಮರ್ಪಿಸಿತು.

ಟ್ರೋಫಿ ಸ್ವೀಕರಿಸಿ ಮಾತನಾಡಿದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ, ವಕೀಲರ ಕ್ರೀಡಾ ಮನೋಭಾವ ಇಮ್ಮಡಿಯಾಗಬೇಕು. ಹರಿಹರದಲ್ಲಿ ನಡೆದ ಟೆನ್ನಿಸ್‍ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ನಮ್ಮ ವಕೀಲರು ಟ್ರೋಫಿ ಗೆದ್ದಿರುವುದು ಅತ್ಯಂತ ಸಂತೋಷ. ಮುಂದಿನ ದಿನಗಳಲ್ಲಿ ಚಿತ್ರದುರ್ಗದಲ್ಲಿ ಅಂತರ್ ಜಿಲ್ಲಾ ಕ್ರಿಕೆಟ್ ಟೂರ್ನಿ ನಡೆಸುವ ಚಿಂತನೆಯಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕೆಂದು ವಕೀಲರು ವಿನಂತಿಸಿದರು.

ಹಿರಿಯ ನ್ಯಾಯವಾದಿ ಎಚ್.ಎಂ.ಎಸ್.ನಾಯಕ ಮಾತನಾಡಿ, ಟ್ರೋಫಿ ತರುವ ಮೂಲಕ ವಕೀಲರ ಸಂಘಕ್ಕೆ ಗೌರವ ತಂದುಕೊಟ್ಟಿರುವುದು ಹೆಮ್ಮೆಯ ಸಂಗತಿ. ಕ್ರೀಡೆಯಲ್ಲಿ ಸೋಲು-ಗೆಲುವಿಗಿಂತ ಚಾಣಾಕ್ಷತನ ಮುಖ್ಯ. ಸೋಲಿನಿಂದ ಗೆಲ್ಲಬೇಕೆಂಬ ಸ್ಫೂರ್ತಿ ಹೆಚ್ಚಾಗುತ್ತದೆ ಎಂದು ಹೇಳಿದರು.

ನ್ಯಾಯವಾದಿ ರಿಜ್ವಾನ್ ಮಾತನಾಡಿ, ವಕೀಲರ ಸಂಘ ಹರಿಹರದಲ್ಲಿ ನಡೆದ ಟೂರ್ನಿಯಲ್ಲಿ ಟ್ರೋಫಿ ಗೆದ್ದಿರುವುದು ಸಂತಸವಾಗಿದೆ. ಚಿತ್ರದುರ್ಗ ಅಂತರ್ ಜಿಲ್ಲಾ ಟೂರ್ನಮೆಂಟ್ ನಡೆಸಿ ಎಂದು ವಕೀಲರ ಸಂಘಕ್ಕೆ ಸಲಹೆ ನೀಡಿದರು.

ವಕೀಲರ ಸಂಘದ ಮಾಜಿ ಅಧ್ಯಕ್ಷ ಎಸ್.ವಿಜಯಕುಮಾರ್ ಮಾತನಾಡಿ, ಚಿತ್ರದುರ್ಗ, ಶಿವಮೊಗ್ಗ, ಬಳ್ಳಾರಿ, ದಾವಣಗೆರೆ, ತುಮಕೂರು ಜಿಲ್ಲೆಗಳ ಅಂತರ್ ಜಿಲ್ಲಾ ಕ್ರಿಕೆಟ್ ಟೂರ್ನಿಯನ್ನು ಚಿತ್ರದುರ್ಗದಲ್ಲಿ ನಡೆಸೋಣ. ಪ್ರತಿನಿತ್ಯ ಅಭ್ಯಾಸದೊಂದಿಗೆ ಸತತ ಪ್ರಯತ್ನದಿಂದ ಮಾತ್ರ ಗೆಲುವು ಸಾಧಿಸಬಹುದು ಎಂದು ಹೇಳಿದರು.

ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಗಂಗಾಧರ್, ಉಪಾಧ್ಯಕ್ಷ ಬಿ.ಎಂ.ಅನಿಲ್‍ಕುಮಾರ್, ವಕೀಲರಾದ ಹನುಮಂತಪ್ಪ, ಮೂರ್ತಿ, ಲೋಕೇಶ್, ಪಿ.ಆರ್.ವೀರೇಶ್, ಅಶೋಕ್, ಶಿವಕುಮಾರ್ ಇನ್ನು ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದರು.

---------------

ಪೋಟೋ: ಹರಿಹರದಲ್ಲಿ ನಡೆದ ಅಂತರ್ ಜಿಲ್ಲಾ ಟೆನ್ನಿಸ್‍ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಚಿತ್ರದುರ್ಗ ವಕೀಲರ ತಂಡ ಜಯ ಸಾಧಿಸಿದ್ದು, ಈ ಸಂಬಂಧದ ಟ್ರೋಫಿಯನ್ನು ವಕೀಲರ ಸಂಘಕ್ಕೆ ಸಮರ್ಪಿಸಲಾಯಿತು.

------

ಪೋಟೋ: 26 ಸಿಟಿಡಿ2

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ