ಕಡೂರು ಪಟ್ಟಣದ ಸುತ್ತಲೂ ಹೆಚ್ಚಿದೆ ಲೇಔಟ್ ಸಂಸ್ಕೃತಿ: ಆನಂದ್

KannadaprabhaNewsNetwork |  
Published : Nov 24, 2025, 01:45 AM IST
23ಕೆಕೆಡಿಯು1 | Kannada Prabha

ಸಾರಾಂಶ

ಕಡೂರು, ಭೂಮಿಯ ಮಾಲೀಕರು ಗುಂಟೆಗಳ ಲೆಕ್ಕದಲ್ಲಿ ಗುಂಟೆ ಲೆಕ್ಕದಲ್ಲಿ ತಮ್ಮ ಜಮೀನುಗಳನ್ನು ಮಾರಾಟ ಮಾಡಿರುವುದರಿಂದ ಭೂಮಿ ಖರೀದಿಸಿ ಮನೆ ನಿರ್ಮಿಸಲು ಮುಂದಾದವರು ಪಂಚಾಯಿತಿ ಲೆಕ್ಕವೂ ಇಲ್ಲ, ಪುರಸಭೆ ಖಾತೆಯೂ ಇಲ್ಲ ಎನ್ನುವ ಅಡಕತ್ತರಿಯಲ್ಲಿ ಸಿಲುಕಿ ಪಟ್ಟಣದ ಸುತ್ತ ಲೇ ಔಟ್ ಸಂಸ್ಕೃತಿ ಹೆಚ್ಚಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

- ಮಹಾಲಕ್ಷ್ಮೀ ಲೇಔಟಿನಲ್ಲಿ ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆಕನ್ನಡಪ್ರಭ ವಾರ್ತೆ, ಕಡೂರು

ಭೂಮಿಯ ಮಾಲೀಕರು ಗುಂಟೆಗಳ ಲೆಕ್ಕದಲ್ಲಿ ಗುಂಟೆ ಲೆಕ್ಕದಲ್ಲಿ ತಮ್ಮ ಜಮೀನುಗಳನ್ನು ಮಾರಾಟ ಮಾಡಿರುವುದರಿಂದ ಭೂಮಿ ಖರೀದಿಸಿ ಮನೆ ನಿರ್ಮಿಸಲು ಮುಂದಾದವರು ಪಂಚಾಯಿತಿ ಲೆಕ್ಕವೂ ಇಲ್ಲ, ಪುರಸಭೆ ಖಾತೆಯೂ ಇಲ್ಲ ಎನ್ನುವ ಅಡಕತ್ತರಿಯಲ್ಲಿ ಸಿಲುಕಿ ಪಟ್ಟಣದ ಸುತ್ತ ಲೇ ಔಟ್ ಸಂಸ್ಕೃತಿ ಹೆಚ್ಚಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು. ಭಾನುವಾರ ಪಟ್ಟಣದ 5ನೇ ವಾರ್ಡ್ ಬಡಾವಣೆ ಪಕ್ಕದಲ್ಲಿ ಮಲ್ಲೇಶ್ವರ ಗ್ರಾಪಂ ವ್ಯಾಪ್ತಿಗೆ ಒಳಪಡುವ ಮಹಾಲಕ್ಷ್ಮೀ ಲೇಔಟಿನ ಲ್ಲಿ ಮುಖ್ಯಮಂತ್ರಿಯವರ ವಿಶೇಷ ₹20 ಲಕ್ಷ ಅನುದಾನದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಕಡೂರು ಪಟ್ಟಣದ ಸುತ್ತಲೂ ಲೇ ಔಟ್ ಸಂಸ್ಕೃತಿ ಹೆಚ್ಚುವ ಮೂಲಕ ಅನೇಕ ಬಡಾವಣೆಗಳು ತಲೆ ಎತ್ತಿದ್ದರೂ ಮೂಲ ಸೌಕರ್ಯಗಳ ಕೊರತೆ ಇದೆ. ಇದಕ್ಕೆ ಪರಿಹಾರವಾಗಿ ರಾಜ್ಯ ಸರ್ಕಾರ ಲೇ ಔಟ್ ನಿರ್ಮಾಣದ ಸಂದರ್ಭ ದಲ್ಲಿ ರಸ್ತೆ, ಚರಂಡಿ, ವಿದ್ಯುತ್, ನೀರಿನ ಸಂಪರ್ಕ ಒದಗಿಸಿಯೇ ನಿವೇಶನ ಮಾರಾಟಕ್ಕೆ ಮುಂದಾಗಬೇಕು ಎಂದು ಮಾರ್ಗ ಸೂಚಿ ಹೊರಡಿಸಿ, ಗುಂಟೆ ಲೆಕ್ಕದಲ್ಲಿ ಬಿಡಿ ಜಮೀನು ಮಾರಾಟಕ್ಕೆ ಕಡಿವಾಣ ಹಾಕಿದೆ. 5 ಗುಂಟೆಗಿಂತ ಕಡಿಮೆ ವಿಸ್ತೀರ್ಣದ ಭೂಮಿ ನೋಂದಣಿಯಾಗದಂತೆ ಕಾನೂನು ಮಾಡಿದೆ. ಸದ್ಯ ಗುಂಟೆ ಲೆಕ್ಕದಲ್ಲಿ ಭೂಮಿ ಖರೀದಿಸಿದವರು, ಶುಲ್ಕ ಪಾವತಿಸಿ ಬಿ ಖಾತಾ ಮಾಡಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಕಳೆದ 50 ವರ್ಷಗಳಲ್ಲಿ ಕ್ಷೇತ್ರದಲ್ಲಿ ಕೇವಲ 20 ಕಂದಾಯ ಗ್ರಾಮ, ಉಪ ಗ್ರಾಮಗಳ ರಚನೆಯಾಗಿದೆ. ತಮ್ಮ ಎರಡೂವರೆ ವರ್ಷದ ಅವಧಿಯಲ್ಲಿ 131 ಕಂದಾಯ ಗ್ರಾಮ, ಉಪ ಗ್ರಾಮಗಳ ರಚನೆಯಾಗಿದೆ. ಇದರ ಶ್ರೇಯಸ್ಸು ಕಂದಾಯ ಸಚಿವ ಕೃಷ್ಣ ಭೈರೇಗೌಡರಿಗೆ ಸಲ್ಲಬೇಕು ಎಂದರು.ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ನಿವೇಶನ ಖರೀದಿ ಮಾಡುವವರು ಎಲ್ಲ ಮೂಲಸೌಕರ್ಯಗಳೂ ಬಡಾವಣೆಯಲ್ಲಿ ಇವೆಯೇ ಎನ್ನುವುದನ್ನು ಖಾತರಿಪಡಿಸಿಕೊಂಡು ಖರೀದಿಗೆ ಮುಂದಾಗಬೇಕು. ಜತೆಗೆ ಲೇ ಔ ಟಿನಲ್ಲಿ ನಿವಾಸಿಗಳ ಸಂಘ ಮಾಡಿಕೊಂಡು ಮೂಲಸೌಕರ್ಯಗಳ ರಕ್ಷಣೆ ಮತ್ತು ನಿರ್ವಹಣೆಗೆ ಒತ್ತು ಕೊಡಬೇಕು. ಶಾಸಕ ಆನಂದ್ ಪುರಸಭೆ ಸದಸ್ಯರಾಗಿಯೂ ಅನುಭವ ಇರುವುದರಿಂದ ಸಮಸ್ಯೆಗಳ ಅರಿವು ಮತ್ತು ಪರಿಹಾರಕ್ಕೆ ಮಾರ್ಗೋಪಾಯವೂ ತಿಳಿದಿದೆ. ಬಡಾವಣೆ ನಿರ್ಮಿಸಲು ಮುಂದಾಗುವ ಭೂ ಮಾಲೀಕರೂ ಕಾನೂನು ಪಾಲಿಸಿ, ನಾಗರಿಕ ಸೌಲಭ್ಯಗಳನ್ನು ಕಲ್ಪಿಸಿ ಯೇ ನಿವೇಶನ ಮಾರಾಟ ಮಾಡಬೇಕು ಎಂದು ಕಿವಿಮಾತಿನ ಮೂಲಕ ಸಲಹೆ ನೀಡಿದರು. ಪುರಸಭೆ ಹಿರಿಯ ಸದಸ್ಯ ತೋಟದಮನೆ ಮೋಹನ್ ಮಾತನಾಡಿ, ಉಪೇಂದ್ರ ಬಡಾವಣೆಯಲ್ಲಿದ್ದ ಗಾಡಿ ಜಾಡಿನ ಹಳೆ ರಸ್ತೆ ಬಿಡಿಸಿಕೊಡುವಂತೆ ಶಾಸಕ ಆನಂದ್ ರವರಿಗೆ ನಿವಾಸಿಗರ ಪರವಾಗಿ ಮನವಿ ಮಾಡಿದರು. ಇದರಿಂದ ಮನೆಗಳಿಗೆ ಮಳೆ ನೀರು ನುಗ್ಗಿ ಹಾನಿಯಾಗುತ್ತಿರುವುದನ್ನು ತಪ್ಪಿಸಬೇಕು ಎಂದು ಕೋರಿ, ಬಡಾವಣೆ ನಿವಾಸಿಗರು ಸ್ಥಳೀಯ ಸಮಸ್ಯೆಗಳ ಕುರಿತು ಗಮನ ಸೆಳೆದರು. ಮಲ್ಲೇಶ್ವರ ಗ್ರಾಪಂ ಸದಸ್ಯ ವಸಂತ್ ಕುಮಾರ್, ದಾನಿ ಉಮೇಶ್, ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ದೊಣ್ಣೆ ಕೋರನಹಳ್ಳಿ ಉಮೇಶ್, ನಿವೃತ್ತ ಶಿಕ್ಷಕ ಚಂದ್ರಪ್ಪ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಂ.ಎಚ್.ಚಂದ್ರಪ್ಪ, ಎಪಿಎಂಸಿ ಮಾಜಿ ನಿರ್ದೇಶಕ ಯರದಕೆರೆ ಎಂ.ರಾಜಪ್ಪ, ತಾಲೂಕು ವೀರಶೈವ ಮಹಾ ಸಭೆ ಅಧ್ಯಕ್ಷ ಸಾಣೇಹಳ್ಳಿ ರೇಣುಕಾರಾಧ್ಯ, ನಾಗರತ್ನಮ್ಮ, , ಚನ್ನಪ್ಪ, ಮಂಜುನಾಥ್, ಸ್ಥಳೀಯ ನಿವಾಸಿ ಗಳಾದ ಬಸವರಾಜಪ್ಪ, ಓಂಕಾರಪ್ಪ, ಧರ್ಮರಾಜ್, ಕರಿಬಡ್ಡೆ ರಾಜು, ಪ್ರಕಾಶ್, ಗಿರೀಶ್, ಸಪ್ತಕೋಟಿ ಧನಂಜಯ, ಶಿವಕುಮಾರ್ ಮತ್ತಿತರರು ಇದ್ದರು.23ಕೆಕೆಡಿಯು1

ಕಡೂರು ಪಟ್ಟಣದ ಸಮೀಪದಲ್ಲಿರುವ ಮಹಾಲಕ್ಷ್ಮಿ ಲೇಔಟಿನ ಲ್ಲಿ ಸಿ.ಸಿ. ರಸ್ತೆ ನಿರ್ಮಾಣಕ್ಕೆ ಶಾಸಕ ಕೆ.ಎಸ್.ಆನಂದ್ ಭೂಮಿ ಪೂಜೆ ನೆರವೇರಿಸಿದರು. ಭಂಡಾರಿ ಶ್ರೀನಿವಾಸ್, ತೋಟದ ಮನೆ ಮೋಹನ್ , ದಾನಿ ಉಮೇಶ್, ದೊಣ್ಣೆಕೋರನಹಳ್ಳಿ ಉಮೇಶ್ ಮತ್ತಿತರರು ಇದ್ದರು.

PREV

Recommended Stories

ಕಾರು - ಬೈಕ್ ನಡುವೆ ಮುಖಾಮುಖಿ ಡಿಕ್ಕಿ: ಸವಾರ ಸಾವು
ಭೂ ಸ್ವಾಧೀನದ ಪರಿಹಾರ ಶೀಘ್ರ ನೀಡಿ ರಸ್ತೆ ವಿಸ್ತರಣೆ: ಎಂ.ಶ್ರೀನಿವಾಸ್