ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಜೆಎಂಎಫ್‌ಸಿ ಸಿವಿಲ್ ನ್ಯಾಯಾಲಯಕ್ಕೆ ನೂತನವಾಗಿ ವರ್ಗಾವಣೆಗೊಂಡು ಆಗಮಿಸಿರುವ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಸುಧೀರ್ ಮತ್ತು ಅಪರ ಸಿವಿಲ್ ನ್ಯಾಯಾಧೀಶ ದೇವರಾಜ್ ಅವರನ್ನು ಸ್ವಾಗತಿಸಿ ನೂತನ ನ್ಯಾಯಾಂಗಣವನ್ನು ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದರು.
ಕೃಷ್ಣರಾಜಪೇಟೆ ನ್ಯಾಯಾಲಯದಲ್ಲಿ 4500ಕ್ಕೂ ಹೆಚ್ಚಿನ ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ. ಶೀಘ್ರವಾಗಿ ಕಕ್ಷೀದಾರರಿಗೆ ನ್ಯಾಯ ಒದಗಿಸಿಕೊಡುವ ದಿಕ್ಕಿನಲ್ಲಿ ವಕೀಲರು ಬದ್ಧತೆಯಿಂದ ವಾದ ಮಂಡಿಸಿ ಶೀಘ್ರ ನ್ಯಾಯದಾನಕ್ಕೆ ನ್ಯಾಯಧೀಶರಿಗೆ ಪೂರಕ ಸಹಕಾರವನ್ನು ನೀಡಿ ಕೆಲಸ ಮಾಡಬೇಕು ಎಂದರು.ರಾಜ್ಯ ಉಚ್ಚ ನ್ಯಾಯಾಲಯವು ಅತಿ ಶೀಘ್ರದಲ್ಲಿಯೇ ಕೆ.ಆರ್.ಪೇಟೆ ಪಟ್ಟಣದಲ್ಲಿ ಜಿಲ್ಲಾ ಸೆಷನ್ಸ್ ನ್ಯಾಯಾಲಯವನ್ನು ಆರಂಭ ಮಾಡುವ ಸಾಧ್ಯತೆ ಇದೆ. ನೀವು ಶ್ರೀರಂಗಪಟ್ಟಣದ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಕ್ರಿಮಿನಲ್ ಕೇಸುಗಳಿಗಾಗಿ ಅಲೆದಾಡುವ ಅಗತ್ಯವು ಸದ್ಯದಲ್ಲೇ ನಿಲ್ಲಲಿದೆ ಎಂದರು.
ಅಪರ ಸಿವಿಲ್ ನ್ಯಾಯಾಧೀಶರಾದ ಶಕುಂತಲಾ ಮಾತನಾಡಿ, ವಕೀಲರು ನೂತನ ನ್ಯಾಯಾಧೀಶರಿಗೆ ಪೂರಕವಾಗಿ ಸಹಕಾರ ನೀಡಿ ನ್ಯಾಯ ಬದ್ಧವಾಗಿ ತೀರ್ಪು ನೀಡಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಈ ವೇಳೆ ಸರ್ಕಾರಿ ಅಭಿಯೋಜಕ ಸುರೇಂದ್ರ, ವಕೀಲರ ಸಂಘದ ಕಾರ್ಯದರ್ಶಿ ರಾಜೇಗೌಡ, ಪದಾಧಿಕಾರಿಗಳಾದ ದಿನೇಶ್, ಡಿ.ಆರ್.ಜಗದೀಶ್, ನಿರಂಜನ, ಸುಜಾತ, ಹಿರಿಯ ವಕೀಲರರಾದ ಎಸ್.ಸಿ.ವಿಜಯಕುಮಾರ್, ಜಿ.ಆರ್. ಅನಂತರಾಮಯ್ಯ, ಎಂ.ಆರ್. ಪ್ರಸನ್ನಕುಮಾರ್, ಕೆ.ಎನ್.ನಾಗರಾಜು, ಕೆರೆಮೇಗಳಕೊಪ್ಪಲು ಶಂಕರೇಗೌಡ, ಬಂಡಿಹೊಳೆ ಗಣೇಶ್, ಗಂಜಿಗೆರೆ ಲೋಕೇಶ್, ಎಂ.ಎಲ್.ಸುರೇಶ್, ಸಿ.ಎನ್.ಮೋಹನ್, ಕೆ.ಆರ್.ಮಹೇಶ್, ನಯಾಜ್‌ಪಾಷ, ಮಂಜುನಾಥ್ ಉಪಸ್ಥಿತರಿದ್ದರು.